ಇಂದಿರಾಗಾಂಧಿ ಅಧಿಕಾರಕ್ಕೆ ಬಂದಾಗ 1980ರಲ್ಲಿ ನನ್ನ ತಂದೆಯನ್ನು ಕೇಂದ್ರ ಕಾರ್ಯದರ್ಶಿ ಹುದ್ದೆಯಿಂದ ತೆಗೆದುಹಾಕಿದ್ದರು : ವಿದೇಶಾಂಗ ಸಚಿವ ಜೈಶಂಕರ್

ನವದೆಹಲಿ: ತಾವು ಅಧಿಕಾರಶಾಹಿಗಳ ಕುಟುಂಬಕ್ಕೆ ಸೇರಿದವರು ಮತ್ತು ಕೇಂದ್ರ ಸಚಿವರಾಗುವ ರಾಜಕೀಯ ಅವಕಾಶ 2019 ರಲ್ಲಿ ಬಂದಿರುವುದು ತನಗೆ ಅಚ್ಚರಿಯ ಸಂಗತಿಯಾಗಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಮಂಗಳವಾರ ಹೇಳಿದ್ದಾರೆ.
1980 ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಪುನಃ ಅಧಿಕಾರಕ್ಕೆ ಬಂದ ನಂತರ ತಮ್ಮ ತಂದೆ ಡಾ.ಕೆ.ಸುಬ್ರಹ್ಮಣ್ಯಂ ಅವರನ್ನು ರಕ್ಷಣಾ ಉತ್ಪಾದನೆ ಕಾರ್ಯದರ್ಶಿ ಹುದ್ದೆಯಿಂದ ತೆಗೆದುಹಾಕಲಾಯಿತು ಮತ್ತು ನಂತರ ರಾಜೀವ್ ಗಾಂಧಿ ಅವಧಿಯಲ್ಲಿ ತಂದೆಯವರನ್ನು ಸೂಪರ್‌ಸೀಡ್‌ ಮಾಡಿ ಅವರಿಗಿಂತ ಕಿರಿಯ ಅಧಿಕಾರಿಯನ್ನು ಕ್ಯಾಬಿನೆಟ್ ಕಾರ್ಯದರ್ಶಿಯಾಗಿ ಮಾಡಲಾಗಿತ್ತು ಎಂಬ ಸಂಗತಿಯನ್ನೂ ಅವರು ಬಹಿರಂಗ ಪಡಿಸಿದ್ದಾರೆ.
ಸುದ್ದಿಸಂಸ್ಥೆ ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ಅಧಿಕಾರಿ ಹುದ್ದೆಯಿಂದ ಮಂತ್ರಿ ವರೆಗಿನ ತಮ್ಮ ಪಯಣದ ಬಗ್ಗೆ ವಿಸ್ತಾರವಾಗಿ ಮಾತನಾಡಿರುವ ವಿದೇಶಾಂಗ ಸಚಿವ ಜೈಶಂಕರ್ ಅವರು, ತಾನು ರಾಜಕೀಯದ ಬಗ್ಗೆ ಎಂದಿಗೂ ಯೋಚಿಸರಲಿಲ್ಲ ಎಂದು ಹೇಳಿದ್ದು, ತಾನು ಯಾವಾಗಲೂ ಅತ್ಯುತ್ತಮ ಅಧಿಕಾರಿಯಾಗಲು ಮತ್ತು ವಿದೇಶಾಂಗ ಕಾರ್ಯದರ್ಶಿ ಹುದ್ದೆಗೆ ಏರಲು ಹಾತೊರೆಯುತ್ತಿದ್ದೆ ಎಂದು ಹೇಳಿದ್ದಾರೆ.
ಜೈಶಂಕರ್ ಜನವರಿ 2015 ರಿಂದ ಜನವರಿ 2018ರವರೆಗೆ ವಿದೇಶಾಂಗ ಕಾರ್ಯದರ್ಶಿಯಾಗಿದ್ದರು ಮತ್ತು ಅದಕ್ಕೂ ಮೊದಲು ಚೀನಾ ಮತ್ತು ಅಮೆರಿಕ ಸೇರಿದಂತೆ ಪ್ರಮುಖ ದೇಶಗಳಲ್ಲಿ ರಾಯಭಾರಿ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು. 2011 ರಲ್ಲಿ ನಿಧನರಾದ ಅವರ ತಂದೆ ಕೆ. ಸುಬ್ರಹ್ಮಣ್ಯಂ ಅವರು ಭಾರತದ ಪ್ರಮುಖ ರಾಷ್ಟ್ರೀಯ ಭದ್ರತಾ ತಂತ್ರಜ್ಞರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ.
“ನಾನು ಅತ್ಯುತ್ತಮ ವಿದೇಶಾಂಗ ಸೇವಾ ಅಧಿಕಾರಿಯಾಗಲು ಬಯಸಿದ್ದೆ. ಮತ್ತು ನನ್ನ ಮನಸ್ಸಿನಲ್ಲಿ ಅದು ವಿದೇಶಾಂಗ ಕಾರ್ಯದರ್ಶಿ ಹುದ್ದೆಯಲ್ಲಿ ಕೊನೆಗೊಳ್ಳುತ್ತದೆ. ನಮ್ಮ ಕುಟುಂಬದವರಲ್ಲಿಯೂ ಇದೇ ಇತ್ತು, ನಾನು ಅದನ್ನು ಒತ್ತಡ ಎಂದು ಕರೆಯುವುದಿಲ್ಲ, ಆದರೆ ಅಧಿಕಾರಶಾಹಿಯಾಗಿದ್ದ ನನ್ನ ತಂದೆ ಕಾರ್ಯದರ್ಶಿಯಾದರು, ಆದರೆ ಅವರನ್ನು ಕಾರ್ಯದರ್ಶಿ ಸ್ಥಾನದಿಂದ ತೆಗೆದುಹಾಕಲಾಯಿತು ಎಂಬ ಅಂಶದ ಬಗ್ಗೆ ನಮಗೆಲ್ಲರಿಗೂ ತಿಳಿದಿತ್ತು. ಆ ಸಮಯದಲ್ಲಿ, ಬಹುಶಃ 1979 ರಲ್ಲಿ ಅವರು ಜನತಾ ಸರ್ಕಾರದ ಅತ್ಯಂತ ಕಿರಿಯ ವಯಸ್ಸಿನ ಕಾರ್ಯದರ್ಶಿಯಾಗಿದ್ದರು ಎಂದು ಜೈಶಂಕರ್ ನೆನಪಿಸಿಕೊಂಡರು.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

“1980 ರಲ್ಲಿ, ತಂದೆಯವರು ರಕ್ಷಣಾ ಉತ್ಪಾದನೆಯ ಕಾರ್ಯದರ್ಶಿಯಾಗಿದ್ದರು. 1980ರಲ್ಲಿ ಇಂದಿರಾ ಗಾಂಧಿಯವರು ಮರು ಆಯ್ಕೆಯಾದಾಗ, ಅವರು ತೆಗೆದುಹಾಕಿದ ಮೊದಲ ಕಾರ್ಯದರ್ಶಿ ನಮ್ಮ ತಂದೆಯವರು. ಮತ್ತು ಎಲ್ಲರೂ ಹೇಳುವಂತೆ ನಮ್ಮ ತಂದೆ ರಕ್ಷಣೆ ವಿಷಯದಲ್ಲಿ ಅತ್ಯಂತ ಜ್ಞಾನವಿದ್ದ ವ್ಯಕ್ತಿಯಾಗಿದ್ದರು ಎಂದು ಅವರು ಹೇಳಿದರು.
ನಮ್ಮ ತಂದೆ ಕೂಡ ತುಂಬಾ ನೇರ ವ್ಯಕ್ತಿಯಾಗಿದ್ದರು, “ಅದು ಅವರಿಗೆ ಸಮಸ್ಯೆಗೆ ಕಾರಣವಾಗಿರಬಹುದು, ನನಗೆ ಗೊತ್ತಿಲ್ಲ” ಎಂದು ಹೇಳಿದರು.
“ಆದರೆ ಸತ್ಯವೆಂದರೆ ಒಬ್ಬ ವ್ಯಕ್ತಿಯಾಗಿ ಅವರು ತನ್ನ ಸ್ವಂತ ವೃತ್ತಿಯನ್ನು ಅಧಿಕಾರಶಾಹಿಯಲ್ಲಿ ನೋಡಿದರು, ವಾಸ್ತವವಾಗಿ ಒಂದು ರೀತಿಯಲ್ಲಿ ಅದು ಸ್ಥಗಿತಗೊಂಡಿತು. ಮತ್ತು ಅದರ ನಂತರ, ಅವರು ಮತ್ತೆ ಕಾರ್ಯದರ್ಶಿಯಾಗಲಿಲ್ಲ. ರಾಜೀವ್ ಗಾಂಧಿ ಅವಧಿಯಲ್ಲಿ ಅವರಿಗಿಂತ ಕಿರಿಯರು ಯಾರೋ ಒಬ್ಬರು ಕ್ಯಾಬಿನೆಟ್ ಕಾರ್ಯದರ್ಶಿಯಾದರು. ನಾವು ಅದರ ಬಗ್ಗೆ ವಿರಳವಾಗಿ ಮಾತನಾಡಿದ್ದೇವೆ. ಹಾಗಾಗಿ ನನ್ನ ಅಣ್ಣ ಕಾರ್ಯದರ್ಶಿಯಾದಾಗ ತಂದೆಯವರು ತುಂಬಾ ಹೆಮ್ಮೆಪಟ್ಟಿದ್ದರು ಎಂದು ನೆನಪಿಸಿಕೊಂಡರು. ಹಾಗೂ ತಂದೆ ತೀರಿಕೊಂಡ ನಂತರ ನಾನು ಸರ್ಕಾರದಲ್ಲಿ ಕಾರ್ಯದರ್ಶಿ ಹುದ್ದೆಗೆ ಏರಿದೆ ಎಂದು ಹೇಳಿದರು.
“ತಂದೆಯವರು 2011ರಲ್ಲಿ ನಿಧನರಾದರು, ಆ ಸಮಯದಲ್ಲಿ, ನೀವು ಗ್ರೇಡ್ 1 ಎಂದು ಕರೆಯುವ ಹುದ್ದೆಗೆ ನಾನು ಏರಿದ್ದೆ. ಅದು ಕಾರ್ಯದರ್ಶಿಯಂತೆ … ರಾಯಭಾರಿಯಂತೆ. ಆದರೆ ನಾನು ಕಾರ್ಯದರ್ಶಿಯಾಗಿರಲಿಲ್ಲ, ಅವರು ನಿಧನರಾದ ನಂತರ ನಾನು ಆದೆ. ನಮಗೆ ಆ ಸಮಯದಲ್ಲಿ ಕಾರ್ಯದರ್ಶಿಯಾಗುವುದು ಗುರಿಯಾಗಿತ್ತು. ನಾನು ಹೇಳಿದಂತೆ ಆ ಗುರಿಯನ್ನು ಸಾಧಿಸಿದ್ದೇನೆ. ನಂತರ 2018 ರಲ್ಲಿ, ನಾನು ಸನ್‌ಸೆಟ್‌ನತ್ತ ನಡೆಯದೆ ಟಾಟಾ ಸನ್ಸ್‌ಗೆ ಕಾಲಿಟ್ಟೆ ! ನಾನು ಅಲ್ಲಿ ನನ್ನ ನ್ಯಾಯಯುತ ಕೊಡುಗೆಯನ್ನು ನೀಡುತ್ತಿದ್ದೆ. ನಾನು ಅವರನ್ನು ಇಷ್ಟಪಟ್ಟಿದ್ದೇನೆ, ಅವರು ನನ್ನನ್ನು ಇಷ್ಟಪಟ್ಟಿದ್ದಾರೆ ಎಂದು ನಾನು ಭಾವಿಸುತ್ತೇನೆ. ನಂತರ ಸಂಪೂರ್ಣವಾಗಿ ಒಂದು ಬೋಲ್ಟ್ ಆಫ್ ಬ್ಲೂ, ರಾಜಕೀಯ ಅವಕಾಶ ಬಂದಿತು. ನನಗೆ ರಾಜಕೀಯ ಅವಕಾಶ ಬಂದಾಗ ನಾನು ಯೋಚಿಸಬೇಕಾಯಿತು, ಏಕೆಂದರೆ ನಾನು ಅದಕ್ಕೆ ಸಿದ್ಧವಾಗಿರಲಿಲ್ಲ … ಎಂದು ಜೈಶಂಕರ್ ಅವರು ಅಧಿಕಾರಿಯಿಂದ ಕ್ಯಾಬಿನೆಟ್‌ ಮಂತ್ರಿ ವರೆಗೆ ಅವರ ಪ್ರಯಾಣದ ಬಗ್ಗೆ ಕೇಳಿದಾಗ ಉತ್ತರಿಸಿದರು.

ಇಂದಿನ ಪ್ರಮುಖ ಸುದ್ದಿ :-   ಪಾಕಿಸ್ತಾನದ ಜನರಲ್ಲಿ ಅತೃಪ್ತಿ ಇದೆ, ಅವರೀಗ ವಿಭಜನೆ "ತಪ್ಪು" ಎಂದು ನಂಬುತ್ತಾರೆ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ ಭಾಗವತ್‌

ಪ್ರಧಾನಿ ಮೋದಿಯಿಂದ ಅಚ್ಚರಿಯ ಕರೆ..
2019ರ ನರೇಂದ್ರ ಮೋದಿ ನೇತೃತ್ವದ ಕ್ಯಾಬಿನೆಟ್‌ನ ಭಾಗವಾಗಲು ಪ್ರಧಾನಿಯವರು ಆಹ್ವಾನಿಸಿದ ದೂರವಾಣಿ ಕರೆ ಬಗ್ಗೆ ಹೇಳಿದ ಜೈಶಂಕರ್, ಇದು ಆಶ್ಚರ್ಯ ತಂದಿತು ಎಂದು ಹೇಳಿದ್ದಾರೆ. “ಇದು ನನ್ನ ಮನಸ್ಸನ್ನು ದಾಟಿಲ್ಲ, ಇದು ನನ್ನ ವಲಯದಲ್ಲಿರುವ ಬೇರೆಯವರ ಮನಸ್ಸನ್ನು ದಾಟಿದೆ ಎಂದು ನಾನು ಭಾವಿಸುವುದಿಲ್ಲ” ಎಂದು ಅವರು ಕೇಂದ್ರ ಸಚಿವ ಸಂಪುಟದಲ್ಲಿ ತಮ್ಮ ಸೇರ್ಪಡೆಯನ್ನು ಉಲ್ಲೇಖಿಸಿ ಹೇಳಿದರು.
“ನನ್ನ ಜೀವನದುದ್ದಕ್ಕೂ ರಾಜಕಾರಣಿಗಳನ್ನು ನೋಡುತ್ತಿದ್ದೆ. ವಿದೇಶದಲ್ಲಿ ಸರ್ವೀಸ್‌ನಲ್ಲಿದ್ದಾಗ ನೀವು ರಾಜಕಾರಣಿಗಳನ್ನು ಹತ್ತಿರದಿಂದ ನೋಡುತ್ತೀರಿ ಏಕೆಂದರೆ ನೀವು ಅವರನ್ನು ವಿದೇಶದಲ್ಲಿ ನೋಡುತ್ತೀರಿ, ನೀವು ಅವರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತೀರಿ, ಅವರಿಗೆ ಸಲಹೆ ನೀಡುತ್ತೀರಿ. ಆದ್ದರಿಂದ, ನೋಡುವುದು ಒಂದು ವಿಷಯ, ಆದರೆ ನಿಜವಾಗಿ ರಾಜಕೀಯಕ್ಕೆ ಸೇರುವುದು, ಕ್ಯಾಬಿನೆಟ್ ಸದಸ್ಯನಾಗುವುದು, ರಾಜ್ಯಸಭೆಗೆ ನಿಲ್ಲುವುದು ಮತ್ತೊಂದು ವಿಷಯ. ನಿಮಗೆ ತಿಳಿದಿದೆ, ನಾನು ಆಯ್ಕೆಯಾದಾಗ ನಾನು ಸಂಸತ್ತಿನ ಸದಸ್ಯನೂ ಆಗಿರಲಿಲ್ಲ. ಹೀಗೆ ಈ ಪ್ರತಿಯೊಂದು ಸಂಗತಿಗಳೂ ಒಂದೊಂದಾಗಿ ನಡೆದವು. ಕೆಲವೊಮ್ಮೆ ಗೊತ್ತಿಲ್ಲದೆ ನಾನು ಅದರೊಳಗೆ ಜಾರುತ್ತಿದ್ದೆ, ನೀವು ಇತರರನ್ನು ನೋಡುವ ಮೂಲಕ ಕಲಿಯುತ್ತೀರಿ ಎಂದು ಅವರು ಹೇಳಿದರು.
1977 ರಲ್ಲಿ ಭಾರತೀಯ ವಿದೇಶಾಂಗ ಸೇವೆಗೆ ಸೇರಿದ ಜೈಶಂಕರ್ ಅವರು ಅವರು ಗುಜರಾತ್‌ನಿಂದ ರಾಜ್ಯಸಭೆಗೆ ಆಯ್ಕೆಯಾದ ಬಿಜೆಪಿ ಸದಸ್ಯರಾಗಿದ್ದಾರೆ. “ನನ್ನ ಪಕ್ಷ ಮತ್ತು ಇತರ ಪಕ್ಷಗಳಲ್ಲಿ ಜನರು ಏನು ಮಾಡುತ್ತಿದ್ದಾರೆ ಎಂಬುದನ್ನು ಬಹಳ ಎಚ್ಚರಿಕೆಯಿಂದ ನೋಡುತ್ತಿರುವುದಾಗಿ ಹೇಳಿದ್ದಾರೆ.
ಕ್ಯಾಬಿನೆಟ್ ಸಚಿವರಾಗಿದ್ದ ಅವಧಿಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾಲ್ಕು ವರ್ಷಗಳು ತುಂಬಾ ಆಸಕ್ತಿದಾಯಕವಾಗಿವೆ ಎಂದು ಹೇಳಿದ್ದಾರೆ.”ಇದು ಸ್ನೇಹಿತರನ್ನು ಗೆಲ್ಲುವ ಪ್ರಶ್ನೆ ಎಂದು ನಾನು ಭಾವಿಸುವುದಿಲ್ಲ. ಹೌದು, ನೀವು ರಾಜತಾಂತ್ರಿಕರಾಗಿದ್ದಾಗ ಇದು ಸಹಾಯ ಮಾಡುತ್ತದೆ, ಒಂದರ್ಥದಲ್ಲಿ ನಾನು ತರಬೇತಿ ಪಡೆದಿದ್ದೇನೆ, ನಾನು ಸನ್ನಿವೇಶಗಳಿಂದ ಹೆಚ್ಚಿನದನ್ನು ಪಡೆಯಲು ಹೇಳುತ್ತೇನೆ. ಈ ಬೇಸಿಗೆಯಲ್ಲಿ ನಾಲ್ಕು ವರ್ಷಗಳಾಗುತ್ತವೆ. ಇದು ತುಂಬಾ ಆಸಕ್ತಿದಾಯಕ ನಾಲ್ಕು ವರ್ಷಗಳು. ನಾನು ಈ ನಾಲ್ಕು ವರ್ಷಗಳನ್ನು ನೋಡಿದಾಗ, ನನಗೆ ನಾಲ್ಕು ವರ್ಷಗಳು ಅತ್ಯಂತ ತೀವ್ರವಾದ ಕಲಿಕೆಯಾಗಿದೆ ಎಂದು ಜೈಶಂಕರ್ ಹೇಳಿದ್ದಾರೆ.

ಇಂದಿನ ಪ್ರಮುಖ ಸುದ್ದಿ :-   ಸೊಳ್ಳೆ ಬತ್ತಿಯಿಂದ ಹೊತ್ತಿಕೊಂಡ ಬೆಂಕಿ: ಒಂದೇ ಕುಟುಂಬದ ಆರು ಮಂದಿ ಸಾವು

ಜೈಶಂಕರ್ ಅವರು ತಾವು ಸಚಿವರಾಗುವಾಗ ರಾಜಕೀಯ ಪಕ್ಷ ಸೇರಬೇಕೋ ಬೇಡವೋ ಎಂಬ ಆಯ್ಕೆ ತನ್ನ ಮುಂದೆ ಇತ್ತು ಎಂದು ಹೇಳಿದ್ದಾರೆ.
“ ನಾನು ಮಂತ್ರಿಯಾಗಿ ಆಯ್ಕೆಯಾದಾಗ ನಾನು ಸಂಸದನಾಗಿರಲಿಲ್ಲ, ರಾಜಕೀಯ ಪಕ್ಷದ ಸದಸ್ಯನೂ ಆಗಿರಲಿಲ್ಲ. ನಾನು ರಾಜಕೀಯ ಪಕ್ಷ ಸೇರಬೇಕೋ ಬೇಡವೋ ಎಂಬ ಆಯ್ಕೆ ನನಗಿತ್ತು. ಅದರ ಮೇಲೆ ಯಾವುದೇ ಒತ್ತಾಯ ಇರಲಿಲ್ಲ, ಯಾರೂ ಆ ವಿಷಯವನ್ನು ಪ್ರಸ್ತಾಪಿಸಲಿಲ್ಲ. ಅದು ನನಗೆ ಬಿಟ್ಟ ವಿಷಯವಾಗಿತ್ತು. ನಾನು ಸೇರಿಕೊಂಡೆ ಏಕೆಂದರೆ, ಮೊದಲನೆಯದಾಗಿ, ನೀವು ತಂಡವನ್ನು ಸೇರುವಾಗ, ನೀವು ಅದನ್ನು ಪೂರ್ಣ ಹೃದಯದಿಂದ ಸೇರುತ್ತೀರಿ. ಅಲ್ಲಿಯೇ ನೀವು ನಿಮ್ಮ ಅತ್ಯುತ್ತಮ ಪ್ರದರ್ಶನವನ್ನು ನೀಡುತ್ತೀರಿ ಮತ್ತು ನೀವು ಅತ್ಯುತ್ತಮ ಬೆಂಬಲವನ್ನು ಪಡೆಯುತ್ತೀರಿ ಎಂದು ಅವರು ಹೇಳಿದರು.
ಎರಡನೆಯದಾಗಿ, ನಾನು ನಿಜವಾಗಿಯೂ ರಾಜಕೀಯ ಪಕ್ಷವನ್ನು ಸೇರುವುದು ನಾನು ಲಘುವಾಗಿ ತೆಗೆದುಕೊಂಡ ನಿರ್ಧಾರವಲ್ಲ. ನಾನು ನನ್ನ ಜೀವನದುದ್ದಕ್ಕೂ ರಾಜಕೀಯವನ್ನು ಅಧ್ಯಯನ ಮಾಡಿದ ಮತ್ತು ವಿಶ್ಲೇಷಿಸಿದ ವ್ಯಕ್ತಿ. ಇದು ನನಗೆ ಬಹಳ ಪ್ರಾಮುಖ್ಯತೆಯ ವಿಷಯವಾಗಿತ್ತು. ಹಾಗಾಗಿ ನಾನು ಸೇರಿದ್ದೇನೆ ಎಂದು ಅವರು ಹೇಳಿದರು.

ರಾಜಕಾರಣಿ ವರ್ಸಸ್‌ ಅಧಿಕಾರಶಾಹಿ
ಅಧಿಕಾರಶಾಹಿಗೆ ಹೋಲಿಸಿದರೆ ಕೇಂದ್ರ ಸಚಿವರಾಗಿ ವಿಭಿನ್ನ ಮಟ್ಟದ ಮಾನ್ಯತೆ ಇದೆ ಎಂದು ಅವರು ಹೇಳಿದರು.
“ನಿಮ್ಮ ಮಾನ್ಯತೆ, ಪ್ರತಿ ಕ್ಯಾಬಿನೆಟ್ ಸಭೆ… 10 ಅಂಶಗಳಿವೆ ಎಂದು ಹೇಳೋಣ, ಅದು ಕೃಷಿಯ ಮೇಲಿರಬಹುದು, ಮೂಲಸೌಕರ್ಯದ ಮೇಲಿರಬಹುದು. ಆದರೆ ನೀವು ಕ್ಯಾಬಿನೆಟ್ ಟಿಪ್ಪಣಿಯನ್ನು ಪಡೆಯುತ್ತೀರಿ, ನೀವು ಟಿಪ್ಪಣಿಯನ್ನು ಓದುತ್ತೀರಿ, ನಿಮಗೆ ಆಸಕ್ತಿ ಇದೆ, ನೀವು ಸ್ವಲ್ಪ ಹೆಚ್ಚು ಅಧ್ಯಯನ ಮಾಡುತ್ತೀರಿ. ಆಗ ನಿಮ್ಮ ಆಸಕ್ತಿ ವಿಸ್ತಾರವಾಗುತ್ತದೆ. ನಿಮ್ಮ ಆಸಕ್ತಿಗಳು ವಿಸ್ತಾರವಾದಾಗ ಮತ್ತು ನೀವು ಜನರೊಂದಿಗೆ ಮಾತನಾಡಿದಾಗ ಅದು ನಿಮಗೆ ಗೋಚರಿಸುತ್ತದೆ ಎಂದು ಹೇಳಿದರು.
ವಿದೇಶಾಂಗ ಸೇವಾ ಅಧಿಕಾರಿಯಾಗಿ ಮತ್ತು ಸಚಿವರಾಗಿ ಮತ್ತು ರಾಜಕಾರಣಿಯಾಗಿ ಹೇಗೆ ಯೋಚಿಸುತ್ತಾರೆ ಮತ್ತು ಕಾರ್ಯನಿರ್ವಹಿಸುತ್ತಾರೆ ಎಂಬುದರಲ್ಲಿ ವ್ಯತ್ಯಾಸವಿದೆಯೇ ಎಂದು ಕೇಳಿದಾಗ, ಇದು ವೈಯಕ್ತಿಕವಾಗಿ ನನಗೆ ಸ್ವಲ್ಪ ಸವಾಲಾಗಿದೆ ಎಂದು ಹೇಳಿದರು.
“ಒಂದು ರೀತಿಯಲ್ಲಿ, ಇದು ವಿಭಿನ್ನ ಜೀವನಗಳಂತೆ. ನಾನು ಅಧಿಕಾರಶಾಹಿಯ ಕುಟುಂಬದವನಾದ್ದರಿಂದ ವೈಯಕ್ತಿಕವಾಗಿ ನನಗಿದ್ದ ಸವಾಲನ್ನು ನೀವು ಅರ್ಥಮಾಡಿಕೊಳ್ಳಬೇಕು. ನನ್ನ ತಂದೆ ಅಧಿಕಾರಿಯಾಗಿದ್ದರು. ನನಗೆ ಒಬ್ಬ ಬ್ಯುರೋಕ್ರಾಟ್ ಅಣ್ಣ ಇದ್ದಾರೆ, ನನ್ನ ಅಜ್ಜ ಬ್ಯೂರೋಕ್ರಾಟ್ ಆಗಿದ್ದರು ಮತ್ತು ಚಿಕ್ಕಪ್ಪಂದಿರೂ ಅಲ್ಲಿದ್ದರು. ಆದ್ದರಿಂದ ನಾನು ನಿಮಗೆ ಈ ರೀತಿ ಹೇಳಬಹುದಾದರೆ ನಮ್ಮ ಜಗತ್ತು, ಅದು ತುಂಬಾ ಅಧಿಕಾರಶಾಹಿಯಾಗಿತ್ತು. ನಮ್ಮ ಗುರಿಗಳು, ನಮ್ಮ ಕನಸುಗಳು ಅಧಿಕಾರಶಾಹಿಯಾಗಿದ್ದವು ಎಂದು ಹೇಳಿದ್ದಾರೆ.
ಪ್ರತಿಯೊಂದು ಪ್ರಮುಖ ಸಮಸ್ಯೆಯು ಕೆಲವು ರಾಜಕೀಯ ಕೋನವನ್ನು ಹೊಂದಿರುತ್ತದೆ, ಅದನ್ನು ಒಬ್ಬ ಮಂತ್ರಿಯು ಅಧಿಕಾರಶಾಹಿಗಿಂತ ಹೆಚ್ಚು ವೇಗವಾಗಿ ನೋಡುತ್ತಾನೆ ಎಂದು ಜೈಶಂಕರ್ ಅಭಿಪ್ರಾಯಪಟ್ಟರು.

.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

4 / 5. ಒಟ್ಟು ವೋಟುಗಳು 3

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement