ವಿವಾದಾತ್ಮಕ ಆಧ್ಯಾತ್ಮಿಕ ಗುರು ನಿತ್ಯಾನಂದ-‘ಕೈಲಾಸ’ ಕುರಿತ ಪ್ರಶ್ನೆಗಳಿಗೆ ʼಚಾಟ್‌ಜಿಪಿಟಿʼ ಕೊಟ್ಟ ಕುತೂಹಲಕಾರಿ ಉತ್ತರಗಳು ಇಲ್ಲಿವೆ…

‘ಕೈಲಾಸ’ ಎಂಬ ಹೆಸರಿನ ದೇಶ ಸ್ಥಾಪಿಸುವುದಾಗಿ ಘೋಷಿಸುವ ಮೂಲಕ ವಿಶ್ವದಾದ್ಯಂತ ಸುದ್ದಿಯ ಅಲೆಗಳನ್ನು ಸೃಷ್ಟಿಸಿದ ವಿವಾದಾತ್ಮಕ ದೇವಮಾನವ ನಿತ್ಯಾನಂದನ ಕೆಲವು ಪ್ರತಿನಿಧಿಗಳು ಇತ್ತೀಚಿಗೆ ವಿಶ್ವಸಂಸ್ಥೆ ಸಭೆಯೊಂದರಲ್ಲಿ ಭಾಗವಹಿಸಿದ ನಂತರ ಆತ ಮತ್ತೆ ಸುದ್ದಿಯಲ್ಲಿದ್ದಾನೆ ಮತ್ತು ಅದರ ವೀಡಿಯೊ ವೈರಲ್ ಆಗಿದೆ.
ನಿತ್ಯಾನಂದ ಅತ್ಯಾಚಾರದ ಆರೋಪ ಸೇರಿದಂತೆ ಹಲವಾರು ಪ್ರಕರಣಗಳನ್ನು ಎದುರಿಸುತ್ತಿದ್ದಾನೆ. ಆದರೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಭಾರತದಿಂದ ಪಲಾಯನ ಮಾಡಿದ್ದಾನೆ. ಹಾಗೂ ತನ್ನ ಮೇಲಿರುವ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾನೆ. ವಿವಿಧ ಕಾರಣಗಳಿಗಾಗಿ ಸುದ್ದಿಯಲ್ಲಿರುವ ಆತನ ಬಗ್ಗೆ ಮತ್ತು ಆತ ಮಾಡುತ್ತಿರುವ ಕೆಲಸದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಜನರಲ್ಲಿ ಆಸಕ್ತಿ ಇದೆ.
ಆದ್ದರಿಂದ ಸ್ವಯಂ ಘೋಷಿತ ದೇವಮಾನವನ ಕುರಿತು ಕೃತಕ ಬುದ್ಧಿಮತ್ತೆ (AI) ಚಾಟ್‌ಬಾಟ್‌ನ ಚಾಟ್‌ಜಿಪಿಟಿ(ChatGPT)ಯನ್ನು ಕೇಳಲು ನಿರ್ಧರಿಸಲಾಯಿತು. ಈ ಕೃತಕ ಬುದ್ಧಿಮತ್ತೆ ಅಪ್ಲಿಕೇಶನ್ ಕಳೆದ ವರ್ಷ ನವೆಂಬರ್‌ನಲ್ಲಿ ಅಧಿಕೃತವಾಗಿ ಪ್ರಾರಂಭವಾದಾಗಿನಿಂದ ಕವಿತೆಗಳು, ಭಾಷಣಗಳು ಮತ್ತು ಪರೀಕ್ಷೆಯ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಜನಪ್ರಿಯವಾಗಿದೆ. ಇದು ಇಂಟರ್ನೆಟ್‌ಗೆ ಸಂಪರ್ಕಗೊಂಡಿರುವುದರಿಂದ, ಚಾಟ್‌ ಜಿಪಿಟಿ (ChatGPT) ವಿವಿಧ ವಿಷಯಗಳ ಕುರಿತು ಸಂವಾದನಾತ್ಮಕ ರೀತಿಯಲ್ಲಿ ಪ್ರತ್ಯುತ್ತರ ನೀಡುತ್ತದೆ. ಚಾಟ್‌ಜಿಪಿಟಿಗೆ ಕೇಳಿದ ಪ್ರಶ್ನೆಗಳು ಹಾಗೂ ಅದು ನೀಡಿದ ಉತ್ತರಗಳು ಇಲ್ಲಿವೆ.

ಪ್ರಶ್ನೆ : ನಿತ್ಯಾನಂದ ಯಾರು..?
ಆತ “ವಿವಾದಾತ್ಮಕ ಭಾರತೀಯ ಆಧ್ಯಾತ್ಮಿಕ ಗುರು ಮತ್ತು ನಿತ್ಯಾನಂದ ಧ್ಯಾನಪೀಠಂ ಸಂಸ್ಥೆಯ ಸ್ಥಾಪಕ. ಆತ 1977 ರಲ್ಲಿ ತಮಿಳುನಾಡಿನಲ್ಲಿ ಜನಿಸಿದ ಮತ್ತು ಹಿಂದೂ ಧರ್ಮ, ಬೌದ್ಧಧರ್ಮ ಮತ್ತು ಹೊಸ ಯುಗದ ಆಧ್ಯಾತ್ಮಿಕತೆಯ ಮಿಶ್ರಣವನ್ನು ಕಲಿಸುವುದಾಗಿ ಹೇಳಿಕೊಳ್ಳುತ್ತಾನೆ ಎಂದು ChatGPT ಹೇಳಿದೆ. ನಂತರ ಅದು ಆತನ 2010 ರ ಅತ್ಯಾಚಾರ ಪ್ರಕರಣ ಮತ್ತು ನಂತರದ ಜಾಮೀನಿನ ಬಗ್ಗೆಯೂ ಉಲ್ಲೇಖಿಸಿದೆ.

ಪ್ರಮುಖ ಸುದ್ದಿ :-   ರಾಯಬರೇಲಿಯಿಂದ ಅಕ್ಕನ ವಿರುದ್ಧ ಸ್ಪರ್ಧಿಸಲು ಬಿಜೆಪಿ ನೀಡಿದ್ದ ಆಫರ್‌ ತಿರಸ್ಕರಿಸಿದರೇ ವರುಣ್‌ ಗಾಂಧಿ..?

ಪ್ರಶ್ನೆ : ಕೈಲಾಸ ಎಂದು ಕರೆಯಲ್ಪಡುವ ದೇಶವು ಏನನ್ನು ಸೂಚಿಸುತ್ತದೆ..?
ನಿತ್ಯಾನಂದ ಕೈಲಾಸ ಎಂಬ ಹೊಸ ರಾಷ್ಟ್ರವನ್ನು ಸ್ಥಾಪಿಸಿರುವುದಾಗಿ ಹೇಳಿಕೊಳ್ಳುತ್ತಾನೆ, ಅದನ್ನು ಆತ ಹಿಂದೂ ಸಾರ್ವಭೌಮ ರಾಷ್ಟ್ರ ಎಂದು ವಿವರಿಸುತ್ತಾನೆ. ಆತನ ಪ್ರಕಾರ, ಕೈಲಾಸವು ಕಾಲಾನಂತರದಲ್ಲಿ ಕಳೆದುಹೋದ ಅಥವಾ ನಿಗ್ರಹಿಸಲಾದ ಸನಾತನ ಹಿಂದೂ ಧರ್ಮದ ಪ್ರಾಚೀನ ಪ್ರಬುದ್ಧ ಹಿಂದೂ ನಾಗರಿಕತೆಯ ಪುನರುಜ್ಜೀವನವಾಗಿದೆ. ಕೈಲಾಸವು ಹಿಂದೂ ತತ್ವಗಳು ಮತ್ತು ಆಚರಣೆಗಳ ಆಧಾರದ ಮೇಲೆ ಜನರು ಕಿರುಕುಳ ಮತ್ತು ತಾರತಮ್ಯದಿಂದ ಮುಕ್ತವಾದ ಜೀವನವನ್ನು ನಡೆಸುವ ಸ್ಥಳವಾಗಿದೆ ಎಂದು ನಿತ್ಯಾನಂದ ಪ್ರತಿಪಾದಿಸುತ್ತಾನೆ. ಕೈಲಾಸವು ಜನರು ಆಧ್ಯಾತ್ಮಿಕ ಜ್ಞಾನೋದಯ ಮತ್ತು ಆತ್ಮಸಾಕ್ಷಾತ್ಕಾರವನ್ನು ಅನುಭವಿಸುವ ಸ್ಥಳವಾಗಿದೆ ಎಂದು ಆತ ಪ್ರತಿಪಾದಿಸುತ್ತಾನೆ.” “ಯಾವುದೇ ದೇಶ ಅಥವಾ ಅಂತಾರಾಷ್ಟ್ರೀಯ ಸಂಸ್ಥೆಯಿಂದ ಸಾರ್ವಭೌಮ ರಾಷ್ಟ್ರವೆಂದು ಗುರುತಿಸಲಾಗಿಲ್ಲ” ಎಂದು ಚಾಟ್‌ಜಿಪಿಟಿ ಬಳಕೆದಾರರಿಗೆ ತಿಳಿಸುತ್ತದೆ.

ಪ್ರಶ್ನೆ: ದೇಶವು ಸಂವಿಧಾನವನ್ನು ಹೊಂದಿದೆಯೇ ಮತ್ತು ಅದು ಯಾವುದೇ ಕಾನೂನು ಸ್ಥಾನಮಾನವನ್ನು ಹೊಂದಿದೆಯೇ..?
“ನಿತ್ಯಾನಂದ ಕೈಲಾಸದಲ್ಲಿ ಸಂವಿಧಾನವಿದೆ ಎಂದು ಹೇಳಿಕೊಳ್ಳುತ್ತಾನೆ, ಅದು ಕಾಲಾನಂತರದಲ್ಲಿ ವಿಕಸನಗೊಳ್ಳುವ “ಜೀವಂತ ದಾಖಲೆ” ಎಂದು ವಿವರಿಸಿದ್ದಾನೆ. ಆದರೆ, ಸಂವಿಧಾನದ ನಿಖರವಾದ ವಿಷಯ ಯಾವುದು ಅಥವಾ ಅದನ್ನು ಹೇಗೆ ಅಭಿವೃದ್ಧಿಪಡಿಸಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ” ಎಂದು ChatGPT ಹೇಳಿದೆ. ನಿತ್ಯಾನಂದನ ಸುತ್ತಲಿನ ವಿವಾದವನ್ನು ಗಮನಿಸಿದರೆ, ಸಂವಿಧಾನದ ಕಾನೂನುಬದ್ಧತೆ ಮತ್ತು ಅದರ ಅನುಷ್ಠಾನದ ಬಗ್ಗೆಯೂ ಅನುಮಾನ ಮೂಡಬಹುದು ಎಂದು ಅದು ಹೇಳಿದೆ.

ಪ್ರಮುಖ ಸುದ್ದಿ :-   ಗೂಢಲಿಪಿ ಬಹಿರಂಗಗೊಳಿಸಲು ಒತ್ತಾಯಿಸಿದರೆ ಭಾರತದಿಂದ ನಿರ್ಗಮಿಸಬೇಕಾಗ್ತದೆ ಎಂದ ವಾಟ್ಸಾಪ್

ಪ್ರಶ್ನೆ: ನಾವು ಕೈಲಾಸ ದೇಶಕ್ಕೆ ಭೇಟಿ ನೀಡಬಹುದೇ ಮತ್ತು ಅದಕ್ಕಾಗಿ ವೀಸಾ ಅಗತ್ಯತೆ ಇದೆಯೇ…?
“ಇಲ್ಲ, ನೀವು ಕೈಲಾಸಕ್ಕೆ ಭೇಟಿ ನೀಡಲಾಗುವುದಿಲ್ಲ ಏಕೆಂದರೆ ಇದು ಯಾವುದೇ ಇತರ ದೇಶ ಅಥವಾ ಅಂತಾರಾಷ್ಟ್ರೀಯ ಸಂಸ್ಥೆಯಿಂದ ಮಾನ್ಯತೆ ಪಡೆದ ಸಾರ್ವಭೌಮ ರಾಷ್ಟ್ರವಲ್ಲ. ಆದ್ದರಿಂದ, ಇದು ಯಾವುದೇ ಅಧಿಕೃತ ಗಡಿಗಳು ಅಥವಾ ವೀಸಾ ನೀತಿಗಳನ್ನು ಹೊಂದಿಲ್ಲ.” “ಕೈಲಾಸ” ಕ್ಕೆ ಭೇಟಿ ನೀಡುವುದು ಸೂಕ್ತವಲ್ಲ ಎಂದು ChatGPT ಎಚ್ಚರಿಸಿದೆ ಏಕೆಂದರೆ ಅದು ನಿಮ್ಮನ್ನು ಕಾನೂನು ಅಥವಾ ವೈಯಕ್ತಿಕ ಅಪಾಯಕ್ಕೆ ಒಳಪಡಿಸಬಹುದು ಎಂದು ಅದು ಹೇಳಿದೆ.
ಗುಂಪಿನ ಪ್ರತಿನಿಧಿಗಳು ವಿಶ್ವಸಂಸ್ಥೆಯಲ್ಲಿ ಭಾಗವಹಿಸಲು ಯಾವುದೇ ಹಕ್ಕನ್ನು ಹೊಂದಿಲ್ಲ ಎಂದು ಅದು ಉಲ್ಲೇಖಿಸಿದೆ. “ಕೈಲಾಸವು ಸಾರ್ವಭೌಮ ರಾಷ್ಟ್ರವೆಂದು ಗುರುತಿಸಲ್ಪಟ್ಟಿಲ್ಲವಾದ್ದರಿಂದ, ಅದು ವಿಶ್ವ ಸಂಸ್ಥೆ ಸದಸ್ಯತ್ವಕ್ಕೆ ಅರ್ಹವಾಗಿಲ್ಲ ಮತ್ತು ವಿಶ್ವ ಸಂಸ್ಥೆ ನಡಾವಳಿಗಳಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದು ಅದು ಹೇಳಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement