ಐದು ವರ್ಷಗಳಿಗೊಮ್ಮೆ ನಡೆಯುವ ಬಮ್ಮಿಗಟ್ಟಿ ಗ್ರಾಮದೇವಿಯರ ಜಾತ್ರೆಗೆ ಚಾಲನೆ

ಕಲಘಟಗಿ : ಐದು ವರ್ಷಗಳಿಗೊಮ್ಮೆ ನಡೆಯುವ ತಾಲೂಕಿನ ಬಮ್ಮಿಗಟ್ಟಿ ಗ್ರಾಮದ ಶ್ರೀ ಗ್ರಾಮದೇವಿ ಜಾತ್ರಾ ಮಹೋತ್ಸವಕ್ಕೆ ಬುಧವಾರ ವಿಧ್ಯುಕ್ತ ಚಾಲನೆ ನೀಡಲಾಯಿತು.
ಕಲಘಟಗಿಯ ಹನ್ನೆರಡು ಮಠದ ರೇವಣಸಿದ್ಧೇಶ್ವರ ಶಿವಾಚಾರ್ಯರ ಸಮ್ಮುಖದಲ್ಲಿ ಆಲದಕಟ್ಟಿ ಗ್ರಾಮಸ್ಥರಿಂದ ಗ್ರಾಮದೇವಿಯರಿಗೆ ತವರು‌ ಮನೆಯ ಉಡಿ ತುಂಬುವ ಮೂಲಕ ಜಾತ್ರಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ನಂತರ ಬಮ್ಮಿಗಟ್ಟಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಉಡಿ ತುಂಬಿ ದೇವಿಯ ಕೃಪೆಗೆ ಪಾತ್ರರಾದರು.
ಇದಕ್ಕೂ ಮುನ್ನ ಬೆಳಿಗ್ಗೆ ಗ್ರಾಮದೇವಿಯರಿಗೆ ಗ್ರಾಮದ ಹಿರೇಮಠ, ಚಿಕ್ಕಮಠ, ವಿರಕ್ತಮಠ, ಅಂಕಲಿಮಠ, ಸೂರಗಿಮಠದ ಪೂಜ್ಯರು ವಿಶೇಷ ಪೂಜೆ ಸಲ್ಲಿಸಿದರು. ಚೌತಮನೆಯಲ್ಲಿ ಪ್ರತಿಷ್ಠಾಪಿಸಿರುವ ಉಭಯದೇವಿಯರನ್ನು
ಪೂಜಿಸಿ ಕೃತಾರ್ಥರಾದರು. ಗ್ರಾಮದ ವತಿಯಿಂದ ಆಲದಕಟ್ಟಿ ಗ್ರಾಮಸ್ಥರನ್ನು ಸನ್ಮಾನಿಸಲಾಯಿತು. ಸಂಜೆ ಗದುಗಿನ ಕದಮನಹಳ್ಳಿ ಪಂಚಾಕ್ಷರಿ ಶಾಸ್ತ್ರಿಗಳಿಂದ ಪುರಾಣ ಪ್ರವಚನ ನಡೆಯಿತು.

3 / 5. 1

ಶೇರ್ ಮಾಡಿ :
ಪ್ರಮುಖ ಸುದ್ದಿ :-   ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ: ಮಗನಿಗೆ ಯಾವ ಶಿಕ್ಷೆ ಕೊಟ್ರೂ ಸ್ವಾಗತಿಸ್ತೇನೆ ಎಂದ ಕೊಲೆ ಆರೋಪಿ ಫಯಾಜ್‌ ತಂದೆ

ನಿಮ್ಮ ಕಾಮೆಂಟ್ ಬರೆಯಿರಿ

advertisement