ಡಿಕ್ಕಿ ಹೊಡೆದ ನಂತರ ಕೆಳಗೆ ಸಿಲುಕಿದ ಸ್ಕೂಟರ್‌ ಅನ್ನು 2 ಕಿಮೀಗೂ ದೂರ ಎಳೆದೊಯ್ದ ಡಂಪರ್ ಟ್ರಕ್ : ಬಾಲಕ ಸೇರಿ ಇಬ್ಬರು ಸಾವು- ರಸ್ತೆಗೆ ಕಲ್ಲು ಹಾಕಿ ಲಾರಿ ತಡೆದ ಸ್ಥಳೀಯರು..!

ಮತ್ತೊಂದು ಹಿಟ್ ಅಂಡ್ ಡ್ರ್ಯಾಗ್ ಪ್ರಕರಣದಲ್ಲಿ, ಉತ್ತರ ಪ್ರದೇಶದ ಮಹೋಬಾದಲ್ಲಿ ಟ್ರಕ್ ಅಡಿ ಸಿಲುಕಿದ ಆರು ವರ್ಷದ ಮಗುವನ್ನು ಬೈಕ್‌ ಸಮೇತ ಟ್ರಕ್‌ ಎರಡು ಕಿಲೋಮೀಟರ್‌ಗೂ ಹೆಚ್ಚು ದೂರ ಟ್ರಕ್‌ ಎಳೆದೊಯ್ದ ನಂತರ ಬಾಲಕ ಮೃತಪಟ್ಟಿದ್ದಾನೆ.
ಈ ದುರ್ಘಟನೆಯಲ್ಲಿ ಸಾತ್ವಿಕ್ ಹಾಗೂ ಆತನ ಅಜ್ಜ ಇಬ್ಬರು ಮೃತಪಟ್ಟಿದ್ದಾರೆ. ಉದಿತ್ ನಾರಾಯಣ ಚಾನ್ಸೋರಿಯಾ (67) ಮತ್ತು ಅವರ ಮೊಮ್ಮಗ ಸಾತ್ವಿಕ್ ಅವರು ಮಾರುಕಟ್ಟೆಗೆ ಹೋಗುತ್ತಿದ್ದಾಗ ಅವರ ಸ್ಕೂಟರಿಗೆ ವೇಗವಾಗಿ ಬಂದ ಡಂಪರ್ ಟ್ರಕ್ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಉದಿತ್ ಅವರು ಸ್ಥಳದಲ್ಲೇ ಮೃತಪಟ್ಟರೆ ಟ್ರಕ್‌ ಅಡಿ ಸಿಲುಕಿದ ಸಾತ್ವಿಕ್ ಮತ್ತು ದ್ವಿಚಕ್ರ ವಾಹನವನ್ನು ಟ್ರಕ್‌ ಎರಡು ಕಿಲೋಮೀಟರ್‌ಗೂ ಹೆಚ್ಚು ದೂರ ಎಳೆದೊಯ್ದಿದೆ.
ವರದಿಗಳ ಪ್ರಕಾರ, ಫೆಬ್ರವರಿ 25 ರಂದು ವಯಸ್ಸಾದ ವ್ಯಕ್ತಿ ಮತ್ತು ಅವರ ಮೊಮ್ಮಗ ಸ್ಕೂಟರ್‌ನಲ್ಲಿ ಶಾಪಿಂಗ್ ಮಾಡಲು ಹೊರಟಿದ್ದಾಗ ಘಟನೆ ಸಂಭವಿಸಿದೆ. ವೀಡಿಯೊದಲ್ಲಿ, ಡಂಪರ್ ಟ್ರಕ್ ಅಡಿಯಲ್ಲಿ ಸಿಲುಕಿಕೊಂಡಿದ್ದ ಸ್ಕೂಟರ್ ಅನ್ನು ಅದು ಎಳೆಯುತ್ತ ರಸ್ತೆಯಲ್ಲಿ ಸಾಗುವುದನ್ನು ನೋಡಬಹುದು. ಸ್ಕೂಟರ್ ಅನ್ನು ಎಳೆಯುತ್ತಿದ್ದಂತೆ ಒಳಗಿನಿಂದ ಕಿಡಿಗಳು ಬರುತ್ತಿರುವುದನ್ನು ಸಹ ವೀಡಿಯೊ ತೋರಿಸುತ್ತದೆ.

ಪ್ರಮುಖ ಸುದ್ದಿ :-   ಮೈಸೂರು ಅನಂತಸ್ವಾಮಿ ಧಾಟಿಯಲ್ಲಿ ನಾಡಗೀತೆ : ರಾಜ್ಯ ಸರ್ಕಾರದ ಆದೇಶ ಎತ್ತಿ ಹಿಡಿದ ಹೈಕೋರ್ಟ್‌ ; ದಶಕಗಳ ಸಮಸ್ಯೆಗೆ ತೆರೆ

ಕಾನ್ಪುರ-ಸಾಗರ ಹೆದ್ದಾರಿ NH86 ನಲ್ಲಿ ಈ ಘಟನೆ ನಡೆದಿದೆ. ಅದನ್ನು ರೆಕಾರ್ಡ್ ಮಾಡುತ್ತಿರುವ ವ್ಯಕ್ತಿ ಮತ್ತು ಇತರರು ಟ್ರಕ್‌ನ ಹಿಂಬಾಲಿಸಿ ವಾಹನದಲ್ಲಿ ಸಾಗುತ್ತಿದ್ದು, ಟ್ರಕ್ ಡ್ರೈವರ್‌ಗೆ ಕೆಳಗೆ ಸ್ಕೂಟರ್ ಸಿಕ್ಕಿಹಾಕಿಕೊಂಡಿದೆ, ಗಾಡಿ ನಿಲ್ಲಿಸು ಎಂದು ಕೂಗಿ ಹೇಳುವುದನ್ನು ವೀಡಿಯೊ ತೋರಿಸುತ್ತದೆ. ಆದರೆ, ಟ್ರಕ್ ಚಾಲಕ ವಾಹನ ಚಲಾಯಿಸುತ್ತಲೇ ಇದ್ದಾನೆ ಮತ್ತು ಈ ಬಗ್ಗೆ ಜನರು ಎಚ್ಚರಿಸಿದ್ದನ್ನೂ ನಿರ್ಲಕ್ಷಿಸಿದ್ದಾನೆ. ಅವರು ಎಷ್ಟೇ ಪ್ರಯತ್ನಿಸಿದರೂ ಚಾಲಕ ವಾಹನ ನಿಲ್ಲಿಸದಿದ್ದಾಗ ಪಕ್ಕದಲ್ಲಿ ಸಾಗುತ್ತಿದ್ದವರು ವಾಹನಕ್ಕೆ ಕಲ್ಲು ಹೊಡೆದಿದ್ದಾರೆ, ಆಗಲೂ ನಿಲ್ಲಿಸದಿದ್ದಾಗ ಮುಂದಕ್ಕೆ ವಾಹನ ಚಲಾಯಿಸಿಕೊಂಡು ಹೋಗಿ ರಸ್ತೆಗೆ ಕಲ್ಲು-ಬಂಡೆಗಳನ್ನು ಹಾಕಿ ತಡೆದ ನಂತರ ಚಾಲಕ ಲಾರಿ ನಿಲ್ಲಿಸಿದ್ದಾನೆ. ತಕ್ಷಣವೇ ಬಾಲಕನನ್ನು ಆಸ್ಪತ್ರೆಗೆ ಒಯ್ಯಲಾಯಿತು, ಆದರೆ ವೈದ್ಯರು ಬಾಲಕ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಲಾರಿ ಚಾಲಕನಿಗೆ ಸ್ಥಳೀಯರು ಥಳಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ಚಾಲಕನನ್ನು ಬಂಧಿಸಿ ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಕುರಿತು ತನಿಖೆ ನಡೆಯುತ್ತಿದ್ದು, ಈ ಸಂಬಂಧ ಪೊಲೀಸರು ಪ್ರಕರಣವನ್ನೂ ದಾಖಲಿಸಿಕೊಂಡಿದ್ದಾರೆ.
ಒಬ್ಬ ಬಳಕೆದಾರರು ದೇಶದಲ್ಲಿ ಏನಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ ಮತ್ತು ಜನರಲ್ಲಿ ಮಾನವೀಯತೆಯ ಕೊರತೆಯನ್ನು ಪ್ರಶ್ನಿಸಿದ್ದಾರೆ.
ಒಬ್ಬ ಬಳಕೆದಾರರು ಈ ಘಟನೆಯನ್ನು ಖಂಡಿಸಿದರು ಮತ್ತು ಆರೋಪಿಗಳನ್ನು ಅವರ ಕಾರ್ಯಗಳಿಗಾಗಿ ಕಠಿಣವಾಗಿ ಶಿಕ್ಷಿಸಬೇಕು ಎಂದು ಬರೆದಿದ್ದಾರೆ.

ಪ್ರಮುಖ ಸುದ್ದಿ :-   'ಅನುಮಾನ ಆಧರಿಸಿ ಇವಿಎಂ ವಿರುದ್ಧ ನಿರ್ದೇಶನ ನೀಡಲು ಸಾಧ್ಯವೇ? : ಸುಪ್ರೀಂ ಕೋರ್ಟ್ ಪ್ರಶ್ನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement