8 ತಾಸುಗಳ ವಿಚಾರಣೆಯ ನಂತರ ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಅವರನ್ನು ಯಾಕೆ ಬಂಧಿಸಲಾಯಿತು ಎಂದು ಹೇಳಿದ ಸಿಬಿಐ

ನವದೆಹಲಿ: ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಎಂಟು ಗಂಟೆಗಳ ಕಾಲ ವಿಚಾರಣೆ ನಡೆಸಿದ ನಂತರ ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಭಾನುವಾರ ಸಂಜೆ ಬಂಧಿಸಿದೆ. ಇವರು ಬಂಧನಕ್ಕೊಳಗಾದ ಎರಡನೇ ದೆಹಲಿ ಸಚಿವರಾಗಿದ್ದಾರೆ.
ವಿಚಾರಣೆ ವೇಳೆ ಮನೀಶ್ ಸಿಸೋಡಿಯಾ ಅವರ ಉತ್ತರಗಳು ತೃಪ್ತಿಕರವಾಗಿಲ್ಲ ಎಂದು ಕೇಂದ್ರ ತನಿಖಾ ದಳ (ಸಿಬಿಐ) ತಿಳಿಸಿದೆ.
2021-22ರ ಅಬಕಾರಿ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿ ಆಪಾದಿತ ಅಕ್ರಮಗಳ ಬಗ್ಗೆ ತನಿಖೆಗಾಗಿ ಉಪಮುಖ್ಯಮಂತ್ರಿ ಮತ್ತು ಉಸ್ತುವಾರಿ ಅಬಕಾರಿ ಸಚಿವ, ದೆಹಲಿಯ ಜಿಎನ್‌ಸಿಟಿಡಿ ಮತ್ತು ಇತರ 14 ಜನರ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಸಿಬಿಐ ಹೇಳಿಕೆಯಲ್ಲಿ ತಿಳಿಸಿದೆ.
ಭಾನುವಾರ ಬೆಳಗ್ಗೆ 11 ಗಂಟೆಗೆ ಸಿಬಿಐ ಕೇಂದ್ರ ಕಚೇರಿಗೆ ಆಗಮಿಸಿದ್ದ ಮನೀಶ್ ಸಿಸೋಡಿಯಾ ಅವರನ್ನು ಸುಮಾರು ಎಂಟು ಗಂಟೆಗಳ ಕಾಲ ವಿಚಾರಣೆ ನಡೆಸಲಾಯಿತು. ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾದ ದಿನೇಶ್ ಅರೋರಾ ಮತ್ತು ಇತರ ಆರೋಪಿಗಳೊಂದಿಗೆ ಆಪಾದಿತ ಸಂಪರ್ಕ, ಮತ್ತು ಅನೇಕ ಫೋನ್‌ಗಳಿಂದ ಸಂದೇಶ ವಿನಿಮಯದ ವಿವರಗಳು ಸೇರಿದಂತೆ ಅಬಕಾರಿ ನೀತಿಯ ವಿವಿಧ ಅಂಶಗಳ ಮೇಲೆ ಆಮ್ ಆದ್ಮಿ ಪಕ್ಷದ ನಾಯಕನನ್ನು ಗ್ರಿಲ್ ಮಾಡಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಇವಿಎಂ ಮತಗಳ ಜೊತೆ ವಿವಿಪ್ಯಾಟ್ ಮತಗಳ ಸಂಪೂರ್ಣ ಎಣಿಕೆ : ಎಲ್ಲ ಅರ್ಜಿಗಳನ್ನು ವಜಾ ಮಾಡಿದ ಸುಪ್ರೀಂ ಕೋರ್ಟ್

ಮನೀಶ್‌ ಸಿಸೋಡಿಯಾ ಅವರು ತನಿಖೆಗೆ ಸಹಕರಿಸುತ್ತಿಲ್ಲ ಎಂದು ತನಿಖಾಧಿಕಾರಿಗಳು ಭಾವಿಸಿದ್ದಾರೆ ಎಂದು ಏಜೆನ್ಸಿ ಅಧಿಕಾರಿಗಳು ತಿಳಿಸಿದ್ದಾರೆ.
ನಿರ್ಣಾಯಕ ಅಂಶಗಳ ಬಗ್ಗೆ ಅಧಿಕಾರಿಗಳು ಕೇಳಿದ ಸ್ಪಷ್ಟೀಕರಣವನ್ನು ಮನೀಶ್ ಸಿಸೋಡಿಯಾ ನೀಡಿಲ್ಲ ಎಂದು ಅವರು ಹೇಳಿದ್ದಾರೆ.
“ಅವರು (ಮನೀಷ್ ಸಿಸೋಡಿಯಾ) ತಪ್ಪಿಸಿಕೊಳ್ಳುವ ಉತ್ತರಗಳನ್ನು ನೀಡಿದರು ಮತ್ತು ಅವರ ಹೇಳಿಕೆಗಳಿಗೆ ವ್ಯತಿರಿಕ್ತ ಸಾಕ್ಷ್ಯವನ್ನು ನೀಡಿದರೂ ತನಿಖೆಗೆ ಸಹಕರಿಸಲಿಲ್ಲ” ಎಂದು ಸಿಬಿಐ ಹೇಳಿದೆ.ಸಿಸೋಡಿಯಾ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಲು ಕಸ್ಟಡಿ ವಿಚಾರಣೆ ಅಗತ್ಯ ಎಂದು ಭಾವಿಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.ದೆಹಲಿ ಸಚಿವರನ್ನು ನಾಳೆ ನಿಗದಿತ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಸಿಬಿಐ ತಿಳಿಸಿದೆ.
ತನ್ನ ವಿರುದ್ಧದ ಪ್ರಕರಣವನ್ನು “ನಕಲಿ” ಎಂದು ಕರೆದ ಮನೀಶ ಸಿಸೋಡಿಯಾ ಅವರು ಏಳೆಂಟು ತಿಂಗಳ ಜೈಲು ಶಿಕ್ಷೆಗೆ ಸಿದ್ಧ ಎಂದು ಸಿಬಿಐ ವಿಚಾರಣೆ ಎದುರಿಸುವ ಮೊದಲು ಹೇಳಿದ್ದರು.

4 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement