ಬಿಜೆಪಿಗೆ ರಾಜೀನಾಮೆ ನೀಡಿದ ಪಕ್ಷದ ತಮಿಳುನಾಡು ಐಟಿ ಸೆಲ್‌ ಮುಖ್ಯಸ್ಥ: ರಾಜ್ಯಾಧ್ಯಕ್ಷ ಅಣ್ಣಾಮಲೈ ವಿರುದ್ಧ ವಾಗ್ದಾಳಿ

ಚೆನ್ನೈ: ಬಿಜೆಪಿಯ ತಮಿಳುನಾಡು ಐಟಿ ವಿಭಾಗದ ಮುಖ್ಯಸ್ಥ ಸಿಟಿಆರ್ ನಿರ್ಮಲಕುಮಾರ ಭಾನುವಾರ ಬಿಜೆಪಿಗೆ ರಾಜೀನಾಮೆ ನೀಡಿದ್ದು, ಎಐಎಡಿಎಂಕೆ ಸೇರ್ಪಡೆಯಾಗಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ರಾಜೀನಾಮೆ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಅವರು ಎಐಎಡಿಎಂಕೆ ಹಂಗಾಮಿ ಮುಖ್ಯಸ್ಥ ಕೆ.ಪಳನಿಸ್ವಾಮಿ ಅವರನ್ನು ಭೇಟಿಯಾಗಿ ಆ ಪಕ್ಷಕ್ಕೆ ಸೇರ್ಪಡೆಗೊಂಡರು.
ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಪ್‌ಲೋಡ್ ಮಾಡಿರುವ ಹೇಳಿಕೆಯಲ್ಲಿ, ನಿರ್ಮಲಕುಮಾರ ಅವರು ಪಕ್ಷದ ರಾಜ್ಯ ನಾಯಕತ್ವವು ಪಕ್ಷದ ಕಾರ್ಯಕರ್ತರನ್ನು ಕಡೆಗಣಿಸಿದೆ ಎಂದು ಆರೋಪಿಸಿದ್ದಾರೆ ಮತ್ತು ಅಣ್ಣಾಮಲೈ ಅವರು ಹಲವರ ವಿರುದ್ಧ ಕಣ್ಗಾವಲು ಇರಿಸಿದ್ದಾರೆ ಎಂದು ಆರೋಪಿಸಿದ್ದಾರೆ, ಈ ಆರೋಪವನ್ನು ಅಣ್ಣಾಮಲೈ ಅವರ ನಿಕಟವರ್ತಿಗಳು ನಿರಾಕರಿಸಿದ್ದಾರೆ.
ಒಂದೂವರೆ ವರ್ಷಗಳ ನಂತರ ಬಿಜೆಪಿಯ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡುತ್ತಿದ್ದೇನೆ. ಯಾವುದೇ ನಿರೀಕ್ಷೆ ಇಲ್ಲದೆ ಪಕ್ಷದ ಬೆಳವಣಿಗೆಗೆ ಶ್ರಮಿಸಿದ್ದೇನೆ. ನನ್ನ ರಾಜೀನಾಮೆ ನಿರ್ಧಾರದ ಹಿಂದಿನ ಕಾರಣವನ್ನು ನಿಮಗೆ ತಿಳಿಸುವುದು ನನ್ನ ಜವಾಬ್ದಾರಿಯಾಗಿದೆ ಎಂದು ನಿರ್ಮಲಕುಮಾರ ಹೇಳಿದ್ದಾರೆ. ರಾಜ್ಯದ ಪಕ್ಷದ ನಾಯಕತ್ವವನ್ನು ಉಲ್ಲೇಖಿಸಿ, ಸ್ವಂತ ಪಕ್ಷದ ಕಾರ್ಯಕರ್ತರ ಮೇಲೆ ಬೇಹುಗಾರಿಕೆ ನಡೆಸುವುದು ಮತ್ತು ಅವರನ್ನು ‘ಚಪ್ಪಲಿ’ ಅಥವಾ ಪಾದರಕ್ಷೆಯಂತೆ ನಡೆಸಿಕೊಳ್ಳುವುದಕ್ಕಿಂತ ಹೆಚ್ಚಿನ ಸಣ್ಣತನ ಮತ್ತೊಂದಿಲ್ಲ ಎಂದು ಅವರು ಹೇಳಿದ್ದಾರೆ.
ಕಾರ್ಯಕರ್ತರನ್ನು ಗೌರವಿಸದೆ, ಅವರ ಜತೆ ದುರಹಂಕಾರದಿಂದ ವರ್ತಿಸುವುದರ ಜತೆಗೆ ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತಿರುವ ಕೆಲವರ ಚಟುವಟಿಕೆಗಳಿಂದ ಪಕ್ಷ ವಿನಾಶದತ್ತ ಸಾಗುತ್ತಿದೆ. 2019ರಲ್ಲಿ ಬಿಜೆಪಿಗೆ ಇದ್ದ ಶೇ.20ರಷ್ಟು ಕೂಡ ಈಗ ಉಳಿದಿಲ್ಲ. ಪಕ್ಷದ ರಾಜ್ಯ ನಾಯಕತ್ವದಿಂದಾಗಿ ಬಿಜೆಪಿಯ ತಮಿಳುನಾಡು ಘಟಕ ಅಪಾಯದಲ್ಲಿದೆ. ತಮ್ಮನ್ನು ನಂಬುವ ಕಾರ್ಯಕರ್ತರಿಗೆ ಮೋಸ ಮಾಡಲು ಪ್ರಯತ್ನಿಸುವ ನಾಯಕತ್ವದೊಂದಿಗೆ ಹೋಗಲು ಹೇಗೆ ಸಾಧ್ಯ?” ಅವರು ಪ್ರಶ್ನಿಸಿದ್ದಾರೆ.ಬಳಿಕ ಪಳನಿಸ್ವಾಮಿ ಅವರನ್ನು ಭೇಟಿಯಾಗಿ ಎಐಎಡಿಎಂಕೆ ಸೇರಿದ್ದಾರೆ.

ಪ್ರಮುಖ ಸುದ್ದಿ :-   ಸುಪ್ರೀಂ ಕೋರ್ಟ್ ತರಾಟೆ ನಂತರ ದೊಡ್ಡದಾಗಿ ಕ್ಷಮೆಯಾಚನೆ ಪ್ರಕಟಿಸಿದ ಪತಂಜಲಿ ಸಂಸ್ಥೆ

ನಿರ್ಮಲಕುಮಾರ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅಣ್ಣಾಮಲೈ ಅವರ ಆಪ್ತರಾದ ಅಮರಪ್ರಸಾದ ರೆಡ್ಡಿ ಅವರು “ಬೇಹುಗಾರಿಕೆ” ಆರೋಪವನ್ನು “ಆದಾರ ರಹಿತ” ಎಂದು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ಇದು 100 ಪ್ರತಿಶತ ಸುಳ್ಳು ಆರೋಪ” ಎಂದು ತಮಿಳುನಾಡು ಬಿಜೆಪಿಯ ಕ್ರೀಡಾ ಮತ್ತು ಕೌಶಲ್ಯ ಅಭಿವೃದ್ಧಿ ಕೋಶದ ಅಧ್ಯಕ್ಷ ಅಮರಪ್ರಸಾದ ರೆಡ್ಡಿ ತಿಳಿಸಿದ್ದಾರೆ.
ಅಣ್ಣಾಮಲೈ ಅವರು ಪಕ್ಷದ ಶ್ರೇಣಿಯಲ್ಲಿ ಯುವ ರಕ್ತವನ್ನು ತುಂಬಲು ಉತ್ಸುಕರಾಗಿದ್ದಾರೆ. ಸುಮಾರು 60 ಪ್ರತಿಶತದಷ್ಟು ಹುದ್ದೆಗಳನ್ನು 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಹೊಂದಿದ್ದಾರೆ ಎಂದು ಅವರು ಹೇಳಿದರು.
ಪಕ್ಷದ ಪದಾಧಿಕಾರಿಗಳ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಬಗ್ಗೆ ತಿಳಿದುಕೊಳ್ಳುವ ಬಗ್ಗೆ ಬಿಜೆಪಿ ರಾಜ್ಯ ನಾಯಕ “ಕನಿಷ್ಠ ತಲೆಕೆಡಿಸಿಕೊಂಡಿದ್ದಾರೆ” ಮತ್ತು ಕಳೆದ ಕೆಲವು ತಿಂಗಳುಗಳಲ್ಲಿ ಅಣ್ಣಾಮಲೈ ಅವರು ನಿರಮಲಕುಮಾರ ಅವರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದರು ಎಂದು ಅವರು ಹೇಳಿದರು.
ಬಿಜೆಪಿಯು “ಪ್ರತಿಯೊಬ್ಬರೂ 100 ಪ್ರತಿಶತ ನೀಡಬೇಕೆಂದು ಪಕ್ಷವು ನಿರೀಕ್ಷಿಸುತ್ತದೆ. ಪಕ್ಷದಲ್ಲಿ ಯುವಕರನ್ನು ತುಂಬಿಸಲಾಗುತ್ತದೆ ಮತ್ತು ಆಗ ಮುಂದಿನ ದಿನಗಳಲ್ಲಿ ಪಕ್ಷ ಬೆಳೆಯುತ್ತದೆ ಎಂಬುದು ಅಣ್ಣಾಮಲೈ ಅವರ ಸಂದೇಶವಾಗಿದೆ ಎಂದು ರೆಡ್ಡಿ ಹೇಳಿದರು, ಅಲ್ಲದೆ, ಎಐಎಡಿಎಂಕೆಯಲ್ಲಿ ಹೊಸ ಇನ್ನಿಂಗ್ಸ್‌ ಆರಂಭಿಸಲು ಹೋಗಿರುವ ನಿರ್ಮಕುಮಾರ ಅವರಿಗೆ ಶುಭ ಹಾರೈಸಿದ್ದಾರೆ.

ಪ್ರಮುಖ ಸುದ್ದಿ :-   'ಅನುಮಾನ ಆಧರಿಸಿ ಇವಿಎಂ ವಿರುದ್ಧ ನಿರ್ದೇಶನ ನೀಡಲು ಸಾಧ್ಯವೇ? : ಸುಪ್ರೀಂ ಕೋರ್ಟ್ ಪ್ರಶ್ನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement