ಭಾರತದಲ್ಲಿ ಮತ್ತೆ ಸಾವಿರದ ಸನಿಹ ಬಂದ ದೈನಂದಿನ ಕೊರೊನಾ ಪ್ರಕರಣಗಳು: 4 ಸಾವು ದಾಖಲು

ನವದೆಹಲಿ: ಸೋಮವಾರ ನವೀಕರಿಸಿದ ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ಒಂದೇ ದಿನದಲ್ಲಿ 918 ಹೊಸ ಕೊರೊನಾ ವೈರಸ್ ಪ್ರಕರಣಗಳು ಏರಿಕೆಯಾಗಿದೆ ಹಾಗೂ ನಾಲ್ಕು ಸಾವುಗಳು ಸಂಭವಿಸಿವೆ. ಹಾಗೂ ದೇಶದ ಸಕ್ರಿಯ ಪ್ರಕರಣಗಳು 6,350 ಕ್ಕೆ ಏರಿದೆ. ನಾಲ್ಕು ಸಾವುಗಳಲ್ಲಿ ಎರಡು ರಾಜಸ್ಥಾನದಿಂದ ವರದಿಯಾಗಿದೆ, ಒಂದು ಕರ್ನಾಟಕದಿಂದ ಮತ್ತು ಒಂದು ಸಾವು ಕೇರಳದಿಂದ ವರದಿಯಾಗಿದೆ.
ದೇಶದ ಕೋವಿಡ್‌-19 ಸಾವಿನ ಸಂಖ್ಯೆ ಒಟ್ಟಾರೆಯಾಗಿ 5,30,806 ಕ್ಕೆ ಏರಿದೆ. ಇಂದು, ಸೋಮವಾರ ಬೆಳಿಗ್ಗೆ 8 ಗಂಟೆಗೆ ನವೀಕರಿಸಿದ ಡೇಟಾದ ಪ್ರಕಾರ, ದೈನಂದಿನ ಧನಾತ್ಮಕತೆಯು ಶೇಕಡಾ 2.08 ರಷ್ಟು ದಾಖಲಾಗಿದ್ದರೆ ವಾರದ ಧನಾತ್ಮಕತೆ ಶೇಕಡಾ 0.86 ಎಂದು ಹೇಳಿದೆ. ಈವರೆಗಿನ ಒಟ್ಟು ಸೋಂಕಿನ ಸಂಖ್ಯೆ 4.46 ಕೋಟಿ (4,46,96,338) ಆಗಿದೆ.

ಸಕ್ರಿಯ ಪ್ರಕರಣಗಳು ಈಗ ಒಟ್ಟು ಪ್ರಕರಣಗಳ 0.01% ಒಳಗೊಂಡಿವೆ, ರಾಷ್ಟ್ರೀಯ ಕೋವಿಡ್‌-19 ಚೇತರಿಕೆ ದರವು 98.8 ಪ್ರತಿಶತದಷ್ಟು ದಾಖಲಾಗಿದೆ ಎಂದು ಆರೋಗ್ಯ ಸಚಿವಾಲಯದ ವೆಬ್‌ಸೈಟ್ ತಿಳಿಸಿದೆ.
ರೋಗದಿಂದ ಚೇತರಿಸಿಕೊಂಡ ಒಟ್ಟು ಸಂಖ್ಯೆ 4,41,59,182 ಕ್ಕೆ ಏರಿದೆ. ಪ್ರಕರಣದ ಸಾವಿನ ಪ್ರಮಾಣವು ಶೇಕಡಾ 1.19 ರಷ್ಟಿದೆ. ಕೋವಿಡ್ ಪತ್ತೆಗಾಗಿ ಇದುವರೆಗೆ ಒಟ್ಟು 92.03 ಕೋಟಿ ಪರೀಕ್ಷೆಗಳನ್ನು ನಡೆಸಲಾಗಿದ್ದು, ಕಳೆದ 24 ಗಂಟೆಗಳಲ್ಲಿ 44,225 ಪರೀಕ್ಷೆಗಳನ್ನು ನಡೆಸಲಾಗಿದೆ.
ಸಚಿವಾಲಯದ ಪ್ರಕಾರ, ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಅಡಿಯಲ್ಲಿ ದೇಶದಲ್ಲಿ ಇದುವರೆಗೆ 220.65 ಕೋಟಿ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ನನ್ನ ಬಳಿ ಹಣವಿಲ್ಲ : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement