ಮಹಿಳೆಯ ದೃಷ್ಟಿ ಕುರುಡಾಗಿಸಿದ ಅತಿಯಾದ ಸ್ಮಾರ್ಟ್‌ಫೋನ್ ಬಳಕೆ : ಆದ್ರೆ ಮಹಿಳೆ ದೃಷ್ಟಿ ಹೇಗೆ ಮರಳಿ ಪಡೆದಳು ಎಂಬುದು ಇಲ್ಲಿದೆ

ಹೈದರಾಬಾದ್‌: ಸೋಶಿಯಲ್ ಮೀಡಿಯಾ ಬ್ರೌಸಿಂಗ್‌ ಸೇರಿದಂತೆ ಪ್ರತಿಯೊಂದು ವ್ಯಸನವೂ ಸಹ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟುಮಾಡಬಹುದು. ಹೈದರಾಬಾದ್ ಮೂಲದ ಮಹಿಳೆಯೊಬ್ಬರು ತಡವಾಗಿ ಏಳುವ ಹಾಗೂ ರಾತ್ರಿಯಿಡೀ ವೆಬ್ ಬ್ರೌಸಿಂಗ್ ಮಾಡುವ ಅಭ್ಯಾಸದಿಂದಾಗಿ ಅವಳು ದೃಷ್ಟಿಯನ್ನು ಕಳೆದುಕೊಳ್ಳುವಂತೆ ಮಾಡಿತು.
ಈ ಬಗ್ಗೆ ಸರಣಿ ಟ್ವೀಟ್‌ಗಳ ಮೂಲಕ ಹೈದರಾಬಾದ್ ವೈದ್ಯರೊಬ್ಬರು ಸ್ಮಾರ್ಟ್‌ಫೋನ್‌ಗಳ ಅತಿಯಾದ ಬಳಕೆಯು ತಮ್ಮ ರೋಗಿಗಳಲ್ಲಿ ಒಬ್ಬರು ಕುರುಡಾಗಲು ಹೇಗೆ ಕಾರಣವಾಯಿತು ಎಂಬುದನ್ನು ವಿವರಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ ಪೋಸ್ಟ್ ಮಾಡಿದ ಟ್ವೀಟ್‌ಗಳ ಸರಣಿಯಲ್ಲಿ, 30 ವರ್ಷದ ಮಹಿಳೆಯೊಬ್ಬರು ತಮ್ಮ ಸ್ಮಾರ್ಟ್‌ಫೋನ್‌ನ ಅತಿಯಾದ ಬಳಕೆಯಿಂದಾಗಿ ಹೇಗೆ ತೀವ್ರ ತೊಡಕುಗಳನ್ನು ಎದುರಿಸಿದರು ಎಂಬುದನ್ನು ವೈದ್ಯರಾದ ಡಾ. ಸುಧೀರಕುಮಾರ ವಿವರಿಸಿದ್ದಾರೆ. ಪೋಸ್ಟ್‌ನಲ್ಲಿ, ಹೈದರಾಬಾದ್ ಮಹಿಳೆ ತನ್ನ ಕೆಲಸವನ್ನು ತೊರೆದು ತನ್ನ ಸ್ಮಾರ್ಟ್‌ಫೋನ್‌ನಲ್ಲಿ ಗಂಟೆಗಟ್ಟಲೆ ಕಳೆಯಲು ಪ್ರಾರಂಭಿಸಿದ ನಂತರ ರೋಗಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿದವು ಎಂದು ವೈದ್ಯರು ಉಲ್ಲೇಖಿಸಿದ್ದಾರೆ.
ಸ್ಮಾರ್ಟ್‌ಫೋನ್‌ಗಳು ದೃಷ್ಟಿಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ…?
“30 ವರ್ಷ ವಯಸ್ಸಿನ ಮಂಜು ಎಂಬ ಮಹಿಳೆ ಒಂದೂವರೆ ವರ್ಷಗಳಿಂದ ದೃಷ್ಟಿ ದೋಷದಲ್ಲಿ ತೀವ್ರ ತರಹದ ತೊಂದರೆ ಹೊಂದಿದ್ದರು. ಇದರಲ್ಲಿ ಫ್ಲೋಟರ್‌ಗಳು, ಪ್ರಕಾಶಮಾನವಾದ ಬೆಳಕಿನ ಹೊಳಪುಗಳು, ಡಾರ್ಕ್ ಝಿಗ್-ಜಾಗ್ ಲೈನ್‌ಗಳು ಮತ್ತು ಕೆಲವೊಮ್ಮೆ ವಸ್ತುಗಳನ್ನು ನೋಡಲು ಅಥವಾ ಕೇಂದ್ರೀಕರಿಸಲು ಅವರಿಗೆ ಅಸಮರ್ಥತೆ ಕಂಡುಬಂದಿದೆ” ಎಂದು ಡಾ.ಕುಮಾರ ಅವರು ಬರೆದಿದ್ದಾರೆ.
“ಹಲವಾರು ಸೆಕೆಂಡುಗಳ ಕಾಲ ಏನೂ ಕಾಣದ ಕ್ಷಣಗಳು ಸಹ ಅವಳಿಗೆ ಇದ್ದವು. ಇದು ಹೆಚ್ಚಾಗಿ ರಾತ್ರಿಯಲ್ಲಿ ಅವಳು ವಾಶ್‌ರೂಂಗೆ ಎದ್ದಾಗ ಸಂಭವಿಸಿದೆ. ಆಕೆಯನ್ನು ಕಣ್ಣಿನ ತಜ್ಞರು ತಪಾಸಣೆ ಮಾಡಿದರು ಮತ್ತು ವಿವರವಾದ ತಪಾಸಣೆಯ ನಂತರ ಕಣ್ಣುಗಳು ಸಾಮಾನ್ಯವಾಗಿವೆ ಎಂದು ಕಂಡುಬಂದಿದೆ. ಅವಳನ್ನು ತಮಗೆ ರೆಫರೆನ್ಸ್‌ ಮಾಡಲಾಯಿತು ಎಂದು ಡಾ.ಕುಮಾರ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ : 1ನೇ ಹಂತದಲ್ಲಿ 62.37%ರಷ್ಟು ಮತದಾನ ; 2019ರ ಮತದಾನದ ಪ್ರಮಾಣಕ್ಕಿಂತ ಕಡಿಮೆ

ತಾನು ಈ ಪ್ರಕರಣವನ್ನು ಪರಿಶೀಲಿಸಿದೆ ಮತ್ತು ಮಹಿಳೆ ತಮ್ಮ ವಿಕಲಾಂಗ ಮಗುವನ್ನು ನೋಡಿಕೊಳ್ಳಲು ಕೆಲಸ ತೊರೆದ ನಂತರ ರೋಗಲಕ್ಷಣಗಳು ಪ್ರಾರಂಭವಾದವು ಎಂದು ವೈದ್ಯರು ಹೇಳಿದ್ದಾರೆ. ವೃತ್ತಿಯಲ್ಲಿ ಬ್ಯೂಟಿಷಿಯನ್ ಆಗಿರುವ ಮಹಿಳೆ ತನ್ನ ಸ್ಮಾರ್ಟ್‌ಫೋನ್ ಅನ್ನು ಅತಿಯಾಗಿ ಬಳಸಲು ಪ್ರಾರಂಭಿಸಿದ್ದಳು ಮತ್ತು ಇದು ಫೋನ್‌ನಲ್ಲಿ ಬ್ರೌಸಿಂಗ್ ಅನ್ನು ಸಹ ಒಳಗೊಂಡಿತ್ತು, ರಾತ್ರಿಯಲ್ಲಿ ದೀಪಗಳು ಆಫ್ ಆದ 2 ಗಂಟೆಗಳಿಗೂ ಹೆಚ್ಚು ಕಾಲ ನಂತರವೂ ನೋಡುತ್ತಿದ್ದಳು. “ರೋಗ ಏನೆಂಬುದು ಈಗ ಸ್ಪಷ್ಟವಾಗಿದೆ. ಅವಳು ಸ್ಮಾರ್ಟ್‌ಫೋನ್ ವಿಷನ್ ಸಿಂಡ್ರೋಮ್(SVS)ನಿಂದ ಬಳಲುತ್ತಿದ್ದಳು. ಕಂಪ್ಯೂಟರ್‌ಗಳು, ಸ್ಮಾರ್ಟ್‌ಫೋನ್‌ಗಳು ಅಥವಾ ಟ್ಯಾಬ್ಲೆಟ್‌ಗಳಂತಹ ಸಾಧನಗಳ ದೀರ್ಘಾವಧಿಯ ಬಳಕೆಯು ಕಂಪ್ಯೂಟರ್ ವಿಷನ್ ಸಿಂಡ್ರೋಮ್ (CVS) ಅಥವಾ ಡಿಜಿಟಲ್ ವಿಷನ್ ಸಿಂಡ್ರೋಮ್”ಎಂದು ಕರೆಯಲ್ಪಡುವ ವಿವಿಧ ಕಣ್ಣಿನ-ಸಂಬಂಧಿತ ನಿಷ್ಕ್ರಿಯಗೊಳಿಸುವ ಲಕ್ಷಣಗಳನ್ನು ಉಂಟುಮಾಡಬಹುದು ಎಂದು ಡಾ. ಕುಮಾರ ಬರೆದಿದ್ದಾರೆ.

ಮಹಿಳೆಗೆ ತನ್ನ ಸ್ಮಾರ್ಟ್‌ಫೋನ್‌ಗಳನ್ನು ನೋಡುವುದನ್ನು ಕಡಿಮೆ ಮಾಡಬೇಕು ಎಂದು ಸೂಚಿಸಿದ ನಂತರ, ಬೇರೆ ಯಾವುದೇ ಔಷಧಿಗಳನ್ನು ಬರೆದುಕೊಡುವುದಿಲ್ಲ ಎಂದು ಹೇಳಿದೆ ಎಂದು ಅವರು ಹೇಳಿದ್ದಾರೆ. ಮಂಜು ಅದನ್ನು ಪಾಲಿಸಿದಳು ಮತ್ತು ಅನಿವಾರ್ಯ ಸಂದರ್ಭ ಹೊರತುಪಡಿಸಿ ಸ್ಮಾರ್ಟ್‌ಫೋನ್ ನೋಡುವುದನ್ನು ನಿಲ್ಲಿಸಿದಳು. ಮತ್ತು “1 ತಿಂಗಳ ಚಿಕಿತ್ಸೆ ನಂತರ ಮಂಜು ದೃಷ್ಟಿ ಸಂಪೂರ್ಣವಾಗಿ ಸುಧಾರಿಸಿತ್ತು. 18 ತಿಂಗಳಿಂದ ಇದ್ದ ದೃಷ್ಟಿ ದೋಷವು ದೂರವಾಯಿತು. ಈಗ, ಸಾಮಾನ್ಯ ದೃಷ್ಟಿ ಹೊಂದಿದ್ದಳು. ಅಲ್ಲದೆ, ರಾತ್ರಿ ವೇಳೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಅವಳ ಕ್ಷಣಿಕ ದೃಷ್ಟಿ ನಷ್ಟವೂ ನಿಂತುಹೋಯಿತು ಎಂದು ವೈದ್ಯರು ಹೇಳಿದ್ದಾರೆ.
ಎಸ್‌ವಿಎಸ್‌ (SVS) ಮತ್ತು ಇತರ ದೃಷ್ಟಿ-ಸಂಬಂಧಿತ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡಲು ವೈದ್ಯರು ಕೆಲವು ಮಾರ್ಗಗಳನ್ನು ಸೂಚಿಸಿದ್ದಾರೆ.
ಡಿಜಿಟಲ್ ಸಾಧನಗಳ ನಿರಂತರ ಬಳಕೆಯನ್ನು ತಪ್ಪಿಸಿ. ಗ್ಯಾಜೆಟ್ ಬಳಸುವಾಗ 20 ಅಡಿ ದೂರದಲ್ಲಿರುವ ಯಾವುದನ್ನಾದರೂ ನೋಡಲು ಪ್ರತಿ 20 ನಿಮಿಷಗಳಿಗೊಮ್ಮೆ 20 ಸೆಕೆಂಡುಗಳ ವಿರಾಮ ತೆಗೆದುಕೊಳ್ಳಿ ಎಂದು ಹೇಳಿದ್ದಾರೆ. ವೈದ್ಯರು ಇದನ್ನು “20-20-20 ನಿಯಮ” ಎಂದು ಉಲ್ಲೇಖಿಸುತ್ತಾರೆ.

ಪ್ರಮುಖ ಸುದ್ದಿ :-   ಉತ್ತಮ ಪ್ರತಿಕ್ರಿಯೆ, ಜನರು ದಾಖಲೆ ಸಂಖ್ಯೆಯಲ್ಲಿ ಎನ್‌ಡಿಎಗೆ ಮತ ಹಾಕಿದ್ದಾರೆ : ಲೋಕಸಭೆ ಚುನಾವಣೆ 1ನೇ ಹಂತದ ಮತದಾನದ ಬಗ್ಗೆ ಪ್ರಧಾನಿ ಮೋದಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement