ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಭಗವಾನ್ ಇನ್ನಿಲ್ಲ

posted in: ರಾಜ್ಯ | 0

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಭಗವಾನ್ (90 ವರ್ಷ) ಅವರು ಇಂದು, ಸೋಮವಾರ ಬೆಳಿಗ್ಗೆ ಬೆಳಗ್ಗೆ 6 ಗಂಟೆಗೆ ( ಫೆಬ್ರವರಿ 20 ) ನಿಧನರಾಗಿದ್ದಾರೆ.
ಅವರು ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಭಗವಾನ್ ಅವರು ಇಬ್ಬರು ಪುತ್ರರು, ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಡಾ.ರಾಜಕುಮಾರ ಅವರ ಅನೇಕ ಸಿನಿಮಾಗಳಿಗೆ ನಿರ್ದೇಶನ ಮಾಡಿ ಹಲವು ಹಿಟ್ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದರು ದೊರೈರಾಜ್ ಮತ್ತು ಭಗವಾನ್ ಜೋಡಿ ದೊರೈ-ಭಗವಾನ್ ಹೆಸರಲ್ಲಿ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಜನಪ್ರಿಯ ಸಿನೆಮಾಗಳನ್ನು ನಿರ್ದೇಶಿಸಿದ್ದರು. ಇವರಿಬ್ಬರು ಒಟ್ಟಿಗೆ ಇಪ್ಪತ್ತೇಳು ಚಿತ್ರಗಳನ್ನು ನಿರ್ದೇಶಿಸಿದ್ದಾರೆ,
1933ರ ಜುಲೈ 5ರಂದು ಜನಿಸಿದ ಎಸ್. ಕೆ. ಭಗವಾನ್ ಅವರು ತಮ್ಮ ಶಾಲಾ ಶಿಕ್ಷಣವನ್ನು ಬೆಂಗಳೂರು ಪ್ರೌಢಶಾಲೆಯಲ್ಲಿ ಪೂರ್ಣಗೊಳಿಸಿದರು. ಸಣ್ಣವರಿದ್ದಾಗಲೇ ಹಿರಣ್ಣಯ್ಯ ಮಿತ್ರ ಮಂಡಳಿಯವರ ರಂಗ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಅವರು 1956 ರಲ್ಲಿ ಭಾಗ್ಯೋದಯ ಚಿತ್ರದ ಮೂಲಕ ಕಣಗಾಲ್ ಪ್ರಭಾಕರ ಶಾಸ್ತ್ರಿ ಅವರ ಸಹಾಯಕರಾಗಿ ತಮ್ಮ ಸಿನೆಮಾ ಜೀವನದ ಪಯಣ ಪ್ರಾರಂಭಿಸಿದರು. ಕಣಗಲ್ ಪ್ರಭಾಕರ್ ಅವರಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಆರಂಭಿಸಿದ್ದರು. ಅದಾದ ನಂತರದಲ್ಲಿ ಕನ್ನಡ ಚಿತ್ರರಂಗದ ‘ಸಂಧ್ಯಾ ರಾಗ’ ಸಿನಿಮಾವನ್ನು 1966 ರಲ್ಲಿ ನಿರ್ದೇಶಿಸಿದರು ಆದರೆ ಅಧಿಕೃತವಾಗಿ ಅದರ ನಿರ್ದೇಶನದ ಖ್ಯಾತಿ ಎ.ಸಿ.ನರಸಿಂಹ ಮೂರ್ತಿ ಅವರಿಗೆ ಸಲ್ಲುತ್ತದೆ. ಮುಂದಿನ ವರ್ಷ, ಅವರು ಎ.ಸಿ.ನರಸಿಂಹ ಮೂರ್ತಿಯವರೊಂದಿಗೆ ಸೇರಿ ರಾಜದುರ್ಗದ ರಹಸ್ಯ (1967) ಚಿತ್ರದ ಸಹ ನಿರ್ದೇಶಕರಾಗಿ ಮನ್ನಣೆ ಪಡೆದರು. ಮೊದಲ ಬಾರಿಗೆ ಕನ್ನಡದಲ್ಲಿ ಜೇಮ್ಸ್ ಬಾಂಡ್ ಮಾದರಿಯ ಸಿನಿಮಾಗಳನ್ನು ಮಾಡಿದ ಕೀರ್ತಿ ದೊರೈ-ಭಗವಾನ್ ಜೋಡಿಗೆ ಸಲ್ಲುತ್ತದೆ. ಈ ಜೋಡಿ (1968)ರಲ್ಲಿ ಜೇಮ್ಸ್ ಬಾಂಡ್ ಮಾದರಿಯ ಜೇಡರ ಬಲೆ ಸಹ-ನಿರ್ದೇಶಿಸಿದಾಗ ಅವರ ಅಧಿಕೃತ ನಿರ್ದೇಶನ ಪ್ರಾರಂಭವಾಯಿತು.
ನಂತರ ಇವರಿಬ್ಬ ಜೋಡಿ ಕಸ್ತೂರಿ ನಿವಾಸ, ಎರಡು ಕನಸು, ಬಯಲುದಾರಿ, ಗಾಳಿಮಾತು, ಚಂದನದ ಗೊಂಬೆ, ಹೊಸ ಬೆಳಕು, ಬೆಂಕಿಯ ಬಲೆ, ಜೀವನ ಚೈತ್ರದಂತಹ ಕಾದಂಬರಿ ಆಧಾರಿತ ಚಿತ್ರಗಳು ಹಾಗೂ ಮತ್ತು C.I.D 999, ಆಪರೇಷನ್ ಜಾಕ್‌ಪಾಟ್ ನಂತಹ ಬಾಂಡ್ ಶೈಲಿಯ ಚಲನಚಿತ್ರಗಳನ್ನು ನಿರ್ದೇಶಿಸಿದರು.
ಡಾ.ರಾಜಕುಮಾರ ಅವರನ್ನು ಹೊರತುಪಡಿಸಿ, ಈ ಜೋಡಿಯು ಅನಂತನಾಗ್ ಮತ್ತು ಲಕ್ಷ್ಮಿ ಅವರ ಜೋಡಿಯ ಅನೇಕ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ – ಅವುಗಳಲ್ಲಿ ಹೆಚ್ಚಿನವು ಕಾದಂಬರಿಗಳ ಕಥೆಯಾಧರಿಸಿವೆ. ದೊರೈ ರಾಜ್ ಅವರು 2000ದಲ್ಲಿ ನಿಧನರಾಗಿದ್ದರು. ಈ ಜೋಡಿಯ ಕೊನೆಯ ಚಿತ್ರ 1996 ರಲ್ಲಿ ಬಂದ ಬಾಳೊಂದು ಚದುರಂಗ. ಅವರ ಮರಣದ ನಂತರ, ಭಗವಾನ್ ಅನೇಕ ವರ್ಷಗಳ ಕಾಲ ನಿರ್ದೇಶನ ನಿಲ್ಲಿಸಿದರು. ಆದರೆ 2019 ರಲ್ಲಿ, ಅವರು 85 ನೇ ವಯಸ್ಸಿನಲ್ಲಿ ತಮ್ಮ ನಿರ್ದೇಶನದ 50 ನೇ ಚಲನಚಿತ್ರ ಆಡುವ ಗೊಂಬೆ ಎಂಬ ಚಿತ್ರವನ್ನು ನಿರ್ದೇಶಿಸಿದ್ದರು.
ನಿರ್ದೇಶನದ ಜೊತೆಗೆ ಭಗವಾನ್ ಅನೇಕ ಸಿನೆಮಾಗಳಲ್ಲಿ ನಟಿಸಿದ್ದಾರೆ. ‘ಹೊಸಬೆಳಕು’, ‘ಭಾಗ್ಯೋದಯ’, ‘ಮಂಗಲಸೂತ್ರ’, ‘ರೌಡಿ ರಂಗಣ್ಣ’, ‘ವಸಂತ ಗೀತ’ ಮೊದಲಾದ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಇಂದಿನ ಪ್ರಮುಖ ಸುದ್ದಿ :-   ಹಿರಿಯ ನಟ ಶರತ್ ಬಾಬು ಆಸ್ಪತ್ರೆಗೆ ದಾಖಲು

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

0 / 5. ಒಟ್ಟು ವೋಟುಗಳು 0

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement