ಐವರು ಮಕ್ಕಳಿದ್ದರೂ ತನ್ನ 1.5 ಕೋಟಿ ರೂ.ಮೌಲ್ಯದ ಆಸ್ತಿಯನ್ನು ಸರ್ಕಾರಕ್ಕೆ ದಾನ ಮಾಡಿದ ವಯೋವೃದ್ಧ…!

ಲಕ್ನೋ: ಉತ್ತರ ಪ್ರದೇಶದ ಯೋಗಿ ಸರ್ಕಾರಕ್ಕೆ 85 ವರ್ಷದ ವ್ಯಕ್ತಿಯೊಬ್ಬರು 1.5 ಕೋಟಿ ರೂ.ಗಳ ಮೌಲ್ಯದ ಆಸ್ತಿಯನ್ನು ದಾನವಾಗಿ ನೀಡಿದ್ದಾರೆ.
ತಮ್ಮ ಮಕ್ಕಳು ತಮ್ಮನ್ನು ನೋಡಿಕೊಳ್ಳುವುದಿಲ್ಲ ಎಂಬ ಕಾರಣಕ್ಕೆ ಉತ್ತರ ಪ್ರದೇಶದ ಮುಜಾಫರ್‌ನಗರದ ನಾಥು ಸಿಂಗ್ ಎಂಬವರು ಮನನೊಂದು ಮನೆ ಮತ್ತು ಜಮೀನನ್ನು ಸರ್ಕಾರಕ್ಕೆ ವಿಲ್‌ ಮಾಡಿದ್ದಾರೆ. ಅಧ್ಯಯನಕ್ಕಾಗಿ ವೈದ್ಯಕೀಯ ಕಾಲೇಜಿಗೆ ದೇಹವನ್ನು ದಾನ ಮಾಡಿದ್ದಾರೆ. ಅಲ್ಲದೆ, ತನ್ನ ಮರಣದ ನಂತರ ತನ್ನ ಶವವನ್ನೂ ಮಕ್ಕಳಿಗೆ ನೋಡಲು ಬಿಡಬಾರದು ಮತ್ತು ತಮ್ಮ ಅಂತಿಮ ವಿಧಿಗಳಲ್ಲಿ ಪಾಲ್ಗೊಳ್ಳಲು ಅವರನ್ನು ಬಿಡಬಾರದು ಎಂದು ಹೇಳಿದ್ದಾರೆ.
ಮುಜಾಫರ್‌ನಗರದ ನಿವಾಸಿ ನಾಥು ಸಿಂಗ್ ₹ 1.5 ಕೋಟಿ ಮೌಲ್ಯದ ಮನೆ ಮತ್ತು ಜಮೀನು ಹೊಂದಿದ್ದಾರೆ. ಅವರಿಗೆ ಒಬ್ಬ ಮಗನಿದ್ದಾನೆ, ಅವರು ಶಾಲಾ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಸಹರಾನ್‌ಪುರದಲ್ಲಿ ವಾಸಿಸುತ್ತಿದ್ದಾರೆ. ನಾಲ್ಕು ಹೆಣ್ಣುಮಕ್ಕಳಿದ್ದಾರೆ. ಎಲ್ಲರಿಗೂ ವಿವಾಹವಾಗಿದೆ.
ಪತ್ನಿಯ ಸಾವಿನ ನಂತರ ವೃದ್ಧರು ಒಬ್ಬರೇ ವಾಸಿಸುತ್ತಿದ್ದರು. ಸುಮಾರು ಏಳು ತಿಂಗಳ ಹಿಂದೆ ಅವರು ತಮ್ಮ ಗ್ರಾಮದ ವೃದ್ಧಾಶ್ರಮಕ್ಕೆ ಸೇರಿದ್ದರು. ಆದರೆ ಈ ಏಳು ತಿಂಗಳಲ್ಲಿ ತಮ್ಮ ದೊಡ್ಡ ಕುಟುಂಬದ ಯಾರೊಬ್ಬರೂ ತಮ್ಮನ್ನು ಭೇಟಿಯಾಗಲು ಬಾರದ ಕಾರಣ ಅವರ ಹೃದಯ ಒಡೆಯಿತು. ತೀವ್ರವಾಗಿ ಮನನೊಂದ ಅವರು ತಮ್ಮ ಭೂಮಿಯನ್ನು ರಾಜ್ಯ ಸರ್ಕಾರಕ್ಕೆ ವಿಲ್ ಮಾಡಿದ್ದಾರೆ. ಹಾಗೂ ತಮ್ಮ ಮರಣದ ನಂತರ ಆ ಜಾಗದಲ್ಲಿ ಆಸ್ಪತ್ರೆ ಅಥವಾ ಶಾಲೆಯನ್ನು ನಿರ್ಮಿಸುವಂತೆ ಸೂಚಿಸಿದ್ದಾರೆ.

ಪ್ರಮುಖ ಸುದ್ದಿ :-   ಈ ಹಳ್ಳಿಯಲ್ಲಿರುವ ಮತದಾನ ಕೇಂದ್ರದ ಒಬ್ಬರೇ ಒಬ್ಬರು ಮತದಾರರಿಗಾಗಿ 40 ಕಿಮೀ ನಡೆದುಕೊಂಡು ಹೋದ ಚುನಾವಣಾ ಸಿಬ್ಬಂದಿ...!

ಈ ವಯಸ್ಸಿನಲ್ಲಿ, ನಾನು ನನ್ನ ಮಗ ಮತ್ತು ಸೊಸೆಯೊಂದಿಗೆ ವಾಸಿಸಬೇಕಾಗಿತ್ತು ಆದರೆ ಅವರು ನನ್ನನ್ನು ಚೆನ್ನಾಗಿ ನಡೆಸಿಕೊಳ್ಳಲಿಲ್ಲ. ಆದ್ದರಿಂದ ನಾನು ಆಸ್ತಿಯನ್ನು ಸರ್ಕಾರಕ್ಕೆ ಕೊಡಲು ಮನಸ್ಸು ಮಾಡಿದೆ ಎಂದು ನಾಥು ಸಿಂಗ್‌ ಹೇಳಿದ್ದಾರೆ. ಅಲ್ಲದೆ, ಸಂಶೋಧನೆ ಮತ್ತು ಶೈಕ್ಷಣಿಕ ಉದ್ದೇಶಕ್ಕೆ ಬಳಸಲು ತನ್ನ ದೇಹವನ್ನು ದಾನ ಮಾಡಲು ನಿರ್ಧರಿಸಿದ್ದಾಗಿ ಅವರ ಉಯಿಲು ಹೇಳುತ್ತದೆ.
ನಾಥು ಸಿಂಗ್ ಅವರ ಕುಟುಂಬ ಸದಸ್ಯರು ಈವರೆಗೆ ಯಾರೊಬ್ಬರು ಬಂದಿಲ್ಲ ಎಂದು ವೃದ್ಧಾಶ್ರಮದ ಮ್ಯಾನೇಜರ್ ರೇಖಾ ಸಿಂಗ್ ಹೇಳಿದ್ದಾರೆ, ಆರು ತಿಂಗಳ ಹಿಂದೆ ಅವರು ಇಲ್ಲಿ ಉಳಿಯಲು ಪ್ರಾರಂಭಿಸಿದಾಗಿನಿಂದ ಯಾರೂ ಅವರನ್ನು ಭೇಟಿ ಮಾಡಲು ಬಂದಿಲ್ಲ. ಇದರಿಂದ ಅವರು ತುಂಬಾ ನೊಂದಿದ್ದಾರೆ ಹಾಗೂ ಅಸಮಾಧಾನಗೊಂಡಿದ್ದಾರೆ. ಸರ್ಕಾರಕ್ಕೆ ತನ್ನ ಆಸ್ತಿ ದಾನ ಮಾಡುವ ಅವರ ಅಚಲವಾಗಿದೆ ಎಂದು ಹೇಳಿದರು.
ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ ಆ ಪ್ರದೇಶದ ಸಬ್-ರಿಜಿಸ್ಟ್ರಾರ್ ಅವರು ನಾಥು ಸಿಂಗ್ ಅವರ ಅಫಿಡವಿಟ್ ಅನ್ನು ಸ್ವೀಕರಿಸಿದ್ದಾರೆ ಮತ್ತು ಅವರ ಮರಣದ ನಂತರ ಇದು ಜಾರಿಗೆ ಬರಲಿದೆ,

ಪ್ರಮುಖ ಸುದ್ದಿ :-   ದೆಹಲಿ ವಕ್ಫ್ ಬೋರ್ಡ್ ಹಗರಣ : 9 ತಾಸುಗಳ ವಿಚಾರಣೆಯ ನಂತರ ಎಎಪಿ ನಾಯಕ ಅಮಾನತುಲ್ಲಾ ಖಾನ್ ಬಂಧಿಸಿದ ಇ.ಡಿ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement