ಕೋವಿಡ್‌ಗೆ ಹೆದರಿ 3 ವರ್ಷಗಳಿಂದ ಮನೆಯೊಳಗೆ ತನ್ನನ್ನು-ಮಗನನ್ನು ಲಾಕ್‌ ಮಾಡಿಕೊಂಡಿದ್ದ ಮಹಿಳೆ…! ಬಾಗಿಲು ಮುರಿದು ರಕ್ಷಿಸಿದ ಪೊಲೀಸರು…!!

ನವದೆಹಲಿ: ಗುರುಗ್ರಾಮದ ಚಕ್ಕರ್‌ಪುರದಲ್ಲಿ ನಡೆದ ಆಘಾತಕಾರಿ ವಿದ್ಯಮಾನದಲ್ಲಿ ಕೋವಿಡ್-19 ಸೋಂಕಿಗೆ ಒಳಗಾಗುವ ತೀವ್ರ ಭಯದಿಂದ ಮಹಿಳೆಯೊಬ್ಬಳು ತನ್ನನ್ನು ಮತ್ತು ತನ್ನ ಅಪ್ರಾಪ್ತ ಮಗನನ್ನು ಮೂರು ವರ್ಷಗಳ ಕಾಲ ತಮ್ಮ ಮನೆಯಲ್ಲಿ ಲಾಕ್‌ ಮಾಡಿಕೊಂಡ ಹಾಕಿಕೊಂಡ ಘಟನೆ ವರದಿಯಾಗಿದೆ..!
ಖಾಸಗಿ ಕಂಪನಿಯೊಂದರಲ್ಲಿ ಎಂಜಿನಿಯರ್ ಆಗಿರುವ ಮಹಿಳೆಯ ಪತಿ ಸುಜನ್ ಮಾಝಿ ಚಕ್ಕರ್‌ಪುರ ಪೊಲೀಸ್ ಪೋಸ್ಟ್‌ನಲ್ಲಿ ನಿಯೋಜಿಸಲಾದ ಪೊಲೀಸರನ್ನು ಸಂಪರ್ಕಿಸಿದ ನಂತರ ಈ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ಅವರ ಕೋರಿಕೆಯ ಮೇರೆಗೆ, ಪೊಲೀಸರು, ಆರೋಗ್ಯ ಅಧಿಕಾರಿಗಳು ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸದಸ್ಯರ ತಂಡ ಮಂಗಳವಾರ ನಿವಾಸಕ್ಕೆ ತಲುಪಿ ಬಾಗಿಲು ಒಡೆದು ಮೂನ್‌ಮೂನ್‌ ಮಾಝಿ ಮತ್ತು ಅವರ 10 ವರ್ಷದ ಮಗನನ್ನು ರಕ್ಷಿಸಿದ್ದಾರೆ. ಚಿತ್ರಗಳು ಮನೆಯ ಒಳಗಿನ ಬಟ್ಟೆ ರಾಶಿ, ಕೂದಲು, ಕಸ, ಕೊಳಕು ಮತ್ತು ದಿನಸಿಗಳ ರಾಶಿಯನ್ನು ತೋರಿಸುತ್ತವೆ.
ಬಾಲಕನ ತಾಯಿ ಮನೆಯಲ್ಲಿಯೇ ಮಗುವಿನ ಮತ್ತು ತನ್ನ ಕೂದಲನ್ನು ಕತ್ತರಿಸಿಕೊಳ್ಳುತ್ತಿದ್ದಳು ಎನ್ನಲಾಗಿದೆ.
ಇದೇ ವೇಳೆ ಮನೆಯಲ್ಲಿ ಗ್ಯಾಸ್ ಸ್ಟೌ ಬದಲು ಇಂಡಕ್ಷನ್ ಮೂಲಕ ಅಡುಗೆ ಮಾಡಲಾಗಿತ್ತು. 3 ವರ್ಷಗಳಿಂದ ಮನೆಯ ಕಸವನ್ನು ಕೂಡ ಹೊರಗೆ ಹಾಕಿರಲಿಲ್ಲ ಮತ್ತು ಈ ವರ್ಷಗಳಲ್ಲಿ ಯಾರೂ ಮನೆಗೆ ಭೇಟಿ ನೀಡಿರಲಿಲ್ಲ. ಮಗು ಮನೆಯ ಗೋಡೆಗಳ ಮೇಲೆ ಪೇಂಟಿಂಗ್ ಮಾಡುತ್ತಿತ್ತು ಮತ್ತು ಪೆನ್ಸಿಲ್‌ನಿಂದ ಮಾತ್ರ ಅಧ್ಯಯನ ಮಾಡುತ್ತಿತ್ತು. ಇನ್ನೂ ಆಘಾತಕಾರಿ ಸಂಗತಿಯೆಂದರೆ, ಮಗು ಕಳೆದ ಮೂರು ವರ್ಷಗಳಿಂದ ಸೂರ್ಯನನ್ನೇ ನೋಡಿರಲಿಲ್ಲ…!

ಪ್ರಮುಖ ಸುದ್ದಿ :-   ವ್ಯಕ್ತಿಯೊಬ್ಬರ ಖಾತೆಗೆ ಜಮೆಯಾಯ್ತು ಬರೋಬ್ಬರಿ 9900 ಕೋಟಿ ರೂ....! ಮುಂದಾಗಿದ್ದೇನು..?

ಇಷ್ಟೆಲ್ಲ ಆದರೂ ಇಬ್ಬರೂ ಮನೆಗೆ ಬೀಗ ಹಾಕಿಕೊಂಡಿದ್ದರೂ ಬಗ್ಗೆ ಅಕ್ಕಪಕ್ಕದವರಿಗೆ ಸಣ್ಣ ಸುಳಿವು ಸಹ ಸಿಕ್ಕಿರಲಿಲ್ಲ. ಕೋವಿಡ್ -19 ಕಾರಣದಿಂದಾಗಿ ಮಹಿಳೆ ಭಯಭೀತಳಾಗಿದ್ದಳು ಮತ್ತು ಮನೆಯಿಂದ ಹೊರಗೆ ಕಾಲಿಟ್ಟರೆ ಮಗ ಸಾಯುತ್ತಾನೆ ಎಂದು ಅವಳು ನಂಬಿದ್ದಳು. ಇದು ಅವಳು ತನ್ನನ್ನು ಹಾಗೂ ತನ್ನ ಮಗನನ್ನು ಮನೆಯೊಳಗೆ ಲಾಕ್‌ ಮಾಡಿಕೊಂಡು ಇರಲು ಕಾರಣವಾಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತನ್ನ ಮಗನೊಂದಿಗಿನ ಮೂರು ವರ್ಷಗಳ ಕಾಲ ಲಾಕ್‌ ಆಗಿದ್ದ ಮಹಿಳೆ ಕೆಲಸಕ್ಕೆ ಹೋಗುವ ತನ್ನ ಪತಿಯನ್ನು ಸಹ ಮನೆಯೊಳಗೆ ಬರಲು ಬಿಟ್ಟಿರಲಿಲ್ಲ. ಮೊದಲ ಲಾಕ್‌ಡೌನ್ ನಿರ್ಬಂಧಗಳನ್ನು ತೆಗೆದುಹಾಕಿದ ನಂತರ ಅವರು 2020 ರಲ್ಲಿ ಕಚೇರಿಗಾಗಿ ಮನೆಯಿಂದ ಹೊರಬಂದಿದ್ದರು ಮತ್ತು ಅಂದಿನಿಂದ ಪತಿಗೆ ಮನೆಯೊಳಗೆ ಪ್ರವೇಶಿಸಲು ಅನುಮತಿ ನೀಡಲಿಲ್ಲ.
ಮಾಝಿ ಅವರಿಗೆ ತನ್ನ ಕುಟುಂಬದೊಂದಿಗೆ ಸಂಪರ್ಕದಲ್ಲಿರಲು ಇದ್ದ ಏಕೈಕ ಮಾರ್ಗವೆಂದರೆ ವೀಡಿಯೊ ಕರೆಗಳಾಗಿತ್ತು. ಮನೆಯ ಮಾಸಿಕ ಬಾಡಿಗೆ ಕಟ್ಟುವುದು, ವಿದ್ಯುತ್ ಬಿಲ್ ಕಟ್ಟುವುದು, ಮಗನ ಶಾಲಾ ಶುಲ್ಕ ಕಟ್ಟುವುದು, ದಿನಸಿ ಸಾಮಾನು, ತರಕಾರಿ ಕೊಂಡುಕೊಳ್ಳುವುದು, ಪಡಿತರ ಚೀಲಗಳನ್ನು ತರುವುದು ಹೀಗೆ ಎಲ್ಲವನ್ನೂ ಮಾಡುತ್ತಿದ್ದ ಗಂಡ ಅವೆಲ್ಲವನ್ನೂ ಮುಖ್ಯ ಬಾಗಿಲಿನ ಹೊರಗೆ ಇಟ್ಟು ಹೋಗುತ್ತಿದ್ದರು…!
ಮನೆಯ ಬಾಗಿಲು ಒಡೆದು ತಾಯಿ-ಮಗ ಇಬ್ಬರನ್ನು ರಕ್ಷಿಸಿದ ನಂತರ ಅವರನ್ನು ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಯಿತು.

ಪ್ರಮುಖ ಸುದ್ದಿ :-   ಕಾಂಗ್ರೆಸ್‌ ನಾಯಕ ಅಧೀರ್‌ ಹೇಳಿಕೆ ತಿರಸ್ಕರಿಸಿದ ನಂತರ ಪಶ್ಚಿಮ ಬಂಗಾಳ ಕಾಂಗ್ರೆಸ್ ಕಚೇರಿ ಮುಂದಿನ ಮಲ್ಲಿಕಾರ್ಜುನ ಖರ್ಗೆ ಪೋಸ್ಟರ್‌ಗಳಿಗೆ ಮಸಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement