ಕೆಎಸ್‌ಆರ್‌ಟಿಸಿ ಬಸ್​ನಲ್ಲಿ ಮಹಿಳೆ ಸೀಟ್ ಮೇಲೆ ಮೂತ್ರ ವಿಸರ್ಜಿಸಿದ ವ್ಯಕ್ತಿ…!

posted in: ರಾಜ್ಯ | 0

ಹುಬ್ಬಳ್ಳಿ: ಇತ್ತೀಚಿಗೆ ವಿಮಾನದಲ್ಲಿ ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ಸಹ ಪ್ರಯಾಣಿಕ ಮೂತ್ರ ವಿಸರ್ಜನೆ ಮಾಡಿದ್ದು ರಾಷ್ಟ್ರಾದ್ಯಂತ ಭಾರೀ ಸುದ್ದಿಯಾಗಿತ್ತು. ಈಗ ರಾಜ್ಯದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಸಹ ಪ್ರಯಾಣಿಕ ಮಹಿಳೆಯೊಬ್ಬರ ಸೀಟಿನ ಮೇಲೆ ಯುವಕನೊಬ್ಬ ಮೂತ್ರ ವಿಸರ್ಜನೆ ಮಾಡಿದ ಘಟನೆ ನಡೆದಿರುವುದು ವರದಿಯಾಗಿದೆ.
ಈ ಘಟನೆ ಮಂಗಳವಾರ ರಾತ್ರಿ ವಿಜಯಪುರದಿಂದ ಮಂಗಳೂರಿಗೆ ಹೊರಟಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಸ್ಲೀಪರ್‌ ಬಸ್‌ನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಯುವಕ ಮೂತ್ರ ವಿಸರ್ಜನೆ ಮಾಡಿದ ನಂತರ ಪ್ರಯಾಣಿಕರೆಲ್ಲರೂ ಮೂತ್ರ ವಿಸರ್ಜನೆ ಮಾಡಿದ್ದ ಯುವಕನನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಹಾಗೂ ಧರ್ಮದೇಟು ನೀಡಿದ್ದಾರೆ.
ವಿಜಯಪುರದಿಂದ ಮಂಗಳೂರಿಗೆ ಹೋಗುವ ಕೆಎಸ್‌ಆರ್‌ಟಿಸಿಯ ನಾನ್‌ ಎಸಿ ಸ್ಲೀಪರ್‌ ಕೋಚ್‌ ಬಸ್‌ ನಲ್ಲಿ ಯುವತಿಯೊಬ್ಬಳು ಮುಂದಿನ ಸೀಟಿನಲ್ಲಿ ಪ್ರಯಾಣಿಸುತ್ತಿದ್ದಳು. ಅದೇ ಬಸ್‌ನಲ್ಲಿ ಯುವಕ ಹಿಂಬದಿ ಸೀಟಿನಲ್ಲಿ ಪ್ರಯಾಣಿಸುತ್ತಿದ್ದ. ಬಸ್‌ ಅನ್ನು ಹುಬ್ಬಳ್ಳಿ ಸಮೀಪ ಡಾಬಾದಲ್ಲಿ ಊಟಕ್ಕೆಂದು ನಿಲ್ಲಿಸಲಾಗಿತ್ತು. ಆ ವೇಳೆ ಯುವತಿಯೂ ಕೆಳಗಿಳಿದಿದ್ದಳು. ಈ ವೇಳೆ ಸೀಟ್‌ನಿಂದ ಎದ್ದು ಬಂದ ಯುವಕ ಮುಂದುಗಡೆ ಇದ್ದ ಯುವತಿ ಸೀಟಿನ ಮೂತ್ರ ವಿಸರ್ಜನೆ ಮಾಡಿದ್ದಾನೆ. ಯುವತಿ ವಾಪಸ್‌ ಬಂದು ಸೀಟಿನ ಮೇಲೆ ಕುಳಿತಾಗ ಸೀಟಿನ ಮೇಲೆ ಯಾರೋ ಮೂತ್ರ ಮಾಡಿರುವುದು ಗೊತ್ತಾಗಿದೆ. ಬಸ್‌ನಲ್ಲಿ ಈ ಯುವಕ ಮಾತ್ರ ಇದ್ದ ಹಾಗೂ ಪಕ್ಕದ ಸೀಟಿನಲ್ಲಿ ಈತ ಕುಳಿತುಕೊಂಡಿದ್ದ. ತಕ್ಷಣವೇ ಕೆಳಗಿಳಿದು ಹೋದ ಯುವತಿ ಈ ಬಗ್ಗೆ ಕಂಡಕ್ಟರ್‌ ಹಾಗೂ ಚಾಲಕನಿಗೆ ಮಾಹಿತಿ ನೀಡಿದ್ದಾಳೆ.
ಘಟನೆ ಬಗ್ಗೆ ಗೊತ್ತಾಗುತ್ತಿದ್ದಂತೆಯೇ ಕಂಡಕ್ಟರ್ ಮತ್ತು ಡ್ರೈವರ್ ಹಾಗೂ ಪ್ರಯಾಣಿಕರು ಯುವಕನನ್ನು ‌ಬಸ್ಸಿನಿಂದ ಕೆಳಗಿಳಿಸಿ ಹಿಗ್ಗಾ ಮುಗ್ಗಾ ಬೈದಿದ್ದಾರೆ. ಆದರೆ ಯುವಕ ಇದ್ಯಾವುದಕ್ಕೂ ಪ್ರತಿಕ್ರಿಯೆ ನೀಡಿಲ್ಲ. ಆತನ ವರ್ತನೆಯಿಂದ ಆತ ಮದ್ಯಪಾನ ಮಾಡಿರಬಹುದು ಎಂದು ಅವರು ಅನುಮಾನಿಸಿದ್ದಾರೆ. ನಂತರ ಡಾಬಾದಲ್ಲಿಯೇ ಯುವಕನನ್ನು ಬಿಟ್ಟು ಬಸ್‌ ಮಂಗಳೂರಿಗೆ
ಯುವತಿ ಪೊಲೀಸ್‌ ಠಾಣೆ ಅಥವಾ ಸಂಚಾರ ವಿಭಾಗಕ್ಕೆ ದೂರು ನೀಡಿಲ್ಲ. ಯುವತಿ ಹುಬ್ಬಳ್ಳಿಯಲ್ಲಿ ಬಸ್‌ನಿಂದ ಇಳಿದು ಹೋಗಿದ್ದಾಳೆ. ಹೀಗಾಗಿ ಘಟನೆಯ ಕುರಿತು ಯಾವುದೇ ಪೊಲೀಸ್‌ ದೂರು ದಾಖಲಾಗಿಲ್ಲ.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಇಂದಿನ ಪ್ರಮುಖ ಸುದ್ದಿ :-   ಇಂದು ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

4 / 5. ಒಟ್ಟು ವೋಟುಗಳು 1

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement