ಬೆಂಗಳೂರು : ರಾಜ್ಯವಿಧಾನಸಭಾ ಚುನಾವಣೆಗೆ ಸಮೀಪಿಸುತ್ತಿದ್ದು, ರಾಜಕೀಯ ಪಕ್ಷಗಳು ಚುನಾವಣಾ ತಯಾರಿ ಆರಂಭಿಸಿವೆ. ಏನ್ಮಧ್ಯೆ ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಅವರ ಉತ್ತಮ ಪ್ರಜಾಕೀಯ ಪಕ್ಷಕ್ಕೆ ಆಟೋ ರಿಕ್ಷಾ ಚಿಹ್ನೆ ನೀಡಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.
ಈ ಕುರಿತು ನಟ ಉಪೇಂದ್ರ ಅವರು ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದು, ಚುನಾವಣಾ ಆಯೋಗದ ಆದೇಶವನ್ನು ಸಹ ಹಂಚಿಕೊಂಡಿದ್ದಾರೆ.
ಉತ್ತಮ ಪ್ರಜಾಕೀಯ ಪಕ್ಷಕ್ಕೆ ಈ ಬಾರಿಯ 2023 ವಿಧಾನಸಭಾ ಚುನಾವಣೆಗೆ ಕಾಮನ್ ಸಿಂಬಲ್ “ಆಟೋ ರಿಕ್ಷಾ ” ಚಿಹ್ನೆ ಲಭಿಸಿದೆ. ಎಲ್ಲರಿಗೂ ಶುಭಾಶಯಗಳು ಎಂದು ಉಪೇಂದ್ರ ಟ್ವೀಟ್‌ನಲ್ಲಿ ಹೇಳಿದ್ದಾರೆ.
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155
ಉಪೇಂದ್ರ ಅವರು ರಾಜಕಾರಣಕ್ಕೆ ಪ್ರವೇಶ ಮಾಡಿ ಕೆಲವು ವರ್ಷಗಳಾಗಿವೆ. ಉತ್ತಮ ಪ್ರಜಾಕೀಯ ಪಾರ್ಟಿ ಹೆಸರಿನಲ್ಲಿ ಅವರು ಪಕ್ಷವೊಂದನ್ನು ಸ್ಥಾಪನೆ ಮಾಡಿ ರಾಜ್ಯಾದ್ಯಂತ ಪ್ರವಾಸ ಕೂಡ ಮಾಡಿದ್ದಾರೆ. ಈ ಪಕ್ಷದಿಂದ ಪಂಚಾಯತಿ ಚುನಾವಣೆಯಲ್ಲಿ ಒಬ್ಬ ಸದಸ್ಯ ಕೂಡ ಗೆದ್ದಿದ್ದಾರೆ.ಆದರೆ ಉತ್ತಮ ಪ್ರಜಾಕೀಯ ಪಕ್ಷಕ್ಕೆ ಅಧಿಕೃತವಾಗಿ ಯಾವುದೇ ಚಿಹ್ನೆ ಇರಲಿಲ್ಲ. ಈಗ ಉತ್ತಮ ಪ್ರಜಾಕೀಯ ಪಕ್ಷದಿಂದ ಕರ್ನಾಟಕ ವಿಧಾನಸಭಾ ಚುನಾವಣೆ 2023ರಲ್ಲಿ ಸ್ಪರ್ಧಿಸುವ ಎಲ್ಲ ಅಭ್ಯರ್ಥಿಗಳಿಗೆ ಆಟೋ ರಿಕ್ಷಾವನ್ನು ಸಾಮಾನ್ಯ ಚಿಹ್ನೆ ಎಂದು ಚುನಾವಣಾ ಆಯೋಗ ನಿಗದಿಪಡಿಸಿದೆ.
ಉತ್ತಮ ಪ್ರಜಾಕೀಯ ಪಕ್ಷ ನೋಂದಾಯಿತ ಮಾನ್ಯತೆ ಇಲ್ಲದ ಪಕ್ಷವಾಗಿರುವುದರಿಂದ ಚುನಾವಣೆ ವೇಳೆ ಚುನಾವಣಾ ಆಯೋಗದಿಂದ ಚಿಹ್ನೆ ಪಡೆಯಬೇಕಾಗುತ್ತದೆ.ಉಪೇಂದ್ರ ಅವರು ಉತ್ತಮ ಪ್ರಜಾಕೀಯ ಪಕ್ಷವನ್ನು 2018ರ ಸೆಪ್ಟೆಂಬರ್ 18ರಂದು ಪ್ರಾರಂಭಿಸಿದ್ದರು. 2023ರ ವಿಧಾನಸಭಾ ಚುನಾವಣೆಗೆ ತಯಾರಿ ನಡೆಸಿರುವ ಉಪೇಂದ್ರ ಅವರ ಪಕ್ಷದ ಅಭ್ಯರ್ಥಿಗಳಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಚಿಹ್ನೆ ಸಿಕ್ಕಿದೆ.
ನಿಮ್ಮ ಕಾಮೆಂಟ್ ಬರೆಯಿರಿ