
ಎಲ್ಲ ನಗದು, ಆಭರಣಗಳು ಮತ್ತು ಇತರ ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾದ ವಧುವಿನ ಕತೆಯನ್ನು ಸಿನೆಮಾದಲ್ಲಿ ನೋಡಿರುತ್ತೇವೆ. ಈಗ ಅದು ನಿಜ ಜೀವನದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ನಗದು, ಆಭರಣಗಳು ಮತ್ತು ಇತರ ಬೆಲೆಬಾಳುವ ವಸ್ತುಗಳೊಂದಿಗೆ ವಧು ಪರಾರಿಯಾಗಿದ್ದಾಳೆ.
ಆದರೆ ಇಲ್ಲಿ ಕಿಲಾಡಿ ವಧುವೊಬ್ಬಳು ವರನ ಮನೆಯವರಿಗೆಲ್ಲ ಅಮಲು ಪದಾರ್ಥ ನೀಡಿ ಪರಾರಿಯಾಗಿದ್ದಾಳೆ. ಕಾರಣ ಕೇಳಿದ್ರೆ ಬೆಚ್ಚಿಬೀಳ್ತೀರಾ. ನವ ವಧುವೊಬ್ಬಳು ತನ್ನ ಮದುವೆ ಆದ ಬಳಿಕ ವರನ ಮನೆಗೆ ಹೋಗುತ್ತಿದ್ದ ವೇಳೆ ಆತನ ಕುಟುಂಬದವರಿಗೆ ಅಮಲು ಪದಾರ್ಥ ನೀಡಿ ಚಿನ್ನಾಭರಣದೊಂದಿಗೆ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ವಧು ತನ್ನ ಹೊಸ ವರನೊಂದಿಗೆ ಜೈಪುರ ಮಾರ್ಗವಾಗಿ ಮರುಧರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿರುವಾಗ ಈ ಕೃತ್ಯ ಎಸಗಿದ್ದಾಳೆ.
ಮಾಧ್ಯಮ ವೆಬ್‌ಸೈಟ್‌ಗಳ ವರದಿಗಳ ಪ್ರಕಾರ, ವರ (ಅಂಕಿತ್) ತನ್ನ ಕುಟುಂಬದೊಂದಿಗೆ ಉತ್ತರ ಪ್ರದೇಶಕ್ಕೆ ಗುಡಿಯಾ ಎಂಬವರನ್ನು ಪರಿಚಯಸ್ಥರ ಮನೆಯಲ್ಲಿ ಮದುವೆಯಾಗಲು ಬಂದಿದ್ದರು. ಉತ್ತರಪ್ರದೇಶದ ಚಂದೌಲಿ ಜಿಲ್ಲೆಯ ಬಲುವಾ ಪ್ರದೇಶದ ಮತಿಯಾರ ಗ್ರಾಮದಲ್ಲಿ ಮದುವೆ ನಡೆದಿದೆ. ಫೆಬ್ರವರಿ 6 ಮದುವೆಯ ದಿನವಾಗಿತ್ತು.

ಮದುವೆಯ ದಿನ, ನವವಿವಾಹಿತರು ವಾರಾಣಸಿಗೆ ವರನ ಕುಟುಂಬ ಸದಸ್ಯರು ಮತ್ತು ವಧುವಿನ ಸಂಬಂಧಿ ನಗೀನಾ ಎಂಬವರೊಂದಿಗೆ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಿದರು. ನಂತರ ಅಲ್ಲಿಂದ ವಾರಣಾಸಿಯ ರೈಲು ನಿಲ್ದಾಣದಿಂದ ಅಜ್ಮೀರ್‌ಗೆ ರೈಲು ಹತ್ತಿದರು. ಅವರ ದಾರಿಯಲ್ಲಿ, ವಧುವಿನ ಪರಿಚಿತ ವ್ಯಕ್ತಿಗಳಲ್ಲಿ ಇನ್ನೊಬ್ಬರಾದ ಛೋಟು ಖಟ್ಕಾನಾ ಎಂಬವರು ಅವರೊಂದಿಗೆ ಸೇರಿಕೊಂಡರು. ಛೋಟು ಎಲ್ಲರಿಗೂ ಡ್ರೈ ಫ್ರೂಟ್ಸ್ ಮತ್ತು ಚಹಾ ತೆಗೆದುಕೊಂಡು ಅದರಲ್ಲಿ ಡ್ರಗ್ಸ್ ಬೆರೆಸಿ ವರ ಮತ್ತು ಅವರ ಕುಟುಂಬಕ್ಕೆ ನೀಡಿದರು. ಇದರ ಬಗ್ಗೆ ಏನೂ ಅರಿಯದ ವರನ ಕುಟುಂಬದವರು ಸೇವಿಸಿದ ನಂತರ ಪ್ರಜ್ಞಾಹೀನರಾಗಿ ಬಿದ್ದ ನಂತರ ನಂತರ ಮೂವರು ಎಲ್ಲಾ ಬೆಲೆಬಾಳುವ ವಸ್ತುಗಳನ್ನು ದೋಚಿಕೊಂಡು ಕಾನ್ಪುರ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ರೈಲಿನಿಂದ ಪರಾರಿಯಾಗಿದ್ದಾರೆ.
ವರನ ಕಡೆಯವರಿಗೆ ಎಚ್ಚರವಾದಾಗ ಎಲ್ಲ ಬೆಲೆ ಬಾಳುವ ವಸ್ತುಗಳು ನಾಪತ್ತೆಯಾಗಿದ್ದರು. ಹಾಗೂ ವಧುವೂ ನಾಪತ್ತೆಯಾಗಿದ್ದಳು. ನಂತರ ವರ ಇಟಾವಾದಲ್ಲಿನ ಸರ್ಕಾರಿ ರೈಲ್ವೆ ಪೊಲೀಸರಿಗೆ (ಜಿಆರ್‌ಪಿ) ದೂರು ಸಲ್ಲಿಸಿದರು. ಈ ಕುರಿತು ವಿಚಾರಿಸಲಾಗಿ ಇದು ವಧುವಿನ ಎರಡನೇ ಮದುವೆ ಎಂಬುದು ಗೊತ್ತಾಯಿತು.
ವರ ಮತ್ತು ಅವರ ಕುಟುಂಬಕ್ಕೆ ಮಾದಕ ದ್ರವ್ಯ ಕೊಟ್ಟ ನಂತರ, ಮೂವರು ಸಹಚರರಾದ ಗುಡಿಯಾ, ನಗೀನಾ ಮತ್ತು ಛೋಟು ರೈಲಿನಿಂದ ಇಳಿದು ಪ್ರಯಾಗರಾಜ್‌ನಿಂದ ಬಸ್‌ನಲ್ಲಿ ವಾರಣಾಸಿ ಕಡೆಗೆ ಹೊರಟರು. ಜಿಆರ್‌ಪಿ (GRP) ವಾರಾಣಸಿ ನಿಲ್ದಾಣದಲ್ಲಿ ಗುಡಿಯಾ ಮತ್ತು ನಗೀನಾ ಎಂಬ ಇಬ್ಬರನ್ನೂ ಬಂಧಿಸಿತು. ಅಲ್ಲಿಂದ ಅವರು ಗೋರಖ್‌ಪುರಕ್ಕೆ ಪರಾರಿಯಾಗಲು ಪ್ರಯತ್ನಿಸುತ್ತಿದ್ದರು. ಗ್ಯಾಂಗ್‌ನಲ್ಲಿ ಭಾಗಿಯಾಗಿರುವ ಇತರರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ


ನಿಮ್ಮ ಕಾಮೆಂಟ್ ಬರೆಯಿರಿ