ಎಂಥ ಲೋಕವಯ್ಯಾ..: ಬದುಕಿದ್ದಾಗ ಎಷ್ಟೇ ಪ್ರಯತ್ನಿಸಿದ್ರೂ ವರ್ಗಾವಣೆ ಆಗಲಿಲ್ಲ, ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡ 66 ದಿನಗಳ ನಂತರ ವರ್ಗಾವಣೆಗೆ ಆದೇಶ…!

ಶಿವಪುರಿ: ಮಧ್ಯಪ್ರದೇಶ ಆರೋಗ್ಯ ಇಲಾಖೆಯ ವಿಚಿತ್ರ ವಿದ್ಯಮಾನವೊಂದು ಬೆಳಕಿಗೆ ಬಂದಿದೆ. ಶಿವಪುರಿಯಲ್ಲಿ ಮಹಿಳಾ ನರ್ಸ್‌ ಒಬ್ಬರು ಮೃತಪಟ್ಟ 66 ದಿನಗಳ ಬಳಿಕ ಆರೋಗ್ಯ ಇಲಾಖೆಯು ನರ್ಸ್ ಅನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ….!
ಬದುಕಿರುವಾಗ ಈ ಮಹಿಳಾ ಶುಶ್ರೂಷಕಿ ತನ್ನನ್ನು ವರ್ಗಾವಣೆ ಮಾಡುವಂತೆ ಇಲಾಖೆಯ ಹಲವು ಅಧಿಕಾರಿಗಳಿಗೆ ಹಲವು ಬಾರಿ ಮನವಿ ಅರ್ಜಿ ಸಲ್ಲಿಸಿದ್ದರು. ಆದರೆ ಆಕೆಯ ವರ್ಗಾವಣೆ ಆಗಿರಲಿಲ್ಲ, ನಂತರ ನರ್ಸ್ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗ ಅವರ ನಿಧನದ 66 ದಿನಗಳ ನಂತರ ಅವರ ವರ್ಗಾವಣೆ ಆದೇಶವನ್ನು ಹೊರಡಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸ್ ತನ್ವಿ ದಾಬ್ಡೆ ಬೇತುಲ್ ನಿವಾಸಿಯಾಗಿದ್ದರು. ತನ್ವಿ ತನ್ನನ್ನು ವರ್ಗಾವಣೆ ಮಾಡುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರು. ಇದಾದ ನಂತರ ಖಿನ್ನತೆಗೆ ಒಳಗಾಗಿ ತನ್ವಿ ಆತ್ಮಹತ್ಯೆ ಮಾಡಿಕೊಂಡಿದ್ದರು.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

90-90 ಗಂಟೆಗಳ ಕರ್ತವ್ಯ, ಖಿನ್ನತೆಯಲ್ಲಿ ನಿರ್ಧಾರ…
ಡಿಸೆಂಬರ್ ತಿಂಗಳಿನಲ್ಲಿ ಗುತ್ತಿಗೆ ಆರೋಗ್ಯ ಕಾರ್ಯಕರ್ತರು ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾಗ ಖೋಡ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತನ್ವಿಯನ್ನು 90-90 ಗಂಟೆಗಳ ಕಾಲ ನಿರಂತರವಾಗಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ನರ್ಸ್ 2022ರ ಡಿಸೆಂಬರ್ 20ರಂದು ಆತ್ಮಹತ್ಯೆ ಮಾಡಿಕೊಂಡಿದ್ದಳು. ವಾರ್ಡ್ ಬಾಯ್ ಈಕೆಯನ್ನು ಡ್ಯೂಟಿಗೆ ಬರುವಂತೆ ಕರೆಯಲು ಹೋದಾಗ ಘಟನೆ ಈ ಬೆಳಕಿಗೆ ಬಂದಿತ್ತು. ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿ ತನ್ನ ಕೋಣೆಯಲ್ಲಿ ಬಿದ್ದಿದ್ದಳು. ಅದೇ ಕೋಣೆಯಲ್ಲಿ ನಿದ್ರೆ ಮಾತ್ರೆಗಳೂ ಪತ್ತೆಯಾಗಿದ್ದವು. ನಂತರ ಆಕೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊನೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಳು. ಆಕೆ ನಿದ್ರೆ ಮಾತ್ರೆಗಳನ್ನು ಸೇವಿಸಿದ್ದಳು. ನಿದ್ದೆ ಮಾತ್ರೆಗಳನ್ನು ಅತಿಯಾಗಿ ಸೇವಿಸಿದ್ದರಿಂದ ತನ್ವಿ ಮೃತಪಟ್ಟಿದ್ದಾಳೆ. ಆರೋಗ್ಯ ಇಲಾಖೆಯವರು ಅಜ್ಞಾತ ಕಾರಣಗಳಿಂದ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದರು.
ಮರಣದ 66 ದಿನಗಳ ನಂತರ ವರ್ಗಾವಣೆ ಆದೇಶ
ಕಳೆದ ಮಂಗಳವಾರ ಆರೋಗ್ಯ ಇಲಾಖೆ ಶುಶ್ರೂಷಕರ ವರ್ಗಾವಣೆ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಕೆಲ ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದ ತನ್ವಿ ಹೆಸರು ಸೇರಿದೆ. ಬೇತುಲ್ ನಿವಾಸಿ 28 ವರ್ಷದ ತನ್ವಿಯನ್ನು ದಾಬ್ಡೆ ಖೋಡ್‌ನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಿಯೋಜಿಸಲಾಗಿದೆ ಎಂದು ಹೇಳಲಾಗುತ್ತಿದೆ. 66 ದಿನಗಳ ಹಿಂದೆ ಇವರ ಸಾವು ಸಂಭವಿಸಿದೆ.

ಇಂದಿನ ಪ್ರಮುಖ ಸುದ್ದಿ :-   ಸಚಿವ ನಿತಿನ್ ಗಡ್ಕರಿಗೆ ಬೆದರಿಕೆ ಕರೆ : ಬೆಳಗಾವಿಯಿಂದ ಶಂಕಿತನನ್ನು ಕರೆದೊಯ್ದ ನಾಗ್ಪುರ ಪೊಲೀಸರು

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

0 / 5. ಒಟ್ಟು ವೋಟುಗಳು 0

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement