ನಾಲ್ಕು ವರ್ಷದ ಮಗುವಿನ ಮೇಲೆ ದಾಳಿ ಮಾಡಿದ ದೈತ್ಯ ಗೂಳಿ : ಆಘಾತಕಾರಿ ವಿಡಿಯೋ ವೈರಲ್

ಅಲಿಗಢ: ಉತ್ತರ ಪ್ರದೇಶದ ಅಲಿಗಢದಲ್ಲಿ ಭಾರೀ ಗೂಳಿಯೊಂದು ಏಕಾಏಕಿ ನಾಲ್ಕು ವರ್ಷದ ಮಗುವಿಗೆ ಡಿಚ್ಚಿ ಹೊಡೆದ ನಂತರ ಮಗು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಅಲಿಗಡದ ಠಾಣಾ ಗಾಂಧಿ ಪಾರ್ಕ್ ಪ್ರದೇಶದ ಧನಿಪುರ ಮಂಡಿಯಲ್ಲಿ ಈ ಘಟನೆ ನಡೆದಿದೆ. ರಸ್ತೆಯಲ್ಲಿ ಏಕಾಂಗಿಯಾಗಿ ನಿಂತಿದ್ದ ಮಗುವಿನ ಮೇಲೆ ಗೂಳಿ ಓಡಿಬಂದು ಹಿಂಬದಿಯಿಂದ ಚಾರ್ಜ್ ಮಾಡಿದ್ದು, ಸಿಸಿಟಿವಿ ದೃಶ್ಯಾವಳಿಯಲ್ಲಿ ಅಂತರ್ಜಾಲದಲ್ಲಿ ವೈರಲ್ ಆಗಿದೆ. ನಾಲ್ಕು ವರ್ಷದ ಮಗುವನ್ನು ತನ್ನ ಕೊಂಬುಗಳಿಂದ ಹೊಡೆದ ನಂತರ ಕೆಳಗೆ ಬಿದ್ದ ಮಗುವನ್ನು ತುಳಿದಿದೆ. ತಕ್ಷಣ ಅಲ್ಲಿಯೇ ಸನಿಹದಲ್ಲಿದ್ದ ವ್ಯಕ್ತಿಯೊಬ್ಬರು ನಾಲ್ಕು ವರ್ಷದ ಮಗುವನ್ನು ಓಡಿಬಂದು ರಕ್ಷಿಸಿದ್ದಾರೆ.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ವ್ಯಕ್ತಿಯೊಬ್ಬ ಮಗುವನ್ನು ಬೀದಿಯಲ್ಲಿ ಒಂಟಿಯಾಗಿ ಬಿಟ್ಟು ಪ್ಲಾಟ್‌ನೊಳಗೆ ಹೋದ ಕೆಲವೇ ನಿಮಿಷಗಳಲ್ಲಿ ಆಘಾತಕಾರಿ ಘಟನೆ ನಡೆದಿದೆ. ತೀವ್ರವಾಗಿ ಗಾಯಗೊಂಡ ಮಗವಿನ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.

ಘಟನೆಯ ನಂತರ ಮುನ್ಸಿಪಲ್ ಕಾರ್ಪೊರೇಷನ್ ಕಾರ್ಯಾಚರಣೆಗೆ ಧಾವಿಸಿದ್ದು, ಪ್ರದೇಶದ ನಿವಾಸಿಗಳಲ್ಲಿ ಭಯವನ್ನು ಸೃಷ್ಟಿಸಿದ ಬಿಡಾಡಿ ಗೂಳಿಯನ್ನು ಹಿಡಿಯಲು ಪ್ರಯತ್ನಿಸಲಾಯಿತು. ಸ್ಥಳೀಯ ಪುರಸಭೆಯ 4-5 ಜನರ ತಂಡವು ದಾರಿತಪ್ಪಿ ಗೂಳಿಯನ್ನು ಟ್ರಕ್‌ನಲ್ಲಿತುಂಬಿದ್ದಾರೆ. ಇಬ್ಬರು ವ್ಯಕ್ತಿಗಳು ಟ್ರಕ್‌ನೊಳಗೆ ಗೂಳಿಯನ್ನು ಹಗ್ಗದಿಂದ ಎಳೆದು ಮತ್ತಿಬ್ಬರು ಕೋಲಿನಿಂದ ಜಾನುವಾರುಗಳನ್ನು ರಾಂಪ್‌ನಲ್ಲಿ ತಳ್ಳಿದ್ದಾರೆ.

ಇಂದಿನ ಪ್ರಮುಖ ಸುದ್ದಿ :-   ಭಾರತದಲ್ಲಿ ಹೊಸದಾಗಿ 1,590 ಕೊರೊನಾ ಪ್ರಕರಣಗಳು ದಾಖಲು: ಇದು 146 ದಿನಗಳಲ್ಲಿ ಅತಿ ಹೆಚ್ಚು

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

3 / 5. ಒಟ್ಟು ವೋಟುಗಳು 1

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement