ಬೆಂಗಳೂರು: ತನಗೆ ಬಾಡಿಗೆ ಸಿಗುತ್ತಿಲ್ಲವೆಂಬ ಸಿಟ್ಟಿಗೆ ರ್‍ಯಾಪಿಡೊ ಬೈಕ್‌ ಸವಾರನ ಹೆಲ್ಮೆಟ್‌ ಒಡೆದು ಹಾಕಿದ ಆಟೊ ಚಾಲಕ | ವೀಕ್ಷಿಸಿ

ಬೆಂಗಳೂರು: ಇಂದಿರಾನಗರದ ಮೆಟ್ರೊ ನಿಲ್ದಾಣದ ಬಳಿ ರ್‍ಯಾಪಿಡೊ ಸವಾರ (ರ್‍ಯಾಪಿಡೊ ಕ್ಯಾಪ್ಟನ್‌)ನನ್ನು ಆಟೋ ಚಾಲಕನೊಬ್ಬ ತಡೆದು, ಹೆಲ್ಮೆಟ್‌ ಒಡೆದು ನಿಂದಿಸಿದ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಈ ಘಟನೆಯ ವೀಡಿಯೊ ವೈರಲ್ ಆಗಿದ್ದು, ಇದು ಪೊಲೀಸರ ಕ್ರಮ ಕೈಗೊಳ್ಳಲು ಕಾರಣವಾಗಿದೆ.
ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದರಿಂದ ಬೆಂಗಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈಶಾನ್ಯ ಭಾರತದ ವ್ಯಕ್ತಿ ಎಂದು ವರದಿಯಾಗಿರುವ ಬೈಕ್ ಟ್ಯಾಕ್ಸಿ ಚಾಲಕ, ಅಗ್ರಿಗೇಟರ್ ರಾಪಿಡೋ ಕಂಪನಿ ಜೊತೆ ಕೆಲಸ ಮಾಡುತ್ತಿದ್ದಾನೆ. ನಿನ್ನಿಂದಾಗಿ ಆಟೋ ಚಾಲಕರು ತಮ್ಮ ಗ್ರಾಹಕರನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಆಟೋ ಚಾಲಕ ಹೇಳುತ್ತಿರುವುದನ್ನು ವೀಡಿಯೊದಲ್ಲಿ ಕೇಳಬಹುದು. ಬೇರೆ ಕಡೆಯಿಂದ ಬಂದು ಇಲ್ಲಿ ಈ ಸೇವೆ ಮಾಡುತ್ತೀರಿ… ಇದರಿಂದ ಆಟೋ ಚಾಲಕರಿಗೆ ನಷ್ಟವಾಗುತ್ತಿದೆ’ ಎಂದು ಆಟೋ ಚಾಲಕ ಹೇಳುತ್ತಿದ್ದಾನೆ.

https://twitter.com/freedomlore1/status/1632427142314340352?ref_src=twsrc%5Etfw%7Ctwcamp%5Etweetembed%7Ctwterm%5E1633052479511482368%7Ctwgr%5Eb8cdb1e01e1d2d780fbe3f3c665073eab8bb2adb%7Ctwcon%5Es3_&ref_url=https%3A%2F%2Fwww.ndtv.com%2Fbangalore-news%2Fviral-video-auto-driver-abuses-bike-taxi-rider-in-bengaluru-probe-on-3845365

ಬೆಂಗಳೂರಿನ ಇಂದಿರಾನಗರ ಮೆಟ್ರೋ ನಿಲ್ದಾಣದ ಬಳಿ ಸೋಮವಾರ ಈ ಘಟನೆ ನಡೆದಿದೆ. ರ್‍ಯಾಪಿಡೊ ಸವಾರ ಮೆಟ್ರೊ ನಿಲ್ದಾಣದ ಬಳಿಯಲ್ಲಿ ತನ್ನ ಬೈಕ್‌ ಟ್ಯಾಕ್ಸಿಗೆ ಪ್ರಯಾಣಿಕರೊಬ್ಬರನ್ನು ಹತ್ತಿಸಿಕೊಂಡಿದ್ದಕ್ಕೆ ಕೋಪಗೊಂಡ ಚಾಲಕ ಈ ರೀತಿ ವರ್ತಿಸಿದ್ದಾನೆ ಎನ್ನಲಾಗಿದೆ. ಈ ವೀಡಿಯೊವನ್ನು ಘಟನೆಯ ಪ್ರತಯಕ್ಷದರ್ಸಿಯೊಬ್ಬರು ಚಿತ್ರೀಕರಿಸಿದ್ದು, ನಂತರ ಅದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ ಹಾಗೂ ಪೊಲೀಸರನ್ನು ಟ್ಯಾಗ್ ಮಾಡಿ ಕ್ರಮಕ್ಕೆ ಮನವಿ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಬೆಂಗಳೂರು ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಇಂದಿರಾನಗರದ ಪೊಲೀಸರು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಕಟ್ಟುನಿಟ್ಟಾದ ಮತ್ತು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಬೆಂಗಳೂರು ನಗರ ಪೊಲೀಸರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಕೆಪಿಸಿಸಿ ಸೋಶಿಯಲ್‌ ಮೀಡಿಯಾ ವಿಭಾಗದ ಅಧ್ಯಕ್ಷರಾಗಿ ಐಶ್ವರ್ಯಾ ಮಹಾದೇವ ನೇಮಕ

ಏನಿದು ರ್‍ಯಾಪಿಡೊ ಬೈಕ್‌ ಸೇವೆ..
ಇದು ಮೊಬೈಲ್‌ ಆಪ್‌ ಆಧಾರಿತ ಬೈಕ್‌ ಸೇವೆಯಾಗಿದ್ದು, ಪ್ರಯಾಣಿಕರು ಆಪ್‌ ಡೌನ್‌ಲೋಡ್‌ ಮಾಡಿಕೊಂಡು ಅದರಲ್ಲಿ ತಾವಿರುವ ಸ್ಥಳ, ತಲುಪಬೇಕಾದ ಸ್ಥಳ ನಮೂದಿಸಿದರೆ ಕೆಲವೇ ನಿಮಿಷಗಳಲ್ಲಿ ಬೈಕ್‌ ಅಲ್ಲಿಗೆ ತಲುಪುತ್ತದೆ. ನಂತರ ಪ್ರಯಾಣಿಕರನ್ನು ಸೂಚಿತ ಸ್ಥಳಕ್ಕೆ ತಲುಪಿಸಲಾಗುತ್ತದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement