ಮರ್ಸಿಡಿಸ್‌ ಬೆಂಜ್‌ನಿಂದ ಹಿಡಿದು ಮಾರುತಿ ಬ್ರೆಝಾದಿಂದ ಮೋಟಾರ್‌ ಸೈಕಲ್‌ ವರೆಗೆ: ಅಮೃತಪಾಲ್ ಸಿಂಗ್ ಪೊಲೀಸರಿಂದ ತಪ್ಪಿಸಿಕೊಂಡಿದ್ದು ಹೇಗೆ…?

ನವದೆಹಲಿ: ಪರಾರಿಯಾಗಿರುವ ಸ್ವಯಂ ಘೋಷಿತ ಖಾಲಿಸ್ತಾನಿ ನಾಯಕ ಅಮೃತಪಾಲ್ ಸಿಂಗ್ ಕಳೆದ ವಾರ ಪೊಲೀಸರು ಬೆನ್ನಟ್ಟುತ್ತಿದ್ದಾಗ ವಾಹನಗಳನ್ನು ಹಾಗೂ, ಬಟ್ಟೆ ಬದಲಾಯಿಸಿಕೊಂಡು ಬೈಕ್‌ನಲ್ಲಿ ತನ್ನ ಸಹಾಯಕರೊಂದಿಗೆ ಪರಾರಿಯಾಗಿದ್ದಾನೆ ಎಂದು ಪಂಜಾಬ್ ಪೊಲೀಸರು ತಿಳಿಸಿದ್ದಾರೆ.
ಪಂಜಾಬಿನಲ್ಲಿ ನಾಲ್ಕು ದಿನಗಳಿಂದ ಪೊಲೀಸರಿಂದ ತಲೆತಪ್ಪಿಸಿಕೊಂಡು ಅಡ್ಡಾಡುತ್ತಿರುವ ಅಮೃತಪಾಲ್ ಸಿಂಗ್ ತಪ್ಪಿಸಿಕೊಳ್ಳುವಾಗ ವಿವಿಧ ಹಂತಗಳಲ್ಲಿ ಭದ್ರತಾ ಕ್ಯಾಮರಾಕ್ಕೆ ಸೆರೆ ಸಿಕ್ಕಿದ್ದಾನೆ,
ವೀಡಿಯೊ ತುಣುಕಿನಲ್ಲಿ ಅಮೃತಪಾಲ್ ಸಿಂಗ್ ಕಾರಿನಿಂದ ನಿರ್ಗಮಿಸುತ್ತಿರುವುದು ಹಾಗೂ ನಂತರ ಕಾರು ತೊರೆದು ಬೈಕ್‌ನಲ್ಲಿ ಪರಾರಿಯಾಗುತ್ತಿರುವುದು ಕಂಡುಬಂದಿದೆ.
ಪೊಲೀಸರ ಪ್ರಕಾರ, ಮಾರ್ಚ್ 18 ರಂದು ಜಲಂಧರ್‌ನಲ್ಲಿ ಅಮೃತಪಾಲ್ ಸಿಂಗ್ ಮತ್ತು ಆತನ ಸಹಚರರನ್ನು ಪೊಲೀಸರು ಬೆನ್ನಟ್ಟುತ್ತಿದ್ದಾಗ ಮರ್ಸಿಡಿಸ್‌ನಲ್ಲಿದ್ದ. ನಂತರ ಮರ್ಸಿಡಿಸ್‌ನಿಂದ ಕೆಳಗಿಳಿದು ಬ್ರೆಜ್ಜಾದಲ್ಲಿ ಶಾಕೋಟ್‌ಗೆ ಓಡಿಹೋದ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ, ವಾರಿಸ್ ಪಂಜಾಬ್ ಡಿ ಮುಖ್ಯಸ್ಥನು ಗುರುದ್ವಾರದೊಳಗೆ ತನ್ನ ಬಟ್ಟೆಗಳನ್ನು ಬದಲಾಯಿಸಿಕೊಂಡು ತನ್ನ ಸಹಚರನ ಮೋಟಾರ್ ಬೈಕ್‌ನಲ್ಲಿ ಪರಾರಿಯಾಗಿದ್ದಾನೆ ಎಂದು ತಿಳಿಸಿದ್ದಾರೆ.

30 ವರ್ಷದ ಸ್ವಯಂ ಘೋಷಿತ ಖಾಲಿಸ್ತಾನಿ ನಾಯಕ ಶನಿವಾರ ಬೆಳಿಗ್ಗೆ 11:27 ರ ಸುಮಾರಿಗೆ ಜಲಂಧರ್‌ನ ಟೋಲ್ ಬೂತ್‌ನ ಕ್ಲಿಪ್‌ನಲ್ಲಿ ಮಾರುತಿ ಬ್ರೆಜ್ಜಾ ಕಾರಿನ ಮುಂಭಾಗದ ಸೀಟಿನಲ್ಲಿರುವುದು ಕಂಡುಬಂದಿದೆ.ಆತ ಕಾರಿನಲ್ಲಿ ತನ್ನ ಬಟ್ಟೆಗಳನ್ನು ಬದಲಾಯಿಸಿರುವುದು ಕಂಡುಬರುತ್ತದೆ. ತನ್ನ ಧಾರ್ಮಿಕ ಬಟ್ಟೆಗಳನ್ನು ತೆಗೆದುಹಾಕಿ ಶರ್ಟ್ ಮತ್ತು ಪ್ಯಾಂಟ್‌ ಧರಿಸಿ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ.
ಮತ್ತೊಂದು ಕ್ಲಿಪ್ ಆತ ಕಾರನ್ನು ಬಿಟ್ಟು ಎರಡು ಬೈಕ್‌ಗಳಲ್ಲಿ ಮೂವರು ಸಹಾಯಕರೊಂದಿಗೆ ಹೊರಹೋಗುವುದನ್ನು ತೋರಿಸುತ್ತದೆ.
ಆತ ಗುರುದ್ವಾರದಲ್ಲಿ ಅಡಗಿಕೊಂಡು ಪುನಃ ಬಟ್ಟೆ ಬದಲಿಸಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ನಂಬಿದ್ದಾರೆ.

ಪೊಲೀಸರು ಅಮೃತಪಾಲ್ ಸಿಂಗ್ ಯಾವ್ಯಾವ ರೀತಿ ಕಾಣಬಹುದೆಂಬುದರ ಕುರಿತು ಗ್ರಾಫಿಕ್‌ ಚಿತ್ರವನ್ನು ಸಹ ಬಿಡುಗಡೆ ಮಾಡಿದ್ದಾರೆ. ಬ್ರೆಝಾ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಅಮೃತಪಾಲ್ ಸಿಂಗ್ ಓಡಿಹೋಗಲು ಸಹಾಯ ಮಾಡಿದ ನಾಲ್ವರನ್ನು ಬಂಧಿಸಲಾಗಿದೆ.
ಶನಿವಾರದಿಂದ ಈವರೆಗೆ ಅಮೃತಪಾಲ್ ಸಿಂಗ್ ಚಿಕ್ಕಪ್ಪ ಸೇರಿದಂತೆ 120 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಆತನ ಸಂಘಟನೆಯ “ವಾರಿಸ್ ಪಂಜಾಬ್ ದೇ” ನ ಹಲವಾರು ಸದಸ್ಯರನ್ನು ಕಟ್ಟುನಿಟ್ಟಾದ ರಾಷ್ಟ್ರೀಯ ಭದ್ರತಾ ಕಾಯಿದೆ (NSA) ಅಡಿಯಲ್ಲಿ ಬಂಧಿಸಲಾಗಿದೆ ಮತ್ತು ಬಿಜೆಪಿ ಆಡಳಿತವಿರುವ ಅಸ್ಸಾಂನಲ್ಲಿ ಇರಿಸಲಾಗಿದೆ.

ಪಂಜಾಬ್‌ನ ಅನೇಕ ಪ್ರದೇಶಗಳಲ್ಲಿ ಮೂರು ದಿನಗಳ ಕಾಲ ಇಂಟರ್ನೆಟ್ ಸ್ಥಗಿತಗೊಳಿಸಲಾಗಿತ್ತು ಆದರೆ ಇಂದು, ಮಂಗಳವಾರ ಅನೇಕ ಭಾಗಗಳಲ್ಲಿ ಮರುಸ್ಥಾಪಿಸಲಾಗಿದೆ.
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಪಂಜಾಬ್ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿತು ಮತ್ತು ಅಮೃತಪಾಲ್ ಸಿಂಗ್ ಪದೇ ಪದೇ ಪೊಲೀಸರಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂದು ಪ್ರಶ್ನಿಸಿದೆ.
ನಿಮ್ಮಲ್ಲಿ 80,000 ಪೊಲೀಸರಿದ್ದಾರೆ. ಅವರು ಏನು ಮಾಡುತ್ತಿದ್ದರು. ಅಮೃತಪಾಲ್ ಸಿಂಗ್ ಹೇಗೆ ತಪ್ಪಿಸಿಕೊಂಡರು?” ಇದು ಗುಪ್ತಚರ ವೈಫಲ್ಯ ಎಂದು ಪಂಜಾಬ್ ಸರ್ಕಾರವನ್ನು ಹೈಕೋರ್ಟ್ ಪ್ರಶ್ನಿಸಿತು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement