ತಿಪಟೂರು: ಬಟ್ಟೆ ತೊಳೆಯಲು ಹೋಗಿದ್ದ ಅತ್ತೆ- ಸೊಸೆ ನೀರಲ್ಲಿ ಮುಳುಗಿ ಸಾವು

ತುಮಕೂರು: ಬಟ್ಟೆ ತೊಳೆಯಲು ಹೋಗಿದ್ದ ಅತ್ತೆ- ಸೊಸೆ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ತುಮಕೂರು ಜಿಲ್ಲೆಯ ತಿಪಟೂರಿನ ಟಿ.ಎಂ. ಮಂಜುನಾಥ ನಗರದಲ್ಲಿ ನಡೆದ ವರದಿಯಾಗಿದೆ.
ಸೋಮವಾರ (ನಿನ್ನೆ) ಮಧ್ಯಾಹ್ನದ ವೇಳೆ ಮನೆಯಿಂದ ಬಟ್ಟೆಗಳನ್ನು ತುಂಬಿಕೊಂಡು ಕಟ್ಟೆಯ ಬಳಿ ತೊಳೆದುಕೊಂಡು ಬರಲು ಅತ್ತೆ- ಸೊಸೆ ಹೋಗಿದ್ದಾರೆ. ಆದರೆ, 3 ಗಂಟೆ ಸುಮಾರಿಗೆ ಸೊಸೆ ನೀರಿಗೆ ಬಿದ್ದಿದ್ದಾರೆ. ಸೊಸೆಯನ್ನು ರಕ್ಷಣೆ ಮಾಡಲು ಮುಂದಾದ ಅತ್ತೆಯೂ ಕೂಡ ನೀರಿನಲ್ಲಿ ಮುಳುದ್ದಾರೆ. ಇಬ್ಬರಿಗೂ ಈಜು ಬರುತ್ತಿರಲಿಲ್ಲ. ಹೀಗಾಗಿ, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಮೃತರನ್ನು ಅತ್ತೆ ಅನಸೂಯಮ್ಮ(50) ಸೊಸೆ ಚಂದ್ರಿಕಾ(25) ಎಂದು ಗುರುತಿಸಲಾಗಿದೆ. ತಿಪಟೂರು ಪಟ್ಟಣದ ಟಿ.ಎಂ ಮಂಜುನಾಥ ನಗರದ ಹಿಂಭಾಗದಲ್ಲಿರುವ ಕಟ್ಟೆಯಲ್ಲಿ ಬಟ್ಟೆ ತೊಳೆಯಲು ಹೋದಾಗ ಈ ದುರ್ಘಟನೆ ಸಂಭವಿಸಿದೆ. ಬಟ್ಟೆ ತೊಳೆಯಲು ಹೋದವರು ಬಹಳ ಹೊತ್ತಾದರೂ ಬಂದಿಲ್ಲವೆಂದು ಮನೆಯವರು ಸ್ಥಳಕ್ಕೆ ಬಂದು ನೋಡಿದಾಗ. ಕಟ್ಟೆಯ ಬಳಿ ಬಟ್ಟೆಗಳು ಬಿದ್ದಿದ್ದು, ಅತ್ತೆ- ಸೊಸೆ ಮಾತ್ರ ಕಾಣಿಸಲಿಲ್ಲ. ನೀರಿನಲ್ಲಿ ಮುಳುಗಿರಬಹುದು ಎಂಬ ಅನುಮಾನ ಬಂದಿದೆ. ನಂತರ ಅಗ್ನಿಶಾಮಕದಳದ ಸಿಬ್ಬಂದಿ ಅತ್ತೆ- ಸೊಸೆಯ ಮೃತ ದೇಹಗಳನ್ನು ಹೊರ ತೆಗೆದಿದ್ದಾರೆ. ತಿಪಟೂರಿನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಮುಖ ಸುದ್ದಿ :-   ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ; ಸಿಎಂ ಡಿಕೆ ಶಿವಕುಮಾರ ಘೋಷಣೆ

 

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement