5 ಮತ್ತು 8ನೇ ತರಗತಿಗೆ ಬೋರ್ಡ್​ ಪರೀಕ್ಷೆ : ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಮೇಲ್ಮನವಿ, ಅರ್ಜಿ ಆಲಿಸಲು ಸಮ್ಮತಿ

ನವದೆಹಲಿ: ಕರ್ನಾಟಕ ರಾಜ್ಯದ ಬೋರ್ಡ್ ಪಠ್ಯಕ್ರಮ ಅಧ್ಯಯನ ಮಾಡುವ 5 ಮತ್ತು 8 ನೇ ತರಗತಿಯ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆಗಳನ್ನು ನಡೆಸಲು ಸರ್ಕಾರಕ್ಕೆ ಅನುಮತಿ ನೀಡುವ ಕರ್ನಾಟಕ ಹೈಕೋರ್ಟ್ ಆದೇಶದ ಪ್ರಶ್ನಿಸಿ ಸಲ್ಲಿಸಿದ ಅರ್ಜಿಯನ್ನು ಮಾರ್ಚ್ 27 ರಂದು ವಿಚಾರಣೆ ಮಾಡಲು ಒಪ್ಪಿಕೊಂಡಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ಮತ್ತು ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಜೆ.ಬಿ. ಪರ್ದಿವಾಲಾ ಅವರನ್ನೊಳಗೊಂಡ ಪೀಠವು, ಹೈಕೋರ್ಟ್ ಆದೇಶದ ವಿರುದ್ಧ ಅನುದಾನರಹಿತ ಖಾಸಗಿ ಶಾಲೆಗಳ ಸಂಘಗಳು ಸಲ್ಲಿಸಿದ ಮನವಿಯನ್ನು ಮಾರ್ಚ್ 27 ರಂದು ವಿಚಾರಣೆ ಮಾಡಲು ಒಪ್ಪಿಕೊಂಡಿತು ಎಂದು ಲೈವ್‌ ಲಾ ವರದಿ ಮಾಡಿದೆ.
ತುರ್ತು ವಿಚಾರಣೆ ಕೋರಿ ಪೀಠದ ಮುಂದೆ ಈ ವಿಷಯವನ್ನು ಪ್ರಸ್ತಾಪಿಸಲಾಯಿತು. ಹೈಕೋರ್ಟ್ ಆದೇಶದಲ್ಲಿ ನಾವು ಮಧ್ಯ ಪ್ರವೇಶಿಸುವುದಿಲ್ಲ. ಆ ರಾಜ್ಯದಲ್ಲಿ ಯಾವುದು ಉತ್ತಮ ಎಂದು ಹೈಕೋರ್ಟ್‌ಗಳಿಗೆ ತಿಳಿದಿದೆ” ಎಂದು ಹೇಳಿರುವ ಪೀಠವು ಯಾವುದೇ ಅನಿಶ್ಚಿತತೆ ಮೇಲುಗೈ ಸಾಧಿಸಲು ಬಯಸುವುದಿಲ್ಲ ಎಂದು ಹೇಳಿದೆ.
ಅಡ್ವೊಕೇಟ್ ಎ.ವೇಲನ್ ಅವರು ತುರ್ತು ಪಟ್ಟಿಗಾಗಿ ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ಅವರ ಮುಂದೆ ಅರ್ಜಿಯನ್ನು ಪ್ರಸ್ತಾಪಿಸಿದರು. ಮಾರ್ಚ್ 27 ರಂದು ಅರ್ಜಿಯ ವಿಚಾರಣೆ ನಡೆಯಲಿದೆ ಎಂದು ಸಿಜೆಐ ಹೇಳಿದಾಗ, ಮಾರ್ಚ್ 27 ರಿಂದ ಪರೀಕ್ಷೆಗಳು ಪ್ರಾರಂಭವಾಗುತ್ತವೆ ಎಂದು ಹೇಳಿದ ವಕೀಲರು ಅದಕ್ಕೂ ಮೊದಲಿನ ದಿನಾಂಕವನ್ನು ಕೋರಿದರು. ಆದರೆ, ಸಿಜೆಐ ಈ ಮನವಿಯನ್ನು ತಿರಸ್ಕರಿಸಿದರು.

ಪ್ರಮುಖ ಸುದ್ದಿ :-   ಯು ಪಿ ಎಸ್ ಸಿ ಫಲಿತಾಂಶ ಪ್ರಕಟ: ಆದಿತ್ಯ ಶ್ರೀವಾಸ್ತವ ದೇಶಕ್ಕೆ ಟಾಪರ್, ಟಾಪ್‌-20 ರ‍್ಯಾಂಕ್ ಪಡೆದವರ ಪಟ್ಟಿ

ಅದರಲ್ಲಿ ಮಧ್ಯಪ್ರವೇಶ ಮಾಡುವುದು ಬೇಡ… ಆ ರಾಜ್ಯದಲ್ಲಿ ಯಾವುದು ಉತ್ತಮ ಎಂಬುದು ಹೈಕೋರ್ಟ್‌ಗೆ ಗೊತ್ತಿದೆ ಎಂದು ಸಿಜೆಐ ಡಿವೈ ಚಂದ್ರಚೂಡ್ ವಕೀಲರಿಗೆ ತಿಳಿಸಿದರು.
“ನಾವು ಸುಮಾರು 4000 ಶಾಲೆಗಳನ್ನು ಪ್ರತಿನಿಧಿಸುತ್ತಿದ್ದೇವೆ. ಹೈಕೋರ್ಟ್‌ನ ಏಕ ನ್ಯಾಯಾಧೀಶರು ಆದೇಶದ ಮೂಲಕ ಸರ್ಕಾರದ ಸುತ್ತೋಲೆಗಳನ್ನು ರದ್ದುಗೊಳಿಸಿದ್ದಾರೆ” ಎಂದು ವಕೀಲರು ತಿಳಿಸಿದರು.
ಅದು ಪರವಾಗಿಲ್ಲ. 27 ರಂದು ಅರ್ಹತೆಯ ಬಗ್ಗೆ ನಾವು ನಿಮ್ಮನ್ನು ಕೇಳುತ್ತೇವೆ. ಅನಿಶ್ಚಿತತೆ ಬೇಡ. 27ರಂದು ನಿಮ್ಮ ವಿಚಾರಣೆ ನಡೆಸುತ್ತೇವೆ’’ ಎಂದು ಸಿಜೆಐ ವಕೀಲರಿಗೆ ತಿಳಿಸಿದರು. ವಕೀಲರು ಮತ್ತೊಮ್ಮೆ ಮನವೊಲಿಸಿದರೂ, ಮಾರ್ಚ್ 27ರಂದು ಮಾತ್ರ ಪ್ರಕರಣ ಪಟ್ಟಿ ಮಾಡಲಾಗುವುದು ಎಂದು ಸಿಜೆಐ ತಿಳಿಸಿದರು.
ಮಾರ್ಚ್ 15 ರಂದು ಹೈಕೋರ್ಟ್ ವಿಭಾಗೀಯ ಪೀಠವು ಏಕ ಪೀಠದ ಆದೇಶಕ್ಕೆ ತಡೆಯಾಜ್ಞೆ ನೀಡಿತ್ತು, ಹೈಕೋರ್ಟ್‌ ಏಕ ಸದಸ್ಯ ಪೀಠವು ಡಿಸೆಂಬರ್ 12 ಮತ್ತು ಡಿಸೆಂಬರ್ 13, 2022 ಮತ್ತು ಜನವರಿ 4, 2023 ರ ಸುತ್ತೋಲೆಗಳನ್ನು ರದ್ದುಗೊಳಿಸಿತ್ತು. ನಂತರ ಸರ್ಕಾರ ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿತ್ತು. ಮಾರ್ಚ್ 15 ರಂದು ಹೈಕೋರ್ಟ್ ವಿಭಾಗೀಯ ಪೀಠವು ಏಕ ಪೀಠದ ಆದೇಶಕ್ಕೆ ತಡೆಯಾಜ್ಞೆ ನೀಡಿತ್ತು

ಪ್ರಮುಖ ಸುದ್ದಿ :-   ಪ್ರಮುಖ ಮಾವೋವಾದಿ ನಾಯಕ ಸೇರಿ 29 ಮಂದಿ ಮಾವೋವಾದಿಗಳನ್ನು ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಿದ ಭದ್ರತಾ ಪಡೆಗಳು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement