ಜಮೀಯತ್ ಮುಖ್ಯಸ್ಥ ಮಹಮೂದ್ ಮದನಿಯ ‘ಓಂʼ -ಅಲ್ಲಾ’ ಹೇಳಿಕೆ ವಿವಾದ; ವೇದಿಕೆಯಿಂದ ಕೆಳಗಿಳಿದುಹೋದ ಧಾರ್ಮಿಕ ಮುಖಂಡರು

ನವದೆಹಲಿ: ಭಾರತದ ಮುಸ್ಲಿಮರ ಅತಿದೊಡ್ಡ ಸಂಘಟನೆಗಳಲ್ಲಿ ಒಂದಾದ ‘ಜಮೀಯತ್ ಉಲೇಮಾ-ಎ-ಹಿಂದ್’ ಮುಖ್ಯಸ್ಥ ಮೌಲಾನಾ ಅರ್ಷದ್ ಮಹಮೂದ್ ಮದನಿ ಮತ್ತೊಮ್ಮೆ ವಿವಾದ ಸೃಷ್ಟಿಸಿದ್ದಾರೆ. ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ಜಮೀಯತ್ ಉಲಮಾ-ಇ-ಹಿಂದ್‌ನ ಸಮಗ್ರ ಅಧಿವೇಶನ ಉದ್ಘಾಟಿಸಿ ಮಾತನಾಡಿದ ಮೌಲಾನಾ ಮದನಿ, ಹೇಳಿಕೆ ಮೂಲಕ ವಿವಾದ ಸೃಷ್ಟಿಸಿದ್ದು, ಮದನಿಯ ಈ ಹೇಳಿಕೆಗೆ ಜೈನ, ಹಿಂದೂ, ಸಿಖ್‌ ಸೇರಿದಂತೆ ಹಲವು ಧರ್ಮಗಳ ಧಾರ್ಮಿಕ ಗುರುಗಳು ಆಕ್ಷೇಪ ವ್ಯಕ್ತಪಡಿಸಿ ಕಾರ್ಯಕ್ರಮ ಬಹಿಷ್ಕರಿಸಿ ವೇದಿಕೆಯಿಂದ ಕೆಳಗಿಳಿದು ಹೋಗಿದ್ದಾರೆ. ಒಗ್ಗೂಡಿಸುವ ಹೆಸರಿನಲ್ಲಿ ಕಾರ್ಯಕ್ರಮ ಮಾಡುತ್ತಿರುವಾಗ ಇದರಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ಏಕೆ ನೀಡಲಾಗುತ್ತಿದೆ ಎಂದು ಲೋಕೇಶ್ ಮುನಿ ಈ ವೇಳೆ ಪ್ರಶ್ನಿಸಿದರು. ಇಂತಹ ಹೇಳಿಕೆಗೆ ಸಮರ್ಥನೆ ಎಲ್ಲಿದೆ? ಮುನಿ ಲೋಕೇಶ್ ವೇದಿಕೆಯಲ್ಲಿ ಹೇಳಿದರು. ಇದೇ ವೇಳೆ ಮದನಿ ಹೇಳಿಕೆಯಿಂದ ಅಸಮಾಧಾನಗೊಂಡ ಬಹಳ ಸಂತರು ವೇದಿಕೆಯಿಂದ ನಿರ್ಗಮಿಸಿದರು.
ಮನುವನ್ನು ‘ಆದಂ’ ಎಂದು ಬಣ್ಣಿಸಿದ ಮೌಲಾನಾ ಮದನಿ, ನಮ್ಮ ಧರ್ಮದಲ್ಲಿ ಏಕೆ ಇಷ್ಟೊಂದು ಹಸ್ತಕ್ಷೇಪ ಮಾಡಲಾಗುತ್ತಿದೆ? ಎಂದು ಪ್ರಶ್ನಿಸಿದ್ದಾರೆ. ನಿಮ್ಮ ಪೂರ್ವಜ ಮನು, ಅಂದರೆ ಆದಂ ಎಂದು ಅವರು ಹೇಳಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
‘ಓಂ’ ಮತ್ತು ‘ಅಲ್ಲಾ’ ಒಂದೇ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.
“ರಾಮ ಮತ್ತು ಬ್ರಹ್ಮನ ಅಸ್ತಿತ್ವದ ಮೊದಲು ಜನರು ಯಾರನ್ನು ಪೂಜಿಸುತ್ತಿದ್ದರು ಎಂದು ನಾನು ಒಬ್ಬ ಸಂತನನ್ನು ಕೇಳಿದೆ, ಅದಕ್ಕೆ ಅವರು ‘ಓಂ’ ಎಂದು ಪ್ರತಿಕ್ರಿಯಿಸಿದರು ಎಂದು ಹೇಳಿದ್ದಾರೆ.ಮುಂದೆ, “ಓಂ ಎಂದರೆ ಅಲ್ಲಾ, ದೇವರು ಮತ್ತು ಭಗವಂತ, ಗಾಳಿ ಎಂದು ಉಲ್ಲೇಖಿಸಲಾಗುತ್ತದೆ ಎಂದು ಮದನಿ ಹೇಳಿದರು.

ಪ್ರಮುಖ ಸುದ್ದಿ :-   ಉಗ್ರರ ದಾಳಿಯಲ್ಲಿ ಓರ್ವ ವಾಯುಪಡೆ ಸಿಬ್ಬಂದಿ ಹುತಾತ್ಮ, 5 ಮಂದಿಗೆ ಗಾಯ

ಜಮೀಯತ್ ಉಲಮಾ-ಇ-ಹಿಂದ್ ಅಧ್ಯಕ್ಷ ಮಹಮೂದ್ ಮದನಿ ಭಾನುವಾರ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ವಿರುದ್ಧ ವಾಗ್ದಾಳಿ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಮೋಹನ್ ಭಾಗವತ್ ಅವರಷ್ಟೇ ಭಾರತವೂ ನನಗೂ ಸೇರಿದೆ ಎಂದು ಮಹಮೂದ್ ಮದನಿ ಶನಿವಾರ ಹೇಳಿದ್ದಾರೆ.
“ಭಾರತ ನಮ್ಮ ದೇಶ, ಈ ದೇಶವು ನರೇಂದ್ರ ಮೋದಿ ಮತ್ತು ಮೋಹನ್ ಭಾಗವತ್‌ಗೆ ಸೇರಿದ್ದಷ್ಟು ಮಹಮೂದ್ ಮದನಿಗೂ ಸೇರಿದೆ. ಮಹಮೂದ್ ಮದನಿ ಅವರಿಗಿಂತ ಒಂದು ಇಂಚು ಮುಂದಿಲ್ಲ ಅಥವಾ ಅವರು ಮಹಮೂದ್‌ಗಿಂತ ಒಂದು ಇಂಚು ಮುಂದಿಲ್ಲ ಎಂದು ಹೇಳಿದರು. ನಂತರ ಮಾತನಾಡಿದ ಅವರು, ಇಸ್ಲಾಂ ಈ ದೇಶದ ಅತ್ಯಂತ ಪುರಾತನ ಧರ್ಮವಾಗಿದೆ.

ಈ ಭೂಮಿ ಮುಸ್ಲಿಮರ ಮೊದಲ ತಾಯ್ನಾಡು. ಇಸ್ಲಾಂ ಹೊರಗಿನಿಂದ ಬಂದ ಧರ್ಮ ಎಂದು ಹೇಳುವುದು ಸಂಪೂರ್ಣವಾಗಿ ತಪ್ಪು ಮತ್ತು ಆಧಾರರಹಿತವಾಗಿದೆ. ಇಸ್ಲಾಂ ಧರ್ಮವು ಎಲ್ಲಾ ಧರ್ಮಗಳಿಗಿಂತ ಹಳೆಯ ಧರ್ಮವಾಗಿದೆ ಹಾಗೂ ಈ ದೇಶದ ಅತ್ಯಂತ ಪುರಾತನ ಧರ್ಮವಾಗಿದೆ ಎಂದು ಮದನಿ ಹೇಳಿದರು. ಹಿಂದೂಗಳು, ಮುಸ್ಲಿಮರು, ಸಿಖ್ಖರು, ಕ್ರಿಶ್ಚಿಯನ್ನರು – ಹೀಗೆ ಅವರೆಲ್ಲರಿಗೂ ಆದಮ್ ಮತ್ತು ಈವ್ ಮಾತ್ರ ಇದ್ದಾರೆ ಎಂದು ಮದನಿ ಪ್ರತಿಪಾದಿಸಿದರು.
ಜಮಿಯತ್ ಉಲಮಾ-ಇ-ಹಿಂದ್ ಮುಖ್ಯಸ್ಥರು ತಾವು ಬಲವಂತದ ಧಾರ್ಮಿಕ ಮತಾಂತರಕ್ಕೆ ವಿರುದ್ಧವಾಗಿರುವುದಾಗಿ ಹೇಳಿದರು, ಈಗ ಸ್ವಯಂಪ್ರೇರಣೆಯಿಂದ ತಮ್ಮ ಧರ್ಮವನ್ನು ಪರಿವರ್ತಿಸುವ ಜನರನ್ನು ಸಹ ಸುಳ್ಳು ಆರೋಪದ ಮೇಲೆ ಜೈಲಿಗೆ ಕಳುಹಿಸಲಾಗುತ್ತಿದೆ ಎಂದು ಆರೋಪಿಸಿದರು.
ಜಮಿಯತ್ ಉಲಾಮಾ-ಇ-ಹಿಂದ್ ಪ್ರಕಾರ, ಏಕರೂಪ ನಾಗರಿಕ ಸಂಹಿತೆ, ಧಾರ್ಮಿಕ ಸ್ವಾತಂತ್ರ್ಯ ಮತ್ತು ಮುಸ್ಲಿಂ ವೈಯಕ್ತಿಕ ಕಾನೂನು ಮತ್ತು ಮದರಸಾಗಳ ಸ್ವಾಯತ್ತತೆ ಸಮಾವೇಶದಲ್ಲಿ ಚರ್ಚಿಸಲಾಗುವ ಕೆಲವು ವಿಷಯಗಳಲ್ಲಿ ಸೇರಿವೆ.

ಪ್ರಮುಖ ಸುದ್ದಿ :-   ಬಿಜೆಪಿ ಸೇರಿದ ದೆಹಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅರವಿಂದರ್ ಸಿಂಗ್ ಲವ್ಲಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement