ಬೆಳಗಾವಿ: ನೇಣು ಬಿಗಿದುಕೊಂಡು ಕೆಎಎಸ್ ಅಧಿಕಾರಿ ಪತಿ ಆತ್ಮಹತ್ಯೆ

ಬೆಳಗಾವಿ : ಹಿಡಕಲ್ ಡ್ಯಾಮ್ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ರೇಷ್ಮಾ ತಾಳಿಕೋಟಿ ಅವರ ಪತಿ ಸೋಮವಾರ ಮಧ್ಯಾಹ್ನ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಎಫ್‌ ಡಿಎ (ಕಂದಾಯ ನಿರೀಕ್ಷಕ) ಜಾಫರ್ ಪೀರಜಾದೆ ಎಂಬುವವರು ಆತ್ಮಹತ್ಯೆಗೆ ಶರಣಾದವರು. ಅಣ್ಣನ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು ಘಟನೆಗೆ ಕಾರಣ ತಿಳಿದು ಬಂದಿಲ್ಲ. ಸಂಗಮೇಶ ನಗರದಲ್ಲಿರುವ ಸರ್ಕಾರಿ ತರಬೇತಿ ಸಂಸ್ಥೆಯಲ್ಲಿ ಜಾಫರ್ ಪೀರಜಾದೆ ಕಂದಾಯ ನಿರೀಕ್ಷಕರಾಗಿದ್ದರು. ಪತ್ನಿ ರೇಷ್ಮಾ ತಾಳಿಕೋಟಿ ಬೆಂಗಳೂರಿಗೆ ತೆರಳಿದ್ದಾರೆ ಎನ್ನಲಾಗಿದೆ. ಖಾನಾಪುರ ತಹಶೀಲ್ದಾರ್ ಆಗಿದ್ದ ರೇಷ್ಮಾ ಅವರು ಇತ್ತೀಚಿಗಷ್ಟೇ ಹಿಡಕಲ್ ಡ್ಯಾಮ್ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದರು.
39 ವರ್ಷ ವಯಸ್ಸಿನ ಜಾಫರ್ ಹಲವು ವರ್ಷಗಳಿಂದ ಬೆಳಗಾವಿಯ ತಹಶೀಲ್ದಾರ್ ಕಚೇರಿಯಲ್ಲಿ ಸೇವೆ ಸಲ್ಲಿಸಿ ಇತ್ತೀಚಿಗಷ್ಟೇ ಬಡ್ತಿ ಪಡೆದು ಕಂದಾಯ ನಿರೀಕ್ಷಕರಾಗಿದ್ದರು. ಈ ಕುರಿತು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement