ಕೇರಳ ಚಿನ್ನ ಕಳ್ಳಸಾಗಣೆ ಪ್ರಕರಣ: ಕೇರಳ ಸಿಎಂ ವಿರುದ್ಧದ ಸಾಕ್ಷ್ಯ ಕೈಬಿಟ್ಟು ತೆಪ್ಪಗಿರಲು ನನಗೆ 30 ಕೋಟಿ ರೂ. ಆಫರ್‌-ಆರೋಪಿ ಸ್ವಪ್ನಾ ಸುರೇಶ್ ಆಘಾತಕಾರಿ ಹೇಳಿಕೆ

ತಿರುವನಂತಪುರಂ: ಕೇರಳದ ಚಿನ್ನಾಭರಣ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿಗಳಲ್ಲೊಬ್ಬರಾದ ಸ್ವಪ್ನಾ ಸುರೇಶ್ ಗುರುವಾರ, ಆಡಳಿತಾರೂಢ ಸಿಪಿಐ(ಎಂ) ಪಕ್ಷವು ಈ ಪ್ರಕರಣವನ್ನು ಇತ್ಯರ್ಥಪಡಿಸಲು ಮಧ್ಯವರ್ತಿ ಮೂಲಕ 30 ಕೋಟಿ ರೂ. ಆಫರ್‌ ನೀಡಿತ್ತು ಎಂದು ಆರೋಪಿಸಿದ್ದಾಳೆ.
ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಅವರು ಕಳುಹಿಸಿದ್ದ ವಿಜಯ್ ಪಿಳ್ಳೈ ಎಂಬ ಮಧ್ಯವರ್ತಿಯು ಹಣದ ಬದಲಿಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಅವರ ಕುಟುಂಬದ ವಿರುದ್ಧದ ಎಲ್ಲಾ ಸಾಕ್ಷ್ಯಗಳನ್ನು ತನಗೆ ಬಳಿಗೆ ನೀಡುವಂತೆ ಮತ್ತು ಮುಖ್ಯಮಂತ್ರಿ ಪಿಣರಾಯಿ ಬಗ್ಗೆ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದ್ದ ಎಂದು ಸ್ವಪ್ನಾ ಫೇಸ್‌ಬುಕ್ ಲೈವ್‌ನಲ್ಲಿ ಹೇಳಿದ್ದಾಳೆ.
“ನಾನು ಹರಿಯಾಣ ಅಥವಾ ಜೈಪುರಕ್ಕೆ ಹೋಗಬೇಕೆಂದು ಅವರು ಬಯಸುತ್ತಾರೆ. ಫ್ಲ್ಯಾಟ್ ಸೇರಿದಂತೆ ಎಲ್ಲಾ ನೆರವು ನೀಡಲಾಗುವುದು ಎಂದು ಅವರು ಭರವಸೆ ನೀಡಿದರು. ನಕಲಿ ಪಾಸ್‌ಪೋರ್ಟ್‌ಗಳು ಸಿದ್ಧವಾದ ನಂತರ ನಾನು ದೇಶವನ್ನು ತೊರೆಯಲು ವ್ಯವಸ್ಥೆ ಮಾಡುವುದಾಗಿಯೂ ಅವರು ಭರವಸೆ ನೀಡಿದರು ಎಂದು ಸ್ವಪ್ನಾ ಸುರೇಶ ಹೇಳಿಕೊಂಡಿದ್ದಾಳೆ.
ಸಂದರ್ಶನದ ನೆಪದಲ್ಲಿ ಪಿಳ್ಳೈ, ಬೆಂಗಳೂರಿನಲ್ಲಿ ಹೋಟೆಲ್‌ವೊಂದರಲ್ಲಿ ತನ್ನನ್ನು ಭೇಟಿಯಾಗಲು ಬಂದಿದ್ದಾಗಿ ಆಕೆ ಹೇಳಿಕೊಂಡಿದ್ದಾಳೆ ಮತ್ತು ನಂತರ ಈ ಆಫರ್‌ಗೆ ನನಗೆ ನಿರ್ಧಾರ ತೆಗೆದುಕೊಳ್ಳಲು ಎರಡು ದಿನಗಳ ಕಾಲಾವಕಾಶ ನೀಡಲಾಯಿತು, ಇಲ್ಲದಿದ್ದರೆ ನನ್ನ ಜೀವವು ಅಪಾಯಕ್ಕೆ ಸಿಲುಕಬಹುದು ಎಂದು ಎಚ್ಚರಿಸಿದ ಎಂದು ಸ್ವಪ್ನಾ ಸುರೇಶ್ ತನ್ನ ಫೇಸ್‌ಬುಕ್ ಲೈವ್‌ನಲ್ಲಿ ಹೇಳಿದಳು.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಥವಾ ಅವರ ಕುಟುಂಬದೊಂದಿಗೆ ನನಗೆ ಯಾವುದೇ ವೈಯಕ್ತಿಕ ಅಜೆಂಡಾ ಇಲ್ಲ, ಅವರ ರಾಜಕೀಯ ಜೀವನವನ್ನು ನಾಶಮಾಡಲು ಬಯಸುವುದಿಲ್ಲ, ಆದರೆ ನನ್ನ ಜೀವನವನ್ನು ಮುಗಿಸುತ್ತಾರೆ ಎಂದು ನನಗೆ ಸ್ಪಷ್ಟವಾಗಿ ಹೇಳಲಾಗಿದೆ. ಈ ವ್ಯಕ್ತಿ ನನಗೆ ನಿರ್ಧಾರ ತೆಗೆದುಕೊಳ್ಳಲು ಎರಡು ದಿನಗಳ ಕಾಲಾವಕಾಶ ನೀಡುತ್ತೇನೆ ಎಂದು ಹೇಳಿದ. ನಾನು ಅವರ ಫೋನ್ ಸಂಖ್ಯೆಗಳು ಮತ್ತು ಇಮೇಲ್ ವಿಳಾಸದ ವಿವರಗಳನ್ನು ನನ್ನ ವಕೀಲರಿಗೆ ಕಳುಹಿಸಿದ್ದೇನೆ” ಎಂದು ಸ್ವಪ್ನಾ ಸುರೇಶ ಹೇಳಿದಳು.
“ನಾನು ಕೊನೆಯವರೆಗೂ ಹೋರಾಡುತ್ತೇನೆ ಎಂದು ನಾನು ಹೇಳಬಯಸುತ್ತೇನೆ, ನನ್ನನ್ನು ನಂಬುವ ಜನರಿದ್ದಾರೆ, ನಾನು ಬದುಕಿದರೆ ನಿಮ್ಮ ಇಡೀ ವ್ಯಾಪಾರ ಸಾಮ್ರಾಜ್ಯವನ್ನು ಬಯಲಿಗೆಳೆಯುತ್ತೇನೆ ಮತ್ತು ನನಗೆ ಬೆದರಿಕೆ ಹಾಕುವ ಧೈರ್ಯ ಮಾಡಬೇಡಿ. ನಾನು ನಿಮ್ಮ ನಿಜವಾದ ಮುಖವನ್ನು ಜಗತ್ತಿಗೆ ಬಹಿರಂಗಪಡಿಸುತ್ತೇನೆ ಎಂದು ಸ್ವಪ್ನಾ ಸುರೇಶ್ ಹೇಳಿದ್ದಾಳೆ.
ಖ್ಯಾತ ಕೈಗಾರಿಕೋದ್ಯಮಿಯನ್ನು ಪ್ರಕರಣಕ್ಕೆ ಎಳೆದು ತರದಂತೆ ಮಧ್ಯವರ್ತಿ ವಿಜಯ್ ಪಿಳ್ಳೈ ಬೆದರಿಕೆ ಹಾಕಿದ್ದಾನೆ ಎಂದು ಹೇಳಿದ ಸ್ವಪ್ನಾ “ನನ್ನ ಆರೋಗ್ಯ ಸಮಸ್ಯೆಗಳಿಂದಾಗಿ ನಾನು ದೇಶೀಯ ವಿಮಾನದಲ್ಲಿ ಪದೇಪದೇ ಪ್ರಯಾಣಿಸುತ್ತೇನೆ. ಇದು ಅವರಿಗೆ ತಿಳಿದಿದೆ. ನನ್ನನ್ನು ಬಲೆಗೆ ಬೀಳಿಸಲು ಕೈಗಾರಿಕೋದ್ಯಮಿ ನನ್ನ ಸಾಮಾನು ಸರಂಜಾಮುಗಳಲ್ಲಿ ನಿಷಿದ್ಧ ವಸ್ತುಗಳು ಅಥವಾ ಮಾದಕ ದ್ರವ್ಯಗಳನ್ನು ಸೇರಿಸಬಹುದು ಎಂದು ವಿಜಯ್ ಪಿಳ್ಳೈ ಬೆದರಿಕೆ ಹಾಕಿದ್ದಾನೆ ಎಂದು ಹೇಳಿದಳು.ಈ ಕುರಿತು ಕರ್ನಾಟಕ ಗೃಹ ಸಚಿವರು, ಡಿಜಿಪಿ ಮತ್ತು ಜಾರಿ ನಿರ್ದೇಶನಾಲಯಕ್ಕೆ ದೂರು ಸಲ್ಲಿಸಿರುವುದಾಗಿ ಸ್ವಪ್ನಾ ತಿಳಿಸಿದ್ದಾಳೆ. “ನಾನು ರಾಜಿ ಮಾಡಿಕೊಳ್ಳಲು ಸಿದ್ಧವಿಲ್ಲದ ಕಾರಣ ನನಗೆ ಬೆಂಗಳೂರಿನಲ್ಲಿ ರಕ್ಷಣೆ ಬೇಕು ಎಂದು ಹೇಳಿದಳು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ : ಬಿಜೆಪಿ ಮೈತ್ರಿಕೂಟ Vs ಕಾಂಗ್ರೆಸ್‌ ಮೈತ್ರಿಕೂಟದ ಜಿದ್ದಾಜಿದ್ದಿ ಸ್ಪರ್ಧೆಯಲ್ಲಿ ಯಾರಿಗೆ ಎಷ್ಟು ಸ್ಥಾನಗಳು..? ಎಬಿಪಿ-ಸಿವೋಟರ್ ಸಮೀಕ್ಷೆ ಏನು ಹೇಳುತ್ತದೆ..?

ಚಿನ್ನ ಕಳ್ಳಸಾಗಣೆ ಪ್ರಕರಣ
ಜುಲೈ 5, 2020 ರಂದು, ಕೇರಳದ ತಿರುವನಂತಪುರಂನಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು 30 ಕೆಜಿ ತೂಕದ ಮತ್ತು ಸುಮಾರು 15 ಕೋಟಿ ಮೌಲ್ಯದ ಚಿನ್ನ ಇದ್ದ ಸಾಮಗ್ರಿಗಳನ್ನು ವಶಪಡಿಸಿಕೊಂಡರು. ಚಿನ್ನವು ರಾಜತಾಂತ್ರಿಕ ಸಾಮಾನು ಸರಂಜಾಮುಗಳಲ್ಲಿತ್ತು ಮತ್ತು ಅದನ್ನು ಯುಎಇ ದೂತಾವಾಸಕ್ಕೆ ತಿಳಿಸಲಾಯಿತು.
ಇದು ರಾಜತಾಂತ್ರಿಕ ವಿನಾಯಿತಿ ಹೊಂದಿರುವ ವ್ಯಕ್ತಿಯ ಹೆಸರನ್ನು ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಕಳ್ಳಸಾಗಣೆ ಸಿಂಡಿಕೇಟ್‌ನ ಭಾಗವಾಗಿದೆ ಎಂಬ ಸುಳಿವು ಆಧರಿಸಿ ಕಸ್ಟಮ್ಸ್ ಅಧಿಕಾರಿಗಳು ಕಾರ್ಯನಿರ್ವಹಿಸಿದ್ದಾರೆ.
ಚಿನ್ನದ ವಶಪಡಿಸಿಕೊಳ್ಳುವಿಕೆಯು ಪ್ರಮುಖ ರಾಜಕೀಯ ವಿವಾದಕ್ಕೆ ಕಾರಣವಾಯಿತು, ಇದು ಆಡಳಿತಾರೂಢ ಎಡ ಸರ್ಕಾರದ ಅಡಿಪಾಯವನ್ನು ಅಲುಗಾಡಿಸಿತು, ವಿಶೇಷವಾಗಿ ಉನ್ನತ ಅಧಿಕಾರಿ ಎಂ ಶಿವಶಂಕರ ತಲೆದಂಡವಾಯಿತು. ಪ್ರಧಾನ ಆರೋಪಿ ಸ್ವಪ್ನಾ ಸುರೇಶ್ ಜೊತೆಗಿನ ಸಂಪರ್ಕ ಬಹಿರಂಗವಾದ ನಂತರ ಕೇರಳ ಮುಖ್ಯಮಂತ್ರಿ ವಿಜಯನ್ ಅವರ ಮಾಜಿ ಪ್ರಧಾನ ಕಾರ್ಯದರ್ಶಿ ಎಂ ಶಿವಶಂಕರ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ನಂತರ ಅವರನ್ನು ಬಂಧಿಸಲಾಯಿತು ಮತ್ತು ನಂತರ ಜಾಮೀನು ನೀಡಲಾಯಿತು.
ಯುಎಇ ಕಾನ್ಸುಲೇಟ್‌ನ ಮಾಜಿ ಸಿಬ್ಬಂದಿ ಸ್ವಪ್ನಾ ಸುರೇಶ್ ಅವರನ್ನು ಖಾಸಗಿ ಸಂಸ್ಥೆಯೊಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಅಧೀನದಲ್ಲಿರುವ ಕೇರಳ ಐಟಿ ಇಲಾಖೆಯ ಯೋಜನೆಯಲ್ಲಿ ಕೆಲಸ ಮಾಡಲು ನೇಮಿಸಿಕೊಂಡಿತ್ತು. ಮುಖ್ಯಮಂತ್ರಿ ಅವರ ಪ್ರಧಾನ ಕಾರ್ಯದರ್ಶಿ ಎಂ ಶಿವಶಂಕರ ಈ ವಿಭಾಗದ ಮುಖ್ಯಸ್ಥರಾಗಿದ್ದರು.
ಸ್ವಪ್ನಾ ಸುರೇಶ ಕೇರಳದ ಪ್ರಬಲ ವ್ಯಕ್ತಿಗಳೊಂದಿಗೆ ಸಂಪರ್ಕ ಹೊಂದಿದ್ದು, ಪ್ರಸ್ತುತ ಚಿನ್ನದ ಕಳ್ಳಸಾಗಣೆ ಪ್ರಕರಣದ ಪೂರ್ವಭಾವಿಯಾಗಿ ಅವರಿಗೆ ಹಲವಾರು ಕರೆಗಳನ್ನು ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆಗೆ ಗುಲಾಂ ನಬಿ ಆಜಾದ್ ಸ್ಪರ್ಧಿಸಲ್ಲ

 

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement