ಪತಿ-ಅತ್ತೆ ಕೊಂದು ದೇಹವನ್ನು ಕತ್ತರಿಸಿ ಫ್ರೀಜರ್‌ನಲ್ಲಿಟ್ಟಿದ್ದ ಮಹಿಳೆ: 6 ತಿಂಗಳ ನಂತರ ಪ್ರಕರಣ ಭೇದಿಸಿದ ಪೊಲೀಸರು

ಗುವಾಹಟಿ: ಗುವಾಹಟಿಯಲ್ಲಿ ಮಹಿಳೆಯೊಬ್ಬರು ತನ್ನ ಪತಿ ಮತ್ತು ಅತ್ತೆಯನ್ನು ಕೊಂದು, ಅವರ ದೇಹದ ಭಾಗಗಳನ್ನು ಕೆಲವು ದಿನಗಳವರೆಗೆ ಫ್ರೀಜರ್‌ನಲ್ಲಿಟ್ಟು ನಂತರ ನದಿಯಲ್ಲಿ ವಿಲೇವಾರಿ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಏಳು ತಿಂಗಳ ಹಿಂದೆ ನಗರದ ನೂನ್ಮತಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಆರೋಪಿಗಳು ತಪ್ಪೊಪ್ಪಿಕೊಂಡ ನಂತರ ಸೋಮವಾರವಷ್ಟೇ ಬೆಳಕಿಗೆ ಬಂದಿದೆ.
ಹಿರಿಯ ಪೊಲೀಸ್ ಅಧಿಕಾರಿಯ ಪ್ರಕಾರ, ಆರೋಪಿ ವಂದನಾ ಕಲಿಟಾ ತನ್ನ ಇಬ್ಬರು ಸ್ನೇಹಿತರ ಸಹಾಯದಿಂದ ಪತಿ ಅಮರಜ್ಯೋತಿ ಡೇ ಮತ್ತು ಅತ್ತೆ ಶಂಕರಿ ಡೇ ಅವರನ್ನು ಆಗಸ್ಟ್ 17, 2022 ರಂದು ಕೊಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ.
ಕೊಲೆಗಳನ್ನು ಮಾಡಿದ ನಂತರ, ವಂದನಾ ಕಲಿಟಾ ದೇಹದ ಭಾಗಗಳನ್ನು ರೆಫ್ರಿಜರೇಟರ್‌ನಲ್ಲಿ ಇಟ್ಟು ಮನೆಯಿಂದ ಹೊರಟುಹೋಗಿದ್ದಳು. ನಾಲ್ಕು ದಿನಗಳ ನಂತರ ಆಗಸ್ಟ್ 21 ರಂದು ಮನೆಗೆ ಹಿಂದಿರುಗಿದಳು. ನಂತರ ದೇಹಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ಪಾಲಿಥಿನ್ ಚೀಲಗಳಲ್ಲಿ ಪ್ಯಾಕ್ ಮಾಡಿ ಚೀಲಗಳನ್ನು ಮೇಘಾಲಯಕ್ಕೆ ಕೊಂಡೊಯ್ದರು. ಅಲ್ಲಿ ಅವರು ಸಮೀಪದ ದೌಕಿ ನದಿ ಬಳಿ ಬೆಟ್ಟಗಳಿಂದ ಎಸೆದರು. ಅದು ಗುವಾಹಟಿಯಿಂದ ಕನಿಷ್ಠ 200 ಕಿಮೀ ದೂರದಲ್ಲಿದೆ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ವಂದನಾ ಕಲಿಟಾ ಅವರ ನೆರೆಹೊರೆಯವರು ಆಕೆ ಮನೆಯ ಟೆರೇಸ್‌ನಲ್ಲಿ ಪೀಠೋಪಕರಣಗಳನ್ನು ಸುಡುವುದನ್ನು ನೋಡಿರುವುದಾಗಿ ಖಚಿತಪಡಿಸಿದ್ದಾರೆ.
ವಂದನಾ ಕಲಿಟಾ ಇಬ್ಬರು ಸ್ನೇಹಿತರಾದ ಅರೂಪ್ ದೇಕಾ ಮತ್ತು ಧಂಜಿತ್ ದೇಕಾ ಅವರನ್ನು ಕೊಲೆಯಲ್ಲಿ ಭಾಗಿಯಾಗಿದ ಆರೋಪದಡಿ ಬಂಧಿಸಲಾಗಿದೆ. ಅವರಲ್ಲಿ ಒಬ್ಬ ಆಕೆಯ ಪ್ರೇಮಿ ಹಾಗೂ ಮತ್ತೊಬ್ಬ ಬಾಲ್ಯ ಸ್ನೇಹಿತ. ಕೊಲೆಗೆ ಅನೈತಿಕ ಸಂಬಂಧವೇ ಕಾರಣ ಎಂದು ಹೇಳಲಾಗಿದೆ.
ಪೊಲೀಸರು ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ. ಘಟನೆಯ ಕುರಿತು ಪೊಲೀಸರು ಇನ್ನೂ ಅಧಿಕೃತ ಹೇಳಿಕೆ ನೀಡಬೇಕಿದೆ.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಇಂದಿನ ಪ್ರಮುಖ ಸುದ್ದಿ :-   ಕರ್ನಾಟಕ ವಿಧಾನಸಭೆಗೆ ಚುನಾವಣೆ ದಿನಾಂಕ ಘೋಷಣೆ, ಒಂದೇ ಹಂತದಲ್ಲಿ ಮತದಾನ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

4 / 5. ಒಟ್ಟು ವೋಟುಗಳು 1

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement