ಕುಮಟಾ:  ಜಿಲ್ಲಾ ಮಟ್ಟದ ಸೌಲಭ್ಯ ವಿತರಣಾ ಸಮಾವೇಶದಲ್ಲಿ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ

ಕುಮಟಾ : ನಗರದ ಮಣಕಿ ಮೈದಾನದಲ್ಲಿ ನಡೆದ ಉತ್ತರಕನ್ನಡ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ ಸಂಯುಕ್ತ ಆಶ್ರಯದಲ್ಲಿ ಹಲ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಸಮಾರಂಭ ಮತ್ತು ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಜಿಲ್ಲಾ ಮಟ್ಟದ ಸೌಲಭ್ಯ ವಿತರಣಾ ಸಮಾವೇಶ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವರು ಕೋಟ ಶ್ರೀನಿವಾಸ್ ಪೂಜಾರಿ ಸಮಾವೇಶಕ್ಕೆ ಚಾಲನೆ ನೀಡಿದರು.
ಸಮಾವೇಶ ದಲ್ಲಿ ಫಲಾನುಭವಿಗಳಿಗೆ ನಿವೇಶನ ಹಕ್ಕು ಪತ್ರ ನೀಡಲಾಯಿತು. ಹಿಂದುಳಿದ ವರ್ಗಗಳ ವಿಕಲ ಚೇತನರಿಗೆ ದ್ವಿಚಕ್ರ ವಾಹನ ಸ್ಕೂಟಿ ವಿತರಣೆ ಮಾಡಲಾಯಿತು.
ಈ ಸಂದರ್ಭ ದಲ್ಲಿ ಮಾತನಾಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು, ಯಾವ ಸರ್ಕಾರವು ಮಾಡದ ಅಭಿವೃದ್ಧಿ ಕಾರ್ಯವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ. ಜಿಲ್ಲೆಯ 20 ಸಾವಿರ ಫಲಾನುಭವಿಗಳಿಗೆ ಇಂದು, ಶುಕ್ರವಾರ ವಸತಿ ಹಕ್ಕು ಪತ್ರ, ಚೆಕ್ ಹಾಗೂ ಸ್ಕೂಟಿ ವಿತರಣೆ ಮಾಡಲಾಗಿದೆ ಎಂದರು.

ಉತ್ತರಕನ್ನಡವನ್ನು ಕಾಡುತ್ತಿದ್ದ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಸರ್ಕಾರ ಪ್ರಯತ್ನ ಮಾಡಿದೆ. ನಾರಾಯಣ ಗುರು ನಿಗಮ‌ ಸ್ಥಾಪನೆ ಮಾಡಲಾಗಿದೆ. ಇದರಿಂದ ಜಿಲ್ಲೆಯ ನಾಮಧಾರಿ ಸಮಾಜದವರಿಗೆ ಅನುಕೂಲವಾಗಲಿದೆ. ಅಲ್ಲದೆ, ಉತ್ತರಕನ್ನಡ ಜಿಲ್ಲೆಯ 1.68 ಲಕ್ಷ ಮನೆಗೆ ಕಿಸಾನ್ ಸಮ್ಮಾನ ಯೋಜನೆಯ ಅಡಿಯಲ್ಲಿ 168.80 ಕೋಟಿ ರೂಪಾಯಿ ಅನುದಾನ ಬಂದಿದೆ. 13 ಸಾವಿರ ಮನೆಗೆ ಬೆಳಕು ಯೋಜನೆಯಡಿ ಬೆಳಕು ನೀಡಲಾಗಿದೆ. ಇನ್ನೂ 1000 ಮನೆಗಳಿಗೆ ವಿದ್ಯುತ್ ಕೊಡಬೇಕಿದ್ದು, ಶೀಘ್ರವೇ ನೀಡಲಾಗುವುದು. 2500 ಬಡವರಿಗೆ ಮನೆ ನೀಡಲಾಗಿದೆ. ಪ.ಜಾತಿ, ಪ.ಪಂಗಡದ 28,000 ಜನರಿಗೆ ದ್ವಿಚಕ್ರ ವಾಹನ ನೀಡಿದ್ದೇವೆ. 12,000 ಹೊಲಿಗೆ ಯಂತ್ರ ವಿತರಿಸಿದ್ದೇವೆ ಎಂದರು.
ಉತ್ತರಕನ್ನಡದ ನಾಮಧಾರಿಗಳು ನಿಗಮಮಂಡಳಿಗಾಗಿ ಅರ್ಜಿ ಸಲ್ಲಿಸಿದ್ದರು, ಅದಕ್ಕಾಗಿ ನಾರಾಯಣ ಗುರು ನಿಗಮ‌ ಸ್ಥಾಪನೆ ಮಾಡಿದ್ದೇವೆ   ಎಂದು ಮಾಹಿತಿ ನೀಡಿದರು.

ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ ಭಯೋತ್ಪಾದನೆಯನ್ನು ಎದುರಿಸುವ ಶಕ್ತಿ ಕೊಟ್ಟ, ಶಿಕ್ಷಣ, ಕೈಗಾರಿಕೆ ಹಾಗೂ ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡಿ ಮೋದಿಯವರ ನೇತೃತ್ವದ ಸರ್ಕಾರ ಈಗ ಜಗತ್ತೇ ಭಾರತದತ್ತ ನೋಡುವಂತೆ ಮಾಡುತ್ತಿದೆ ಎಂದರು.
ಇಂಧನ ಸಚಿವರು ಸುನಿಲಕುಮಾರ ಮಾತನಾಡಿ ಬಿಜೆಪಿಯ ಡಬ್ಬಲ್ ಎಂಜಿನ್‌ ಸರ್ಕಾರವು ಯೋಜನೆ ಮನೆಬಾಗಿಲಿಗೆ ತಂದಿದೆ. ಶೇ.80ರಷ್ಟು ಜನರು ಸರ್ಕಾರದ ಯೋಜನೆಗಳ ಲಾಭ ಪಡೆಯುತ್ತಿದ್ದಾರೆ. ಮಹಿಳೆಯರಿಗಾಗಿ ಭಾಗ್ಯಲಕ್ಷ್ಮೀ ಯೋಜನೆ ಇತ್ಯಾದಿ ತಂದಿದೆ ಎಂದು ಜನರಿಗೆ ಬಿಜೆಪಿ ಸರ್ಕಾರದ ಜನಪರ ಕಾಳಜಿ ಬಗ್ಗೆ ಜನರಿಗೆ ತಿಳಿಸಿದರು.
ಶಾಸಕ ದಿನಕರ ಶೆಟ್ಟಿ ಮಾತನಾಡಿ ವಸತಿ ನಿವೇಶ ಹಾಗೂ ವಿವಿಧ ಯೋಜನೆಯನ್ನು ಗರಿಷ್ಠ ಮಟ್ಟದಲ್ಲಿ ಕುಮಟಾ -ಹೊನ್ನಾವರ ಕ್ಷೇತ್ರಕ್ಕೆ ತಂದಿರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾರವಾರ ಶಾಸಕಿ ರೂಪಾಲಿ ನಾಯ್ಕ, ಭಟ್ಕಳ ಶಾಸಕ ಸುನೀಲ ನಾಯ್ಕ ಮೊದಲಾದವರಿದ್ದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement