ಮಂಗಳ ಗ್ರಹದಿಂದ ಕಲ್ಲು-ಮಣ್ಣಿನ ಸ್ಯಾಂಪಲ್‌ ಭೂಮಿಗೆ ತರಲು ನಾಸಾಕ್ಕೆ $ 949 ಮಿಲಿಯನ್ ಹಣ ಹಂಚಿಕೆ ಮಾಡಿದ ಅಮೆರಿಕ

ಮಂಗಳ ಗ್ರಹದಿಂದ ಕಲ್ಲು ಮತ್ತು ಮಣ್ಣಿನ ಮಾದರಿಗಳನ್ನು ಭೂಮಿಗೆ ತರಲು ನಾಸಾ (NASA)ಕ್ಕೆ $ 949 ಮಿಲಿಯನ್ ಬಜೆಟ್ ನೀಡಲಾಗಿದೆ. ಇದು 2024ರ ಮೊದಲ ವರ್ಷಕ್ಕೆ $27.2 ಶತಕೋಟಿಐಾಗಿದ್ದು, ಇದು ಹಿಂದಿನ ವರ್ಷಕ್ಕಿಂತ $ 1.8 ಶತಕೋಟಿ ಅಥವಾ 7% ಹೆಚ್ಚಳ ಕೋರಿದ ಬೈಡನ್‌ ಆಡಳಿತದ ವಿನಂತಿಯ ಭಾಗವಾಗಿದೆ. ನಾಸಾ (NASA) ನಿರ್ವಾಹಕ ಬಿಲ್ ನೆಲ್ಸನ್ ಮಂಗಳಯಾನಕ್ಕಾಗಿ ಹಣ ಹಂಚಿಕೆ ಮಾಡಿರುವುದನ್ನು ಶ್ಲಾಘಿಸಿದ್ದಾರೆ.
ನಾಸಾಕ್ಕೆ ಬೈಡನ್ ಆಡಳಿತದ ಬಜೆಟ್‌ನಲ್ಲಿ ಹಣ ನೀಡಿರುವುದು ವೈಜ್ಞಾನಿಕ ಆವಿಷ್ಕಾರಕ್ಕೆ ಗೇಮ್‌ ಚೇಂಜರ್‌ ಆಗಬಹುದಾಗಿದೆ. ಮಂಗಳ ಗ್ರಹದ ಸ್ಯಾಂಪಲ್ ರಿಟರ್ನ್ ಮಿಷನ್‌ಗಾಗಿ $ 949 ಮಿಲಿಯನ್ ಅನ್ನು ನಿಗದಿಪಡಿಸುವುದರೊಂದಿಗೆ, ನಾವು ಕೆಂಪು ಗ್ರಹದಿಂದ ಕಲ್ಲು ಮತ್ತು ಮಣ್ಣಿನ ಮಾದರಿಗಳನ್ನು ಭೂಮಿಗೆ ತರಲು ಮತ್ತು ಸೌರವ್ಯೂಹದ ವ್ಯವಸ್ಥೆ ಬಗ್ಗೆ ನಮ್ಮ ತಿಳಿವಳಿಕೆಯನ್ನು ವಿಸ್ತರಿಸಲು ಸಾಧ್ಯವಾಗುತ್ತದೆ ಎಂದು ನೆಲ್ಸನ್ ಟ್ವೀಟ್ ಮಾಡಿದ್ದಾರೆ.
ನಿಗದಿಪಡಿಸಿದ ಮೊತ್ತವನ್ನು ನಾಸಾವು ಯುರೋಪಿಯನ್ ಸ್ಪೇಸ್ ಏಜೆನ್ಸಿ (ESA)ಯೊಂದಿಗೆ ಜಂಟಿಯಾಗಿ ಅಭಿವೃದ್ಧಿಪಡಿಸುತ್ತಿರುವ ಮಂಗಳ ಗೃಹದ ಸ್ಯಾಂಪಲ್‌ ರಿಟರ್ನ್ ಅಭಿಯಾನಕ್ಕೆ ಖರ್ಚು ಮಾಡುತ್ತದೆ. ಈ ಅಭಿಯಾನದ ಅಡಿಯಲ್ಲಿ, 2033ರ ವೇಳೆಗೆ ಪರ್ಸೆವೆರೆನ್ಸ್ ರೋವರ್ ಬಾಹ್ಯಾಕಾಶ ನೌಕೆ ಸಂಗ್ರಹಿಸಿದ ಮಾದರಿಗಳನ್ನು ಭೂಮಿಗೆ ಮರಳಿ ತರಲು ನಾಸಾ ಯೋಜಿಸಿದೆ. ಕಳೆದ ವರ್ಷ ಬಿಡುಗಡೆಯಾದ ಯೋಜನೆಯ ಪ್ರಕಾರ, ಈ ಮಂಗಳಯಾನವು 2027 ರಲ್ಲಿ ಕೆಂಪು ಗ್ರಹಕ್ಕೆ ಆರ್ಬಿಟರ್ ಉಡಾವಣೆಯೊಂದಿಗೆ ಪ್ರಾರಂಭವಾಗುತ್ತದೆ.

ಪ್ರಮುಖ ಸುದ್ದಿ :-   ವೀಡಿಯೊ..| ಅಬ್ಬಬ್ಬಾ...ಅದೆಷ್ಟು ಉದ್ದನೆಯ ಕೂದಲು ; ಇದು ಗಿನ್ನೆಸ್ ದಾಖಲೆಗೆ ಸೇರ್ಪಡೆ : ಇವರ ಕೂದಲು ವಿಶ್ವದ ಅತಿ ಎತ್ತರದ ಮನುಷ್ಯನಿಗಿಂತಲೂ ಉದ್ದ | ವೀಕ್ಷಿಸಿ

ಆರ್ಟೆಮಿಸ್ ಯೋಜನೆಗೆ $8.1 ಬಿಲಿಯನ್ ಹಣ
ಶ್ವೇತಭವನದ ಬಜೆಟ್ ಡಾಕ್ಯುಮೆಂಟ್ ಪ್ರಕಾರ, ಗಗನಯಾತ್ರಿಗಳು ಚಂದ್ರನತ್ತ ಹೋಗುವ ಮತ್ತು ಚಂದ್ರನ ಮೇಲೆ ನೆಲೆಗಳನ್ನು ಸ್ಥಾಪಿಸುವ ಮಹತ್ವಾಕಾಂಕ್ಷೆಯ ಆರ್ಟೆಮಿಸ್ ಕಾರ್ಯಕ್ರಮಕ್ಕೆ $8.1 ಶತಕೋಟಿಯನ್ನು ನಿಗದಿಪಡಿಸಲಾಗಿದೆ. “ಆರ್ಟೆಮಿಸ್ II ಮಿಷನ್‌ನಲ್ಲಿ ಚಂದ್ರನ ಸುತ್ತ ಗಗನಯಾತ್ರಿಗಳನ್ನು ಹಾರಿಸಲು ಮತ್ತು ನಂತರ ಮೊದಲ ಮಹಿಳೆ, ಮೊದಲ ಬಣ್ಣದ ವ್ಯಕ್ತಿ (ಬಿಳಿಯೇತರ ವ್ಯಕ್ತಿ) ಮತ್ತು ಮತ್ತೊಂದು ರಾಷ್ಟ್ರದಿಂದ ಮೊದಲ ಗಗನಯಾತ್ರಿ ಸೇರಿದಂತೆ ಗಗನಯಾತ್ರಿಗಳನ್ನು ಇಳಿಸಲು ಅಗತ್ಯವಾದ ರಾಕೆಟ್‌ಗಳು, ಸಿಬ್ಬಂದಿ ವಾಹನ, ಚಂದ್ರನ ಲ್ಯಾಂಡರ್‌ಗಳು, ಬಾಹ್ಯಾಕಾಶ ಸೂಟ್‌ಗಳು ಮತ್ತು ಇತರ ವ್ಯವಸ್ಥೆಗಳಿಗೆ ಬಜೆಟ್ ಸಂಪೂರ್ಣವಾಗಿ ಹಣವನ್ನು ನೀಡುತ್ತದೆ ಎಂದು ಡಾಕ್ಯುಮೆಂಟ್ ಹೇಳುತ್ತದೆ.

ಆರ್ಟೆಮಿಸ್ ಕಾರ್ಯಕ್ರಮವು ನವೆಂಬರ್ 16, 2022 ರಂದು ಆರ್ಟೆಮಿಸ್ 1ರ ಉಡಾವಣೆಯೊಂದಿಗೆ ಪ್ರಾರಂಭವಾಯಿತು ಮತ್ತು ಡಿಸೆಂಬರ್ 12 ರಂದು ಬಾಹ್ಯಾಕಾಶ ಉಡಾವಣಾ ವ್ಯವಸ್ಥೆ (SLS) ರಾಕೆಟ್ ಮತ್ತು ಓರಿಯನ್ ಕ್ಯಾಪ್ಸುಲ್‌ನ ಸಿದ್ಧತೆ ಪರೀಕ್ಷೆಯೊಂದಿಗೆ ಯಶಸ್ವಿಯಾಗಿ ಕೊನೆಗೊಂಡಿತು. ಮಿಷನ್ ತಂಡಗಳು ಈಗ ಕಾರ್ಯಾಚರಣೆಯ ಸಮಯದಲ್ಲಿ ಸಂಗ್ರಹಿಸಿದ ಡೇಟಾವನ್ನು ವಿಶ್ಲೇಷಿಸುತ್ತಿವೆ ಮತ್ತು ಓರಿಯನ್ ನೌಕೆ ಚಂದ್ರನತ್ತ ಸಾಗುತ್ತಿರುವಾಗ ಎದುರಿಸಿದ ಸಮಸ್ಯೆಗಳನ್ನು ಸರಿಪಡಿಸಲಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ಅಬ್ಬಬ್ಬಾ...ಅದೆಷ್ಟು ಉದ್ದನೆಯ ಕೂದಲು ; ಇದು ಗಿನ್ನೆಸ್ ದಾಖಲೆಗೆ ಸೇರ್ಪಡೆ : ಇವರ ಕೂದಲು ವಿಶ್ವದ ಅತಿ ಎತ್ತರದ ಮನುಷ್ಯನಿಗಿಂತಲೂ ಉದ್ದ | ವೀಕ್ಷಿಸಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement