ಮಹಿಳಾ ಟಿ20 ವಿಶ್ವಕಪ್‌: ಹಣಾಹಣಿ ಪಂದ್ಯದಲ್ಲಿ ಭಾರತವನ್ನು 5 ರನ್‌ಗಳಿಂದ ಸೋಲಿಸಿ ಸತತ 7ನೇ ಬಾರಿಗೆ ಫೈನಲ್‌ ಪ್ರವೇಶಿಸಿದ ಆಸ್ಟ್ರೇಲಿಯಾ

ಭಾರತ ಮತ್ತೊಮ್ಮೆ ನಾಕೌಟ್ ಆಟದ ಒತ್ತಡದಲ್ಲಿ ಸೊರಗಿತು, ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಗುರುವಾರ ಐದು ರನ್ ಗಳ ಜಯದೊಂದಿಗೆ ಸತತ ಏಳನೇ ಮಹಿಳಾ ಟಿ20 ವಿಶ್ವಕಪ್ ಫೈನಲ್ ಪ್ರವೇಶಿಸಿತು.
ಸೆಮಿಫೈನಲ್‌ನಲ್ಲಿ ಬ್ಯಾಟಿಂಗ್ ಆಯ್ಕೆ ಮಾಡಿದ ಆಯ್ದುಕೊಂಡ ಆಸ್ಟ್ರೇಲಿಯಾ ಭಾರತದ ಕಳಪೆ ಫೀಲ್ಡಿಂಗ್‌ನಿಂದಾಗಿ ಆಸ್ಟ್ರೇಲಿಯಾ ನಾಲ್ಕು ವಿಕೆಟ್‌ಗಳಿಗೆ 172 ರನ್ ಗಳಿಸಲು ಶಕ್ತವಾಯಿತು.
ಗುರಿ ಬೆನ್ನಟ್ಟಿದ ಬಾರತ ಮೂರು ವಿಕೆಟ್‌ಗೆ 28 ರನ್‌ಗಳಿಸಿ ದುಸ್ಥಿತಿಯಲ್ಲಿದ್ದಾಗ ಭಾರತಕ್ಕೆ ನಾಯಕಿ ಹರ್ಮನ್‌ಪ್ರೀತ್ (34 ಎಸೆತಗಳಲ್ಲಿ 52) ಮತ್ತು ಜೆಮಿಮಾ ರಾಡ್ರಿಗಸ್ (24 ಎಸೆತಗಳಲ್ಲಿ 43) ಕೇವಲ 41 ಎಸೆತಗಳಲ್ಲಿ 69 ರನ್‌ಗಳಿಸಿ ಗೆಲುವಿನ ಆಸೆ ಚಿಗುರಿಸಿದರು.
ಭಾರತಕ್ಕೆ ಕೊನೆಯ 30 ಎಸೆತಗಳಲ್ಲಿ 39 ರನ್‌ಗಳ ಅಗತ್ಯವಿತ್ತು ಹಾಗೂ ಐದು ವಿಕೆಟ್‌ಗಳು ಕೈಯಲ್ಲಿದ್ದವು. ಆದರೆ ಕೊನೆ ಕ್ಷಣದ ಒತ್ತಡವನ್ನು ನಿರ್ವಹಿಸಲಾಗದೆ ಕೇವಲ ಐದು ರನ್‌ಗಳಿಂದ ಸೋಲುವಂತಾಯಿತು., ಭಾರತ ತಂಡವು ಎಂಟು ವಿಕೆಟ್‌ಗಳಿಗೆ 167 ರನ್‌ ಗಳಿಸಿತು..
ಭಾರತ ಹಿಂದಿನ ವಿಶ್ವಕಪ್ ಫೈನಲ್‌ನಲ್ಲಿ ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಸೋತಿತ್ತು ಮತ್ತು ಕಳೆದ ವರ್ಷ ಕಾಮನ್‌ವೆಲ್ತ್‌ ಫೈನಲ್‌ನಲ್ಲಿ ಸೋತಿತ್ತು.
ಸ್ಫೋಟಕ ಬ್ಯಾಟರ್‌ ಶಫಾಲಿ ವರ್ಮಾ ಮತ್ತು ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನ ಅವರನ್ನು ಭಾರತ ಬೇಗನೆ ಕಳೆದುಕೊಂಡಿತು. ನಂತರ ಜೆಮಿಮಾ ಮತ್ತು ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್‌ ತಂಡವನ್ನು ಗೆಲುವಿನ ಸನಿಹಕ್ಕೆ ಕೊಂಡೊಯ್ದರು.
10 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 93 ರನ್ ಗಳಿಸಿದ್ದಾಗ, ಭಾರತವು ಗೆಲುವಿನ ಹಾದಿಯಲ್ಲಿದೆ ಎಂದು ಭಾವಿಸಲಾಗಿತ್ತು. ಬೌನ್ಸರ್ ಡಾರ್ಸಿ ಬ್ರೌನ್‌ ಅವರು ಬೌಲಿಂಗ್‌ನಲ್ಲಿ ಹರ್ಮನ್‌ಪ್ರೀತ್ ರನ್‌ ಔಟಾದರು. ಕೊನೆಯ ಐದು ಓವರ್‌ಗಳಲ್ಲಿ ಆಸ್ಟ್ರೇಲಿಯಾ 59 ರನ್‌ಗಳನ್ನು ನೀಡಿತು. ಆದರೆ ಭಾರತ ಅದನ್ನು ಗೆಲುವಾಗಿ ಪರಿವರ್ತಿಸಲು ವಿಫಲವಾಯಿತು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement