ಮಡಗಾಸ್ಕರ್‌ನಿಂದ ವಲಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿ ಮುಳುಗಿ 34 ಮಂದಿ ಸಾವು

ಅಂಟಾನಾನರಿವೊ (ಮಡಗಾಸ್ಕರ್): ಮಯೊಟ್ಟೆಗೆ ತೆರಳಲು ವಲಸಿಗರನ್ನು ಹೊತ್ತೊಯ್ಯುತ್ತಿದ್ದ ಬೋಟ್‌ ಮುಳುಗಿದ ನಂತರ ಮಡಗಾಸ್ಕರ್‌ನ ಅಧಿಕಾರಿಗಳು ಹಿಂದೂ ಮಹಾಸಾಗರದಿಂದ 34 ಮೃತದೇಹಗಳನ್ನು ಹೊರತೆಗೆದಿದ್ದಾರೆ.
ಮಲಗಾಸಿ ಕಡಲ ಅಧಿಕಾರಿಗಳು ಪ್ರಕಾರ, 58 ಪ್ರಯಾಣಿಕರನ್ನು ಹೊತ್ತ ಬೋಟ್‌ ಅಧಿಕೃತ ವಲಸೆ ಅಥವಾ ಕಸ್ಟಮ್ಸ್ ನಿಯಂತ್ರಣಗಳ ಮೂಲಕ ಹೋಗದೆ ರಹಸ್ಯವಾಗಿ ಸಾಗಿತು ಮತ್ತು ಮಡಗಾಸ್ಕರ್‌ನ ವಾಯುವ್ಯ ಕರಾವಳಿಯಲ್ಲಿ ಶನಿವಾರ ತಡರಾತ್ರಿ ಮುಳುಗಿತು.
ಕಸ್ಟಮ್ಸ್ ಮತ್ತು ನೌಕಾಪಡೆಯ ಗಸ್ತು ದೋಣಿಗಳು ನೋಸಿ ಫಾಲಿ ದ್ವೀಪದ ಬಳಿ ಮೃತದೇಹಗಳನ್ನು ವಶಕ್ಕೆ ಪಡೆದಿವೆ ಎಂದು ಬಂದರು, ಸಾಗರ ಮತ್ತು ಫ್ಲೂವಿಯಲ್ ಏಜೆನ್ಸಿಯ ಮಹಾನಿರ್ದೇಶಕ ಜೀನ್ ಎಡ್ಮಂಡ್ ರಾಂಡ್ರಿಯಾನಾಂಟೆನೈನಾ ಹೇಳಿದ್ದಾರೆ. ಮೃತರು ಮುಖ್ಯವಾಗಿ ಅಂಬಿಲೋಬೆ ಮತ್ತು ತಮಟವೆ, ಮಜುಂಗಾ ಮತ್ತು ನೋಸಿ ಬಿಗಳಿಂದ ಬಂದವರು ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ ಎಂದು ಹೇಳಿದರು.

ಈ ದುರಂತದಿಂದ ಇಡೀ ಸರ್ಕಾರಿ ಯಂತ್ರವು ಕೋಪಗೊಂಡಿದೆ. ತನಿಖೆಯನ್ನು ವೇಗಗೊಳಿಸಲು ನಾವು ಸಾಧ್ಯವಿರುವ ಎಲ್ಲ ವಿಧಾನಗಳನ್ನು ಅಳವಡಿಸುತ್ತಿದ್ದೇವೆ, ”ರಾಂಡ್ರಿಯಾನಾಂಟೆನೈನಾ ಹೇಳಿದರು.
ಸ್ಥಳೀಯ ಮೀನುಗಾರರು ಬೋಟ್‌ನಲ್ಲಿದ್ದ 24 ಬದುಕುಳಿದವರನ್ನು ರಕ್ಷಿಸಿದ್ದಾರೆ ಎಂದು ಅವರು ಹೇಳಿದರು. ಬದುಕುಳಿದವರಲ್ಲಿ ಒಬ್ಬರನ್ನು ಹೊರತುಪಡಿಸಿ ಎಲ್ಲರೂ ಬಂಧನಕ್ಕೆ ಒಳಗಾಗುತ್ತೇವೆ ಎಂಬ ಭಯದಿಂದ “ಅಧಿಕಾರಿಗಳ ಬರುವ ಮೊದಲು ಅಲ್ಲಿಂದ ಪಲಾಯನ ಮಾಡಿದ್ದಾರೆ, ಎಂದು ಡಯಾನಾ ಪ್ರದೇಶದ ಜೆಂಡರ್ಮೆರಿ ಗುಂಪಿನ ಕಮಾಂಡರ್ ಲೆಫ್ಟಿನೆಂಟ್ ಕರ್ನಲ್ ಜೂಲ್ಸ್ ಟೊವೊಸನ್ ಆಂಡ್ರಿಯಾಟ್ಸಿರಿನಿಯಾನಾ ಹೇಳಿದರು.
ಗರ್ಭಿಣಿಯಾಗಿರುವ ಯುವತಿ ಮಾತ್ರ ಪತ್ತೆಯಾಗಿದ್ದಾಳೆ” ಎಂದು ಅವರು ಹೇಳಿದರು. ಆಕೆಗೆ ಆಂಬಿಲೋಬ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಪ್ರಮುಖ ಸಾಕ್ಷಿಯಾಗಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ಅಕ್ರಮವಾಗಿ ವಲಸಿಗರನ್ನು ಸಾಗಿಸುವ ಕಳ್ಳಸಾಗಾಣಿಕೆದಾರರು ಅಥವಾ ಸಹಚರರು ಎಂದು ಶಂಕಿಸಲಾಗಿರುವ ಪುರುಷ ಮತ್ತು ಮಹಿಳೆ ಇಬ್ಬರಿಗಾಗಿ ಅಧಿಕಾರಿಗಳು ಹುಡುಕುತ್ತಿದ್ದಾರೆ.
ಮಯೊಟ್ಟೆ ಸಣ್ಣ ದ್ವೀಪಗಳ ಒಂದು ದ್ವೀಪಸಮೂಹವಾಗಿದ್ದರೂ, ಇದು ಫ್ರೆಂಚ್ ಪ್ರದೇಶವಾಗಿದ್ದು ಮಡಗಾಸ್ಕರ್‌ನಿಂದ ವಲಸೆ ಬಂದವರಿಗೆ ಇದು ಆಕರ್ಷಕ ತಾಣವಾಗಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement