ಸ್ನೇಹ ಎಂಬುದು ಕೇವಲ ಮಾನವನಿಗೆ ಮಾತ್ರ ಸೀಮಿತವಾಗಿಲ್ಲ, ಇದು ಇತರ ಪ್ರಾಣಿಗಳಲ್ಲಿಯೂ ಇದು ಕಂಡುಬರುತ್ತದೆ. ಅವುಗಳು ಸ್ಬೇಹಕ್ಕೆ ಬಹಳ ಮಹತ್ವ ಕೊಡುತ್ತವೆ. ಇದು ಜಗತ್ತಿನ ಎಲ್ಲ ಜೀವಿಗಳಿಗೂ ಬೆಲೆ ಕಟ್ಟಲಾಗದ ನಿಧಿ. ಸೋಶಿಯಲ್ ಮೀಡಿಯಾದಲ್ಲಿ ಇಂತಹ ಮಧುರ ಬಾಂಧವ್ಯವನ್ನು ಸಾರುವ ವೀಡಿಯೊವೊಂದು ವೈರಲ್ ಆಗಿದೆ.
ಇದರಲ್ಲಿ ಕೊಕ್ಕರೆ ಮತ್ತು ವ್ಯಕ್ತಿಯೊಬ್ಬರ ನಡುವಿನ ಮಧುರ ಬಾಂಧವ್ಯವನ್ನು ಕಾಣಬಹುದಾಗಿದೆ. ಇವರಿಬ್ಬರ ಸ್ನೇಹ ಅದೆಷ್ಟು ಗಾಢವಾಗಿದೆ ಎಂದರೆ ಕೊಕ್ಕರೆ ಸದಾ ಆ ವ್ಯಕ್ತಿಯನ್ನೇ ಹಿಂಬಾಲಿಸುತ್ತದೆ, ಆತ ಬೈಕ್ ಮೇಲೆ ಹೋದರೂ ಅದು ಆತನನ್ನು ಹಿಂಬಾಲಿಸಿಕೊಂಡು ಹೋಗುತ್ತದೆ.
ಐಎಎಸ್ ಅಧಿಕಾರಿ ಅವನೀಶ್ ಶರಣ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೊ ಕ್ಲಿಪ್‌ನಲ್ಲಿ ದ್ವಿಚಕ್ರ ವಾಹನದಲ್ಲಿ ಸಾಗುತ್ತಿರುವ ವ್ಯಕ್ತಿಯೊಬ್ಬರನ್ನು ಕೊಕ್ಕರೆಯೊಂದು ಹಿಂಬಾಲಿಸಿಕೊಂಡು ಹೋಗುತ್ತಿರುವ ದೃಶ್ಯವನ್ನು ನೋಡಬಹುದು.
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155
ಆ ವ್ಯಕ್ತಿಯ ಹೆಸರು ಮೊಹಮ್ಮದ್ ಆರಿಫ್. ಇವರು ಉತ್ತರ ಪ್ರದೇಶದ ಅಮೇಥಿಯವರು. ಇಷ್ಟಕ್ಕೂ ಈ ಸ್ನೇಹಕ್ಕೆ ಕಾರಣ ಮೊಹಮ್ಮದ್ ಆರಿಫ್ ಅವರು ಒಂದು ವರ್ಷದ ಹಿಂದೆ ಜಮೀನಿನಲ್ಲಿ ಗಾಯಗೊಂಡು ಬಿದ್ದಿದ್ದ ಈ ಕೊಕ್ಕರೆಯನ್ನು ರಕ್ಷಿಸಿ ಆರೈಕೆ ಮಾಡಿದ್ದರು. ಬಳಿಕ ಚೇತರಿಸಿಕೊಂಡ ಈ ಹಕ್ಕಿ ಹಾರಲು ಆರಂಭಿಸಿತ್ತು. ಆದರೆ, ತಾನು ಚೇತರಿಸಿಕೊಂಡ ಬಳಿಕ ಈ ಕೊಕ್ಕರೆ ಬೇರೆಡೆ ಹಾರಿ ಹೋಗಲಿಲ್ಲ. ಬದಲಾಗಿ ಅವರೊಂದಿಗೇ ಉಳಿದಿದೆ. ಅಷ್ಟೇ ಅಲ್ಲ, ಆರಿಫ್ ಅವರು ಹೋದಲ್ಲಿಗೇ ಈ ಕೊಕ್ಕರೆಯೂ ಅವರನ್ನು ಹಿಂಬಾಲಿಸಿಕೊಂಡು ಹೋಗುತ್ತದೆ.
ವೀಡಿಯೊ ನೋಡಿದ ತಕ್ಷಣ ಎಲ್ಲರೂ ಈ ದೃಶ್ಯಕ್ಕೆ ಫಿದಾ ಆಗಿದ್ದಾರೆ. ಈ ಸ್ನೇಹ ಎಲ್ಲರ ಹೃದಯ ಗೆದ್ದಿದೆ. ಹೀಗಾಗಿ, ಈ ವಿಡಿಯೋ ಈಗ ಸಾಕಷ್ಟು ವೀಕ್ಷಣೆಯನ್ನೂ ಗಳಿಸಿದೆ. ಈ ದೃಶ್ಯ ಕಂಡ ಬಹುತೇಕರು ಅಚ್ಚರಿ ವ್ಯಕ್ತಪಡಿಸಿದರೆ, ಸಾಕಷ್ಟು ಮಂದಿ ಮೆಚ್ಚುಗೆಯ ವ್ಯಕ್ತಪಡಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ