ನವದೆಹಲಿ: ಉತ್ತರ ದೆಹಲಿಯ ಗುಲಾಬಿ ಬಾಗ್ ಪ್ರದೇಶದಲ್ಲಿ ಬೈಕ್ ಮೇಲೆ ಬಂದು ಬ್ಯಾಗ್ ದರೋಡೆ ಮಾಡಿಕೊಂಡು ಪರಾರಿಯಾಗಲು ಯತ್ನಿಸದವರಿಂದ ತನ್ನ ಬ್ಯಾಗ್ ರಕ್ಷಿಸಿಕೊಳ್ಳಲು ಯತ್ನಿಸಿದ ವೇಳೆ ಮಹಿಳಾ ನ್ಯಾಯಾಧೀಶರು ರಸ್ತೆಯ ಮೇಲೆ ಬಿದ್ದು ಅವರ ತಲೆಗೆ ಗಾಯವಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಮಹಿಳಾ ನ್ಯಾಯಾಧೀಶರು ಮಾರ್ಚ್ 6 ರಂದು ರಾತ್ರಿ 10 ಗಂಟೆಗೆ ಗುಲಾಬಿ ಬಾಗ್ ಪ್ರದೇಶದಲ್ಲಿ ತನ್ನ 12 ವರ್ಷದ ಮಗನೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ಸ್ನ್ಯಾಚರ್‌ಗಳು ಹಿಂದಿನಿಂದ ಬಂದು ಅವರ ಬ್ಯಾಗನ್ನು ಕಸಿದುಕೊಳ್ಳಲು ಯತ್ನಿಸಿದ್ದಾರೆ. ಅವರು ಕಳ್ಳರ ಪ್ರಯತ್ನವನ್ನು ವಿಫಲಗೊಳಿಸಲು ಪ್ರಯತ್ನಿಸುತ್ತಿರುವಾಗ, ರಸ್ತೆಯ ಮೇಲೆ ಬಿದ್ದು ತಲೆಗೆ ಗಾಯವಾಗಿದೆ. ಮಹಿಳಾ ನ್ಯಾಯಾಧೀಶರ ಮಗ ತಕ್ಷಣ ತನ್ನ ತಂದೆಗೆ ಮಾಹಿತಿ ನೀಡಿದ್ದು, ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರ ಬ್ಯಾಗ್‌ನಲ್ಲಿ ಸುಮಾರು 8,000 ರೂಪಾಯಿ ನಗದು, ಎಟಿಎಂ ಕಾರ್ಡ್ ಮತ್ತು ಕೆಲವು ದಾಖಲೆಗಳು ಇದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155
ಮಾರ್ಚ್ 7 ರಂದು, ದೆಹಲಿಯ ಗುಲಾಬಿ ಬಾಗ್‌ನ ನಿವಾಸಿ ಹಾಗೂ ಮಹಿಳಾ ನ್ಯಾಯಾಧೀಶರ ಪುತ್ರ ಮಾಸ್ಟರ್ ಯುವರಾಜ ಅವರ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಲಾಗಿದೆ, ಇದರಲ್ಲಿ ಮೋಟಾರ್‌ಸೈಕಲ್‌ನಲ್ಲಿ ಇಬ್ಬರು ವ್ಯಕ್ತಿಗಳು ನ್ಯಾಯಾಂಗ ಅಧಿಕಾರಿಯಾಗಿರುವ ಅವರ ತಾಯಿ ರಚನಾ ತಿವಾರಿ ಲಖನ್‌ಪಾಲ್ ಅವರನ್ನು ದರೋಡೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಅವರ ಬಳಿ 8,000 ರೂ., ಕೆಲವು ದಾಖಲೆಗಳು ಮತ್ತು ಎಟಿಎಂ ಕಾರ್ಡ್ ಇರುವ ಬ್ಯಾಗ್ ಇತ್ತು. ಬೈಕ್‌ನಲ್ಲಿ ಬಂದ ಕಳ್ಳರು ಅವರನ್ನು ತಳ್ಳಿದ್ದರಿಂದ ಕೆಳಗೆ ಬಿದ್ದು ತಲೆಗೆ ಗಾಯವಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ.
ದೆಹಲಿ ಪೊಲೀಸರು ತಕ್ಷಣವೇ ಪ್ರಕರಣ ದಾಖಲಿಸಿಕೊಂಡಿದ್ದು, ಗುಲಾಬಿ ಬಾಗ್ ಪೊಲೀಸ್ ಠಾಣೆಯ ತಂಡವು ಇಬ್ಬರು ಆರೋಪಿಗಳಾದ ದಿಲ್ಶಾದ್ ಮತ್ತು ರಾಹುಲ್ ಎಂಬವರನ್ನು ಬಂಧಿಸಿದೆ.
ತನಿಖೆಯ ಸಮಯದಲ್ಲಿ, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ, ನಾವು ಬೈಕ್ ಅನ್ನು ಪತ್ತೆಹಚ್ಚಿದ್ದೇವೆ ಮತ್ತು ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದೇವೆ” ಎಂದು ಪೊಲೀಸರು ತಿಳಿಸಿದ್ದಾರೆ. “ಆರೋಪಿ ಎಂಡಿ ದಿಲ್ಶಾದ್ ದರೋಡೆಕೋರನಾಗಿದ್ದು, ಈ ಹಿಂದೆ 10 ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಮತ್ತು ಮತ್ತೊಬ್ಬ ಆರೋಪಿ ರಾಹುಲ್ ಮೊದಲ ಬಾರಿಗೆ ಅಪರಾಧ ಮಾಡಿದ್ದಾನೆ” ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ದರೋಡೆಗೆ ಬಳಸಿದ್ದ ಬೈಕ್ ಹಾಗೂ ಎಟಿಎಂ ಕಾರ್ಡ್ ಹಾಗೂ 4,500 ರೂ.ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹೆಚ್ಚಿನ ತನಿಖೆಗಳು ನಡೆಯುತ್ತಿವೆ.
ನಿಮ್ಮ ಕಾಮೆಂಟ್ ಬರೆಯಿರಿ