ಮಹಿಳಾ ಟಿ20 ವಿಶ್ವಕಪ್ : ಪಾಕಿಸ್ತಾನದ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯಗಳಿಸಿದ ಭಾರತ ವನಿತೆಯರು

 ನವದೆಹಲಿ: ಟಿ-20 ಮಹಿಳಾ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಇಂದು ಭಾನುವಾರ ನಡೆದ ಭಾರತ ಹಾಗೂ ಪಾಕಿಸ್ತಾನದ ನಡುವಿನ ಪಂದ್ಯದಲ್ಲಿ ಭಾರತ ತಂಡದ ಜೆಮಿಮಾ ರಾಡ್ರಿಗಸ್ ಅಜೇಯ (53*) ಮತ್ತು ರಿಚಾ ಘೋಷ್ ಅಜೇಯ (31*) ಅವರಿಬ್ಬರ ನಿರ್ಣಾಯಕ 58 ರನ್‌ಗಳ ಜೊತೆಯಾಟದ ನೆರವಿನಿಂದ ಭಾರತವು ಪಾಕಿಸ್ತಾನವನ್ನು 7 ವಿಕೆಟ್‌ಗಳಿಂದ ಸೋಲಿಸಿತು.
ನಿಗಿದತ 150 ರನ್ ಗುರಿಯನ್ನು ಬೆನ್ನಟ್ಟಿದ ಭಾರತವು ಇನ್ನೂ ಒಂದು ಓವರ್ ಬಾಕಿ ಇರುವಂತೆಯೇ ಗುರಿ ತಲುಪಿ ಗೆಲುವಿನ ನಗೆ ಬೀರಿತು. ಪಾಕಿಸ್ತಾನವು ಭಾರತಕ್ಕೆ ಬ್ಯಾಟ್ ಮತ್ತು ಬಾಲ್ ಎರಡರಿಂದಲೂ ಕಠಿಣ ಹೋರಾಟ ನೀಡಿತು. ಆದರೆ ಕೊನೆಯ ನಾಲ್ಕು ಓವರ್‌ಗಳಲ್ಲಿ ಭಾರತದ ಬ್ಯಾಟರುಗಳು ಪಾಕಿಸ್ತಾನದ ಬೌಲರ್‌ಗಳಿಗೆ ನೀರಿಳಿಸಿದರು. ರೀಚಾ ಘೋಷ್ ಕೆಲವು ಶಕ್ತಿಶಾಲಿ ಹೊಡೆತಗಳನ್ನು ಬಾರಿಸಿ ಭಾರತಕ್ಕೆ ಭರ್ಜರಿ ಗೆಲುವು ತಂದುಕೊಡಲು ನೆರವಾದರು. ಅಂತಿಮವಾಗಿ ಭಾರತವು 7 ವಿಕೆಟ್‌ಗಳಿಂದ ಜಯಗಳಿಸಿತು. ಐಮನ್ ಅನ್ವರ್‌ನಿಂದ ಬೌಲಿಂಗ್‌ನಲ್ಲಿ ರೀಚಾ ಘೋಷ್‌ಗೆ ಮೂರು ಬೌಂಡರಿಗಳನ್ನು ಹೊಡೆದು ಪಂದ್ಯವನ್ನು ಭಾರತದ ಪರವಾಗಿ ವಾಲುವಂತೆ ಮಾಡಿದರು. ಆ ಓವರ್‌ನಲ್ಲಿ 14 ರನ್‌ಗಳು ಬಂದವು ಮತ್ತು ಅಗತ್ಯವಿರುವ ರನ್ ರೇಟ್‌ ಕಡಿಮೆಯಾಯಿತು. ನಂತರ ಜೆಮಿಮಾ ರೋಡ್ರಿಗಸ್ ಭಾರತಕ್ಕೆ ಬ್ಯಾಕ್-ಟು-ಬ್ಯಾಕ್ ಬೌಂಡರಿಗಳನ್ನು ಬಾರಿಸಿದರು. ಜೆಮಿಮಾ ರಾಡ್ರಿಗಸ್‌ ಅವರು ಪಾಕಿಸ್ತಾನದ ಫಾತಿಮಾ ಸನಾ ಅವರ ಬೌಲಿಂಗ್‌ನಲ್ಲಿ ಮೂರು ಬೌಂಡರಿಗಳಿಗೆ ಹೊಡೆದು ಭಾರತವು ಪಾಕಿಸ್ತಾನದ ವಿರುದ್ಧ 7 ವಿಕೆಟ್‌ಗಳ ನಿರ್ಣಾಯಕ ವಿಜಯವನ್ನು ಸಾಧಿಸಲು ಸಹಾಯ ಮಾಡಿದರು.
ಆರಂಭದಲ್ಲಿ ಶಫಾಲಿ ವರ್ಮಾ 33 ರನ್‌ಗಳಿಸಿ ಭಾರತಕ್ಕೆ ಉತ್ತಮ ಆರಂಭ ನೀಡಿದರು. ಸ್ಮೃತಿ ಮಂಧಾನ ಅನುಪಸ್ಥಿತಿಯಲ್ಲಿ ಬಡ್ತಿ ಪಡೆದ ಯಾಸ್ತಿಕಾ ಭಾಟಿಯಾ ಅವರು ಶೆಫಾಲಿ ವರ್ಮಾ ಅವರೊಂದಿಗೆ ಮೊದಲ ವಿಕೆಟ್‌ಗೆ 38 ರನ್ ಸೇರಿಸಿದರು. ಅವರನ್ನು ಸಾದಿಯಾ ಇಕ್ಬಾಲ್ ಔಟ್ ಮಾಡಿದರು.
ಮೊದಲು ಇದಕ್ಕೂ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಪಾಕ್ ನಾಯಕ ಬಿಸ್ಮಾ ಮರೂಫ್ ಅರ್ಧಶತಕ ಗಳಿಸಿ ನಾಯಕತ್ವದ ಆಟ ಆಡಿದರು. ಮರೂಫ್ ಅವರನ್ನು ಆಯೇಷಾ ನಸೀಮ್ ಜೊತೆಗೂಡಿಸಿದರು, ಅವರ ಜೋಡಿಯು ಪಾಕಿಸ್ತಾನವನ್ನು ತಮ್ಮ 20 ಓವರ್‌ಗಳಲ್ಲಿ ಒಟ್ಟು 149/4 ವರೆಗೆ ಒಯ್ದಿತು. ಭಾರತದ ಪರ ರಾಧಾ ಯಾದವ್ ಎರಡು ವಿಕೆಟ್ ಪಡೆದರು.
ಭಾರತ (151/3), ಪಾಕಿಸ್ತಾನ (149/4) ಭಾರತಕ್ಕೆ 7 ವಿಕೆಟ್‌ಗಳಿಂದ ಜಯ. ಭಾರತದ ಜೆಮಿಮಾ ರಾಡ್ರಿಗಸ್‌ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಪ್ರಮುಖ ಸುದ್ದಿ :-   ಉತ್ತಮ ಪ್ರತಿಕ್ರಿಯೆ, ಜನರು ದಾಖಲೆ ಸಂಖ್ಯೆಯಲ್ಲಿ ಎನ್‌ಡಿಎಗೆ ಮತ ಹಾಕಿದ್ದಾರೆ : ಲೋಕಸಭೆ ಚುನಾವಣೆ 1ನೇ ಹಂತದ ಮತದಾನದ ಬಗ್ಗೆ ಪ್ರಧಾನಿ ಮೋದಿ

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement