ಮುಂಬೈ: ಡಿಸೈನರ್ ಎಂದು ಪೋಸ್ ನೀಡಿ ತನ್ನ ತಂದೆಗೆ ಸಂಬಂಧಿಸಿದ ಕ್ರಿಮಿನಲ್ ಪ್ರಕರಣದಲ್ಲಿ ಮಧ್ಯಪ್ರವೇಶಿಸುವಂತೆ ಕೋರಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವಿಸ್ ಅವರಿಗೆ ಒಂದು ಕೋಟಿ ಲಂಚದ ಆಫರ್ ನೀಡಿದ್ದ ವಾಂಟೆಡ್ ಬುಕ್ಕಿಯ ಮಗಳನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಭ್ರಷ್ಟಾಚಾರ ತಡೆ ಕಾಯ್ದೆ (ಪಿಸಿ) ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳ ಅಡಿಯಲ್ಲಿ ಬಂಧಿತರಾಗಿರುವ ಅನಿಕ್ಷಾ ಜೈಸಿಂಘಾನಿ ವಾಂಟೆಡ್ ಬುಕ್ಕಿ ಅನಿಲ್ ಜೈಸಿಂಘಾನಿ ಪುತ್ರಿ.
ಅಮೃತಾ ಫಡ್ನವಿಸ್ ಅವರು ಸ್ವಯಂಘೋಷಿತ ಡಿಸೈನರ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು, ಅವರು ಕ್ರಿಮಿನಲ್ ಪ್ರಕರಣದಲ್ಲಿ ಮಧ್ಯಪ್ರವೇಶಿಸುವಂತೆ ಕೋರಿ ತನಗೆ 1 ಕೋಟಿ ರೂಪಾಯಿ ಲಂಚ ನೀಡಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಮೂಲಗಳ ಪ್ರಕಾರ, ಅನಿಕ್ಷಾ ಕಾನೂನು ಪದವೀಧರರಾಗಿದ್ದು, ಥಾಣೆ ಜಿಲ್ಲೆಯ ಉಲ್ಲಾಸ್‌ನಗರ ನಿವಾಸಿಯಾಗಿದ್ದಾಳೆ.
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155
ಆಕೆಯ ತಂದೆ ಅನಿಲ್ ಜೈನ್‌ಸಿಂಘಾನಿ ಮಹಾರಾಷ್ಟ್ರ, ಗೋವಾ ಮತ್ತು ಅಸ್ಸಾಂನಲ್ಲಿ ಬೆಟ್ಟಿಂಗ್, ಬೆದರಿಕೆ, ವಂಚನೆ ಮತ್ತು ಸರ್ಕಾರಿ ಅಧಿಕಾರಿಗಳನ್ನು ದಾರಿ ತಪ್ಪಿಸುವ ಅನೇಕ ಪ್ರಕರಣಗಳನ್ನು ಎದುರಿಸುತ್ತಿದ್ದು, ಪರಾರಿಯಾಗಿದ್ದಾನೆ. ಪೊಲೀಸ್ ಕ್ರಮದಿಂದ ತಪ್ಪಿಸಿಕೊಳ್ಳಲು ತನ್ನ ತಂದೆಗೆ ಸಹಾಯ ಮಾಡುವಂತೆ ಮಗಳು ಹಲವಾರು ಜನರನ್ನು ಭೇಟಿ ಮಾಡುತ್ತಿದ್ದಳು.
ಅಮೃತಾ ಫಡ್ನವಿಸ್ ಅವರನ್ನು ಸಂಪರ್ಕಿಸಲು ಅನಿಕ್ಷಾ ಡಿಸೈನರ್ ಎಂದು ಪೋಸ್ ನೀಡಿದ್ದಾಳೆ ಮತ್ತು ತಾನು ತಾಯಿಯನ್ನು ಕಳೆದುಕೊಂಡಿರುವುದಾಗಿ ಹೇಳುವ ಮೂಲಕ ಅಮೃತಾ ಫಡ್ನವಿಸ್ ಅವರ ಸಹಾನುಭೂತಿ ಗಳಿಸಲು ಪ್ರಯತ್ನಿಸಿದ್ದಾಳೆ ಎಂದು ಮೂಲಗಳು ತಿಳಿಸಿವೆ.
ಅಮೃತಾ ಫಡ್ನವಿಸ್ ದಾಖಲಿಸಿರುವ ಎಫ್‌ಐಆರ್‌ನಲ್ಲಿ ಅನಿಕ್ಷಾ ತನ್ನ ತಂದೆ ವಿರುದ್ಧದ ಪೊಲೀಸ್ ಕೇಸ್‌ಗಳನ್ನು ಕ್ಲೋಸ್ ಮಾಡಲು ಸಹಾಯ ಮಾಡಲು 1 ಕೋಟಿ ರೂಪಾಯಿ ಲಂಚ ನೀಡುವ ಪ್ರಸ್ತಾಪ ಮಾಡುವ ಮೊದಲು ಹಲವಾರು ಬಾರಿ ಭೇಟಿಯಾಗಿದ್ದಳು ಎಂದು ಹೇಳುತ್ತದೆ.
ನಿಮ್ಮ ಕಾಮೆಂಟ್ ಬರೆಯಿರಿ