ಶೂನ್ಯ-ಕ್ಯಾಲೋರಿ ಕೃತಕ ಸಿಹಿಕಾರಕ ಎರಿಥ್ರಿಟಾಲ್ ಹೃದಯಾಘಾತ, ಪಾರ್ಶ್ವವಾಯು ಅಪಾಯ ಹೆಚ್ಚಿಸುತ್ತದೆ: ಹೊಸ ಅಧ್ಯಯನ

ಪ್ರತಿಷ್ಠಿತ ಕ್ಲೀವ್ಲ್ಯಾಂಡ್ ಕ್ಲಿನಿಕ್ ನಡೆಸಿದ ಹೊಸ ಸಂಶೋಧನೆಯು ಎರಿಥ್ರಿಟಾಲ್ ಎಂಬ ಜನಪ್ರಿಯ ಕೃತಕ ಸಿಹಿಕಾರಕ ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ ಎಂದು ತೋರಿಸಿದೆ. ಆವಿಷ್ಕಾರಗಳನ್ನು ಫೆಬ್ರವರಿ 27 ರಂದು ನೇಚರ್ ಮೆಡಿಸಿನ್‌ನಲ್ಲಿ ಪ್ರಕಟಿಸಲಾಗಿದೆ.
ಆವಿಷ್ಕಾರಗಳ ಪ್ರಕಾರ, ಹೃದ್ರೋಗಕ್ಕೆ ಅಸ್ತಿತ್ವದಲ್ಲಿರುವ ಅಪಾಯಕಾರಿ ಅಂಶಗಳಿರುವ ಜನರು ಅವರ ರಕ್ತದಲ್ಲಿ ಎರಿಥ್ರಿಟಾಲ್‌ನ ಹೆಚ್ಚಿನ ಮಟ್ಟ ಹೊಂದಿದ್ದರೆ ಹೃದಯಾಘಾತ ಅಥವಾ ಪಾರ್ಶ್ವವಾಯು ಅನುಭವಿಸುವ ಸಾಧ್ಯತೆ ಎರಡು ಪಟ್ಟು ಹೆಚ್ಚು ಎಂದು ತೋರಿಸಿದೆ.
ಸಂಶೋಧಕರು ಅಮೆರಿಕ ಮತ್ತು ಯುರೋಪ್‌ನಲ್ಲಿ 4,000 ಕ್ಕೂ ಹೆಚ್ಚು ಜನರಲ್ಲಿ ಅಧ್ಯಯನ ಮಾಡಿದರು ಮತ್ತು ಹೆಚ್ಚಿನ ರಕ್ತದ ಎರಿಥ್ರಿಟಾಲ್ ಮಟ್ಟವನ್ನು ಹೊಂದಿರುವವರು ಹೃದಯಾಘಾತ, ಪಾರ್ಶ್ವವಾಯು ಅಥವಾ ಸಾವಿನಂತಹ ಪ್ರಮುಖ ಪ್ರತಿಕೂಲ ಹೃದಯ ಸಂಬಂಧೀ ಘಟನೆಗೆ ಕಾರಣವಾಗುವ ಹೆಚ್ಚಿನ ಅಪಾಯವನ್ನು ಹೊಂದಿದ್ದಾರೆ ಎಂದು ಕ್ಲೀವ್‌ಲ್ಯಾಂಡ್ ಕ್ಲಿನಿಕ್ ವೆಬ್‌ಸೈಟ್‌ನಲ್ಲಿನ ಹೇಳಿಕೆಯೊಂದು ತಿಳಿಸಿದೆ.
ಸಂಶೋಧಕರು ಸಂಪೂರ್ಣ ರಕ್ತ ಅಥವಾ ಪ್ರತ್ಯೇಕವಾದ ಪ್ಲೇಟ್‌ಲೆಟ್‌ಗಳಿಗೆ ಎರಿಥ್ರಿಟಾಲ್ ಸೇರಿಸಿದ ನಂತರದ ಪರಿಣಾಮಗಳನ್ನು ಪರಿಶೀಲಿಸಿದರು, ಅವು ಜೀವಕೋಶದ ತುಣುಕುಗಳು ರಕ್ತಸ್ರಾವವನ್ನು ನಿಲ್ಲಿಸಲು ಮತ್ತು ರಕ್ತ ಹೆಪ್ಪುಗಟ್ಟುವಿಕೆ ಹೆಚ್ಚುವಂತೆ ಮಾಡುತ್ತದೆ. ಎರಿಥ್ರಿಟಾಲ್ ಪ್ಲೇಟ್‌ಲೆಟ್‌ಗಳನ್ನು ಸಕ್ರಿಯಗೊಳಿಸಲು ಮತ್ತು ಹೆಪ್ಪುಗಟ್ಟುವಿಕೆಯನ್ನು ಸುಲಭಗೊಳಿಸುತ್ತದೆ ಎಂದು ಫಲಿತಾಂಶಗಳು ಬಹಿರಂಗಪಡಿಸಿದವು. ಪೂರ್ವ ಕ್ಲಿನಿಕಲ್ ಅಧ್ಯಯನಗಳು ಎರಿಥ್ರಿಟಾಲ್ ಸೇವನೆಯು ಹೆಪ್ಪುಗಟ್ಟುವಿಕೆಯ ರಚನೆಯನ್ನು ಹೆಚ್ಚಿಸಿದೆ ಎಂದು ದೃಢಪಡಿಸಿತು.

ಎರಿಥ್ರಿಟಾಲ್‌ನಂತಹ ಸಿಹಿಕಾರಕಗಳು ಇತ್ತೀಚಿನ ವರ್ಷಗಳಲ್ಲಿ ಜನಪ್ರಿಯತೆ ಪಡೆದುಕೊಂಡಿವೆ. ಆದರೆ ಅವುಗಳ ದೀರ್ಘಕಾಲೀನ ಪರಿಣಾಮಗಳ ಬಗ್ಗೆ ಹೆಚ್ಚು ಆಳವಾದ ಸಂಶೋಧನೆಯ ಅಗತ್ಯವಿದೆ” ಎಂದು ಹಿರಿಯ ಲೇಖಕ ಹಾಗೂ ಲರ್ನರ್ ರಿಸರ್ಚ್ ಇನ್ಸ್ಟಿಟ್ಯೂಟ್ನಲ್ಲಿ ಮೆಟಾಬಾಲಿಕ್ ಸೈನ್ಸಸ್ ಮತ್ತು ಕ್ಲೀವ್ಲ್ಯಾಂಡ್ ಕ್ಲಿನಿಕ್‌ನಲ್ಲಿ ಪ್ರಿವೆಂಟಿವ್ ಕಾರ್ಡಿಯಾಲಜಿಯ ಸಹ-ವಿಭಾಗದ ಮುಖ್ಯಸ್ಥ ಸ್ಟಾನ್ಲಿ ಹ್ಯಾಜೆನ್ ಹೇಳಿದ್ದಾರೆ.
ಹೃದಯರಕ್ತನಾಳದ ಆರೋಗ್ಯಕ್ಕೆ ಒಬ್ಬ ವ್ಯಕ್ತಿಯು ಏನು ತಿನ್ನುತ್ತಾನೆ ಮತ್ತು ನಮ್ಮ ಆಹಾರವು ಹೃದ್ರೋಗಕ್ಕೆ ಕಾಲಾನಂತರದಲ್ಲಿ ತೊಂದರೆಯನ್ನು ನೀಡುತ್ತದೆಯೇ ಎಂಬುದನ್ನು ಪರಿಶೀಲಿಸುವುದು ಬಹಳ ಮುಖ್ಯ ಎಂದು ಅವರು ಹೇಳುತ್ತಾರೆ.
ಎರಿಥ್ರಿಟಾಲ್ ಸಕ್ಕರೆಯಂತೆ ಶೇಕಡಾ 70 ರಷ್ಟು ಸಿಹಿಯಾಗಿರುತ್ತದೆ ಮತ್ತು ಹುದುಗುವ ಕಾರ್ನ್ ಮೂಲಕ ಉತ್ಪಾದಿಸಲಾಗುತ್ತದೆ. ಆದಾಗ್ಯೂ, ದೇಹವು ಎರಿಥ್ರಿಟಾಲ್ ಅನ್ನು ಸರಿಯಾಗಿ ಚಯಾಪಚ ಕ್ರಿಯೆಗೆ ಒಳಪಡಿಸುವುದಿಲ್ಲ ಎಂಬುದನ್ನು ಗಮನಿಸುವುದು ಮುಖ್ಯ. ಬದಲಾಗಿ, ಇದು ರಕ್ತಪ್ರವಾಹಕ್ಕೆ ಹೋಗುತ್ತದೆ ಮತ್ತು ಮುಖ್ಯವಾಗಿ ಮೂತ್ರದ ಮೂಲಕ ದೇಹವನ್ನು ಬಿಡುತ್ತದೆ.

ನಿರ್ದಿಷ್ಟವಾಗಿ ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯಗಳ ಮೇಲೆ, ವಿಶೇಷವಾಗಿ ಹೃದಯರಕ್ತನಾಳದ ಕಾಯಿಲೆಯಿಂದ ಹೆಚ್ಚಿನ ಅಪಾಯದಲ್ಲಿರುವ ಜನರಲ್ಲಿ ಎರಿಥ್ರಿಟಾಲ್‌ ಕೃತಕ ಸಿಹಿಕಾರಕಗಳ ದೀರ್ಘಕಾಲೀನ ಪರಿಣಾಮಗಳನ್ನು ಪರೀಕ್ಷಿಸಲು ಹೆಚ್ಚಿನ ಅಧ್ಯಯನ ಮುಖ್ಯ ಎಂದು ಡಾ ಸ್ಟಾನ್ಲಿ ಹ್ಯಾಜೆನ್ ಹೇಳಿದರು.
ಎರಿಥ್ರಿಟಾಲ್‌ನಂತಹ ಕೃತಕ ಸಿಹಿಕಾರಕಗಳು ಕಡಿಮೆ-ಕ್ಯಾಲೋರಿ, ಕಡಿಮೆ-ಕಾರ್ಬೋಹೈಡ್ರೇಟ್ ಮತ್ತು “ಕೀಟೊ” ಉತ್ಪನ್ನಗಳಲ್ಲಿ ಟೇಬಲ್ ಸಕ್ಕರೆಯ ಸಾಮಾನ್ಯ ಪರ್ಯಾಯಗಳಾಗಿವೆ. ಬೊಜ್ಜು, ಮಧುಮೇಹ ಅಥವಾ ಮೆಟಬಾಲಿಕ್ ಸಿಂಡ್ರೋಮ್ ಹೊಂದಿರುವ ಜನರಿಗೆ ಎರಿಥ್ರಿಟಾಲ್ ಹೊಂದಿರುವ ಸಕ್ಕರೆ-ಮುಕ್ತ ಉತ್ಪನ್ನಗಳನ್ನು ಹೆಚ್ಚಾಗಿ ಶಿಫಾರಸು ಮಾಡಲಾಗುತ್ತದೆ.

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement