ಕ್ಯಾಲಿಫೋರ್ನಿಯಾ ಬ್ಯಾಂಕಿಂಗ್ ನಿಯಂತ್ರಕರು (banking regulators) ಶುಕ್ರವಾರ ಸಿಲಿಕಾನ್ ವ್ಯಾಲಿ ಬ್ಯಾಂಕ್ ಅನ್ನು ಮುಚ್ಚಿದ್ದಾರೆ. 2008 ರಲ್ಲಿ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಂತರ ಇದು ಅತಿದೊಡ್ಡ ಬ್ಯಾಂಕಿಂಗ್ ವೈಫಲ್ಯವಾಗಿದೆ.
ಕೆಲವು ದೊಡ್ಡ ತಂತ್ರಜ್ಞಾನದ ಸ್ಟಾರ್ಟಪ್‌ಗಳಿಗೆ ಸಾಲ ನೀಡಲು ಹೆಸರುವಾಸಿಯಾಗಿರುವ ಸಿಲಿಕಾನ್ ವ್ಯಾಲಿ ಬ್ಯಾಂಕ್ ಶುಕ್ರವಾರ ಮುಚ್ಚಿರುವುದು ಹೂಡಿಕೆದಾರರು ಮತ್ತು ಠೇವಣಿದಾರರನ್ನು ಕಂಗಾಲಾಗಿಸಿದೆ. ಈ ಬೆಳವಣಿಗೆಯಿಂದ ಜಾಗತಿಕ ಮಾರುಕಟ್ಟೆಗಳು ಕೂಡ ತೀವ್ರವಾಗಿ ಕುಸಿದಿದ್ದು, ಬ್ಯಾಂಕ್ ಷೇರುಗಳು ತೀವ್ರವಾಗಿ ಕುಸಿದವು.
ಅಮೆರಿಕದ ನಿಯಂತ್ರಕರು ಶುಕ್ರವಾರ ಸಿಲಿಕಾನ್ ವ್ಯಾಲಿ ಬ್ಯಾಂಕ್ (SVB) ಅನ್ನು ಮುಚ್ಚಿದರು ಮತ್ತು ಅದರ ಠೇವಣಿಗಳ ನಿಯಂತ್ರಣವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡರು. ಇದು ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಂತರದ ಅತಿದೊಡ್ಡ ಚಿಲ್ಲರೆ ಬ್ಯಾಂಕಿಂಗ್ ವೈಫಲ್ಯವಾಗಿದೆ.
ಟೆಕ್ ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ ಮಾಡುವ ಮೂಲಕ ದೊಡ್ಡ ಸಂಪತ್ತು ಗಳಿಸಿದ ನಂತರ, ಸಿಲಿಕಾನ್ ವ್ಯಾಲಿ ಬ್ಯಾಂಕ್ ತನ್ನ ಹೆಚ್ಚಿನ ಆಸ್ತಿಗಳನ್ನು ಅಮೆರಿಕದ ಬಾಂಡ್‌ಗಳಲ್ಲಿ ಹೂಡಿಕೆ ಮಾಡಿತು. ಆದರೆ ಅಮೆರಿಕದ ಹಣದುಬ್ಬರ ದರಗಳನ್ನು ತಗ್ಗಿಸಲು, ಕಳೆದ ವರ್ಷ ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರಗಳನ್ನು ಹೆಚ್ಚಿಸಲು ಪ್ರಾರಂಭಿಸಿತು, ಇದು ಬಾಂಡ್ ಮೌಲ್ಯಗಳು ಕಡಿಮೆಯಾಗಲು ಕಾರಣವಾಯಿತು ಎಂದು ಹೇಳಲಾಗಿದೆ.
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155
ಕೋವಿಡ್ ಸಾಂಕ್ರಾಮಿಕದ ನಂತರ ಸ್ಟಾರ್ಟ್‌ಅಪ್ ಫಂಡಿಂಗ್ ಕೂಡ ಕಡಿಮೆಯಾಗಲು ಪ್ರಾರಂಭಿಸಿತು, ಇದರ ಪರಿಣಾಮವಾಗಿ ಹೆಚ್ಚಿನ ಸಂಖ್ಯೆಯ ಬ್ಯಾಂಕ್‌ನ ಗ್ರಾಹಕರು ಹಣವನ್ನು ಹಿಂತೆಗೆದುಕೊಳ್ಳಲು ಆರಂಭಿಸಿದರು. ಅವರ ವಿನಂತಿಗಳಿಗೆ ಸ್ಪಂದಿಸಲು ಸಿಲಿಕಾನ್ ವ್ಯಾಲಿ ಬ್ಯಾಂಕ್ ತನ್ನ ಕೆಲವು ಹೂಡಿಕೆಗಳನ್ನು ಮೌಲ್ಯವು ಕುಸಿದಿದ್ದರೂ ಮಾರಾಟ ಮಾಡಬೇಕಾಯಿತು.
ಈ ವಾರದ ಆರಂಭದಲ್ಲಿ ಒಂದು ಬಹಿರಂಗಪಡಿಸುವಿಕೆಯಲ್ಲಿ, ಬ್ಯಾಂಕಿಗೆ ಸುಮಾರು $2 ಬಿಲಿಯನ್ ನಷ್ಟವಾಗಿದೆ ಎಂದು ಹೇಳಿದೆ.
ಬ್ಯಾಂಕ್‌ನ ಮುಚ್ಚಿದ ನಂತರ, ಸುಮಾರು $175 ಶತಕೋಟಿ ಗ್ರಾಹಕ ಠೇವಣಿಗಳು ಈಗ ಫೆಡರಲ್ ಡಿಪಾಸಿಟ್ ಇನ್ಶುರೆನ್ಸ್ ಕಾರ್ಪೊರೇಷನ್ (FDIC) ನಿಯಂತ್ರಣದಲ್ಲಿವೆ.
ಎಫ್‌ಡಿಐಸಿ (FDIC) ನ್ಯಾಷನಲ್ ಬ್ಯಾಂಕ್ ಆಫ್ ಸಾಂತಾ ಕ್ಲಾರಾ ಎಂಬ ಹೊಸ ಬ್ಯಾಂಕ್ ಅನ್ನು ರಚಿಸಿದೆ. ಇದು ಈಗ ಸಿಲಿಕಾನ್ ವ್ಯಾಲಿ ಬ್ಯಾಂಕ್‌ನ ಎಲ್ಲಾ ಸ್ವತ್ತುಗಳನ್ನು ಹೊಂದಿರುತ್ತದೆ.
ಠೇವಣಿದಾರರಿಗೆ ಭರವಸೆ ನೀಡಿದ ಎಫ್‌ಡಿಐಸಿ, ಸೋಮವಾರ ಬೆಳಿಗ್ಗೆ ಬ್ಯಾಂಕ್‌ನ ಎಲ್ಲಾ ಶಾಖೆಗಳು ತೆರೆದ ನಂತರ ಅವರು ತಮ್ಮ ವಿಮೆ ಮಾಡಿದ ಠೇವಣಿಗಳು ಅವರಿಗೆ ಲಭ್ಯ ಇರುತ್ತವೆ ಹಾಗೂ ಹಳೆಯ ಬ್ಯಾಂಕ್‌ನ ಚೆಕ್‌ಗಳನ್ನು ಸಹ ಗೌರವಿಸಲಾಗುವುದು ಎಂದು ಹಣಕಾಸು ಸಂಸ್ಥೆ ತಿಳಿಸಿದೆ.
ಸಿಲಿಕಾನ್ ವ್ಯಾಲಿ ಬ್ಯಾಂಕ್(SVB)ನ ಹಠಾತ್ ಮುಚ್ಚುವಿಕೆಯು ಸಿಲಿಕಾನ್ ವ್ಯಾಲಿ ಉದ್ಯಮಿಗಳನ್ನು ಕಂಗಾಲಾಗಿಸಿದೆ. ಅಮೆರಿಕ ಅಧ್ಯಕ್ಷ ಬೈಡನ್ ಆಡಳಿತದ ಅಧಿಕಾರಿಗಳು ಬ್ಯಾಂಕಿಂಗ್ ರೆಗ್ಯಲೇಟರ್ಸ್ ಮೇಲೆ ಪೂರ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ