ಎಂಥಾ ಲೋಕವಯ್ಯಾ…: ಮಹಿಳೆ ಕೊಂದು ಹೃದಯ ತುಂಡು ಮಾಡಿ ಆಲೂಗಡ್ಡೆ ಜೊತೆ ಬೇಯಿಸಿ ಕುಟುಂಬಕ್ಕೆ ತಿನ್ನಲು ನೀಡಿದ ವ್ಯಕ್ತಿ.. ನಂತ್ರ ಅವ್ರನ್ನೂ ಕೊಂದ..!

ಒಕ್ಲಹೋಮಾ (ಅಮೆರಿಕ) : ಅಮೆರಿಕದ ಒಕ್ಲಹೋಮಾ ರಾಜ್ಯದಲ್ಲಿ ಸತತ ಐದು ಜೀವಾವಧಿ ಶಿಕ್ಷೆ ವಿಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ದಿ ಇಂಡಿಪೆಂಡೆಂಟ್ ಪ್ರಕಾರ, 44 ವರ್ಷದ ಲಾರೆನ್ಸ್ ಪಾಲ್ ಆಂಡರ್ಸನ್ ಎಂಬಾತ ಜೈಲಿನಿಂದ ಅವಧಿಗಿಂತ ಮುಂಚಿತವಾಗಿ ಬಿಡುಗಡೆಯಾದ ಒಂದು ತಿಂಗಳ ನಂತರ 2021 ರಲ್ಲಿ ಭೀಕರ ಕೊಲೆಗಳನ್ನು ಮಾಡಿದ್ದಾನೆ.
ಆತ ಬಿಡುಗಡೆಯಾದ ವಾರಗಳ ನಂತರ, ಆಂಡ್ರಿಯಾ ಬ್ಲಾಂಕೆನ್‌ಶಿಪ್‌ ಎಂಬ ಮಹಿಳೆಯ ಕೊಲೆ ಮಾಡಿ ಅವಳ ಹೃದಯವನ್ನು ತುಂಡರಸಿ ಅದನ್ನು ತನ್ನ ಚಿಕ್ಕಮ್ಮ ಮತ್ತು ಚಿಕ್ಕಪ್ಪನ ಮನೆಗೆ ಕೊಂಡೊಯ್ದಿದ್ದಾನೆ ಮತ್ತು ನಂತರ ತುಂಡರಿಸಿದ ಹೃದಯವನ್ನು ಆಲೂಗಡ್ಡೆಯೊಂದಿಗೆ ಬೇಯಿಸಿದ್ದಾನೆ. ನಂತರ ಆತ 67 ವರ್ಷದ ಲಿಯಾನ್ ಪೈ ಮತ್ತು ಅವರ 4 ವರ್ಷದ ಮೊಮ್ಮಗಳು ಕೆಯೋಸ್ ಯೇಟ್ಸ್ ಎಂಬವರನ್ನು ಇರಿದು ಕೊಂದಿದ್ದಾನೆ. ಇರಿದು ಕೊಲ್ಲುವ ಮೊದಲು ದಂಪತಿಗೆ ಭೀಕರ ಊಟವನ್ನು ನೀಡಲು ಪ್ರಯತ್ನಿಸಿದ್ದ ಎಂದು ಎಬಿಸಿ ನ್ಯೂಸ್‌ ವರದಿ ಮಾಡಿದೆ.
ಸರ್ಚ್ ವಾರಂಟ್ ಪಡೆಯುವಾಗ, ಒಕ್ಲಹೋಮ ಸ್ಟೇಟ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್‌ನ ಏಜೆಂಟ್ ನ್ಯಾಯಾಧೀಶರಿಗೆ ಲಾರೆನ್ಸ್ ಪಾಲ್ ಆಂಡರ್ಸನ್ ತನ್ನ ನೆರೆಯ ಆಂಡ್ರಿಯಾ ಲಿನ್ ಬ್ಲಾಂಕೆನ್‌ಶಿಪ್ ಎಂಬ ಮಹಿಳೆಯನ್ನು ಒಕ್ಲಹೋಮಾ ಸಿಟಿಯಿಂದ ನೈಋತ್ಯಕ್ಕೆ 40 ಮೈಲುಗಳಷ್ಟು ದೂರದಲ್ಲಿರುವ ಚಿಕಾಶಾದಲ್ಲಿನ ಅವಳ ಮನೆಯಲ್ಲಿ ಕೊಂದಿದ್ದಾನೆ ಎಂದು ಹೇಳಿದ್ದಾರೆ. ಅವಳ ಹೃದಯವನ್ನು ಕತ್ತರಿಸಿ ತುಂಡು ಮಾಡಿ ಬೇಯಿಸಿದ್ದಾನೆ ಹಾಗೂ ಶರೀರದಿಂದ ದೆವ್ವವನ್ನು ಬಿಡುಗಡೆ ಆಗಬೇಕೆಂದು ಆತನ ಕುಟುಂಬ ಅದನ್ನು ತಿನ್ನಬೇಕು ಎಂದು ಆಲೂಗಡ್ಡೆ ಜೊತೆ ಬೇಯಿಸಿದ್ದಾನೆ ಹಾಗೂ ಕುಟುಂಬಕ್ಕೆ ತಿನ್ನಿಸಲು ಯತ್ನಿಸಿದ್ದಾನೆ ಎಂದು ಇನ್ವೆಸ್ಟಿಗೇಶನ್‌ನ ಏಜೆಂಟ್ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಭಯೋತ್ಪಾದಕರ ಅಂತ್ಯಕ್ರಿಯೆ ನೇತೃತ್ವ ವಹಿಸಿದ್ದ ಘೋಷಿತ ಭಯೋತ್ಪಾದಕನನ್ನು 'ಕೌಟುಂಬಿಕ ವ್ಯಕ್ತಿ'-'ಧರ್ಮ ಪ್ರಚಾರಕ' ಎಂದ ಪಾಕಿಸ್ತಾನ ಸೇನೆ...!

ಅದೇ ರಾತ್ರಿ ತನ್ನ ಚಿಕ್ಕಪ್ಪ ಲಿಯಾನ್ ಪೈ ಮತ್ತು ಪೈ ಅವರ ಮೊಮ್ಮಗಳು ಕೇಯೋಸ್ ಯೇಟ್ಸ್ ಎಂಬ 4 ವರ್ಷದ ಹುಡುಗಿಯನ್ನು ಅವರ ಮನೆಯಲ್ಲಿ ಕೊಂದ ಆರೋಪವೂ ಇದೆ. ಚಿಕ್ಕಮ್ಮ ಡೆಲ್ಸಿ ಪೈ ಕೂಡ ಇರಿತಕ್ಕೊಳಗಾದರು, ಆದರೆ ಬದುಕುಳಿದರು. ಆಂಡರ್ಸನ್ ಮನೆಯ ಇನ್ನೊಂದು ಕೋಣೆಯಲ್ಲಿ ದಿಂಬುಗಳ ಮೇಲೆ ವಾಂತಿ ಮಾಡುತ್ತಿರುವುದು ಕಂಡುಬಂದಿದೆ ಮತ್ತು ಅಧಿಕಾರಿಗಳು ಆತನನ್ನು ಬಂಧಿಸಿದ್ದಾರೆ.
ಆಂಡರ್ಸನ್ ಅವಧಿಗಿಂತ ಮೊದಲು ಜೈಲಿನಿಂದ ಬಿಡುಗಡೆಯಾಗುವ ಮೊದಲು ಡ್ರಗ್ ಪ್ರಕರಣದಲ್ಲಿ 20 ವರ್ಷಗಳ ಶಿಕ್ಷೆಗೆ ಒಳಗಾಗಿದ್ದ. ಆದರೆ ಕೇವಲ ಕೇವಲ ಮೂರು ವರ್ಷಗಳ ಶಿಕ್ಷೆ ಅನುಭವಿಸಿ ಅವಧಿಗಿಂತ ಮೊದಲೇ ಬಿಡುಗಡೆಯಾಗಿದ್ದ.

ಒಕ್ಲಹೋಮಾದ ಗವರ್ನರ್ ಕೆವಿನ್ ಸ್ಟಿಟ್ ಅವರು ಮನಪರಿವರ್ತನೆ ಆಧಾರದ ಮೇಲೆ ಕೈದಿಗಳನ್ನು ಅವಧಿಗಿಂತ ಮೊದಲೇ ಬಿಡುಗಡೆ ಮಾಡುವ ಸಾಮೂಹಿಕ ಬಿಡುಗಡೆಯ ಭಾಗವಾಗಿ ಅವಧಿಗಿಂತ ಮೊದಲೇ ಜೈಲಿನಿಂದ ಈತ ಬಿಡುಗಡೆಯಾಗಿದ್ದ. ಆದರೆ ತನಿಖೆಯ ನಂತರ ಆತ ತಪ್ಪಾಗಿ ಬಿಡುಗಡೆಯ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಎಂಬುದು ಕಂಡುಬಂದಿದೆ.
ಕೊಲೆ, ಆಕ್ರಮಣ ಮತ್ತು ಅಂಗವೈಕಲ್ಯ ಮಾಡಿದ್ದರ ಬಗ್ಗೆ ತಪ್ಪನ್ನು ಒಪ್ಪಿಕೊಂಡ ನಂತರ ಆತನಿಗೆ ಸತತ ಐದು-ಜೀವಾವಧಿ ಶಿಕ್ಷೆಯನ್ನು ವಿಧಿಸಲಾಯಿತು.
ಹಲ್ಲೆಯಿಂದ ಗಾಯಗೊಂಡಿರುವ ಆತನ ಚಿಕ್ಕಮ್ಮ ಮತ್ತು ಇತರ ಸಂತ್ರಸ್ತರ ಕುಟುಂಬಗಳು ಒಕ್ಲಹೋಮ ಗವರ್ನರ್ ಮತ್ತು ಜೈಲು ಪೆರೋಲ್ ಮಂಡಳಿಯ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದಾರೆ.

ಪ್ರಮುಖ ಸುದ್ದಿ :-   ಭಯೋತ್ಪಾದಕರ ಅಂತ್ಯಕ್ರಿಯೆ ನೇತೃತ್ವ ವಹಿಸಿದ್ದ ಘೋಷಿತ ಭಯೋತ್ಪಾದಕನನ್ನು 'ಕೌಟುಂಬಿಕ ವ್ಯಕ್ತಿ'-'ಧರ್ಮ ಪ್ರಚಾರಕ' ಎಂದ ಪಾಕಿಸ್ತಾನ ಸೇನೆ...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement