ಸ್ವಯಂ ಘೋಷಿತ ಖಾಲಿಸ್ತಾನಿ ನಾಯಕ ಅಮೃತಪಾಲ್ ಸಿಂಗ್ ಪರಾರಿಯಾಗುವ ಮೊದಲು ಗುರುದ್ವಾರಕ್ಕೆ ನುಗ್ಗಿ ಬಂದೂಕು ತೋರಿಸಿ ಆಹಾರ-ಬಟ್ಟೆಗೆ ಬೇಡಿಕೆಯಿಟ್ಟಿದ್ದ : ವರದಿ

ನವದೆಹಲಿ: ಪರಾರಿಯಾದ ಸ್ವಯಂ ಘೋಷಿತ ಖಾಲಿಸ್ತಾನಿ ನಾಯಕ ಅಮೃತಪಾಲ್ ಸಿಂಗ್ ಮಾರ್ಚ್ 18 ರಂದು ಪರಾರಿಯಾದ ನಂತರ ಜಲಂಧರ್ ಬಳಿಯ ಗುರುದ್ವಾರದಲ್ಲಿ ಆಹಾರ ಮತ್ತು ಬಟ್ಟೆಗಳನ್ನು ನೀಡುವಂತೆ ಅಲ್ಲಿದ್ದ ಜನರಿಗೆ ಬೆದರಿಕೆ ಹಾಕಿದ್ದ ಎಂದು ವರದಿಯಾಗಿದೆ. ಅಮೃತಪಾಲ್ ಸಿಂಗ್ ನನ್ನು ಬಂಧಿಸಲು ಪಂಜಾಬ್ ಪೊಲೀಸರು ನಡೆಸಿದ ಬೃಹತ್ ಶೋಧ ಕಾರ್ಯಾಚರಣೆಯು ಬುಧವಾರ ಐದನೇ ದಿನಕ್ಕೆ ಕಾಲಿಟ್ಟಿದೆ.
ವಾರಿಸ್ ಪಂಜಾಬ್‌ ದೇ ಸ್ವಯಂ-ಘೋಷಿತ ಮುಖ್ಯಸ್ಥ ಅಮೃತಪಾಲ್ ಸಿಂಗ್ ಶನಿವಾರ (ಮಾರ್ಚ್ 18) ಜಲಂಧರ್ ಜಿಲ್ಲೆಯ ಮೂಲಕ ಪೊಲೀಸರಿಗೆ ಸ್ಲಿಪ್ ನೀಡಿ ಪರಾರಿಯಾಗಿದ್ದಾನೆ. ಆತ ತನ್ನ ಸಹಾಯಕರೊಂದಿಗೆ ಜಲಂಧರ್‌ನಲ್ಲಿರುವ ಗುರುದ್ವಾರಕ್ಕೆ ಭೇಟಿ ನೀಡಿದ ಮತ್ತು ಸುಮಾರು ಒಂದು ಗಂಟೆ ಅಲ್ಲಿಯೇ ಇದ್ದನು. ಆತ ತನ್ನ ಸಿಖ್ ನಿಲುವಂಗಿಯನ್ನು ತೆಗೆದು ಅಂಗಿ, ಪ್ಯಾಂಟ್ ಧರಿಸಿದ್ದಾನೆ ಮತ್ತು ಗುರುದ್ವಾರ ಗ್ರಂಥಿಯ ಮಗನಿಗೆ ಸೇರಿದ ಗುಲಾಬಿ ಪೇಟ ಕಟ್ಟಿಕೊಂಡು ಪರಾರಿಯಾಗಿದ್ದಾನೆ.
ಹರಿಯಾಣದ ರೇವಾರಿಯಲ್ಲಿ ವ್ಯಕ್ತಿಯೊಬ್ಬರಿಗೆ ಕರೆ ಮಾಡಲು ಅಮೃತಪಾಲ್ ಜಲಂಧರ್ ಮೂಲದ ಗ್ರಂಥಿಯ (ಸಿಖ್ ಬೋಧಕ) ಫೋನ್ ಬಳಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇತರ ಬೆಂಬಲಿಗರಿಗೂ ಕರೆ ಮಾಡಿ ಎರಡು ದ್ವಿಚಕ್ರವಾಹನ ತರುವಂತೆ ಹೇಳಿದ್ದಾನೆ.
ಗ್ರಂಥಿಯ ಮಗ ಮದುವೆಯಾಗುತ್ತಿದ್ದ ಮತ್ತು ಅಮೃತಪಾಲ್ ಸಿಂಗ್ ಗುರುದ್ವಾರ ಪ್ರವೇಶಿಸಿದಾಗ ಕುಟುಂಬವು ತಮ್ಮ ಅತಿಥಿಗಳನ್ನು ನಿರೀಕ್ಷಿಸುತ್ತಿತ್ತು. ಆ ಸಮಯದಲ್ಲಿ ಅವರು ಅಮೃತಪಾಲ್ ಮತ್ತು ಆತನ ಸಹಾಯಕರನ್ನು ತಮ್ಮ ಅತಿಥಿಗಳೆಂದು ತಪ್ಪಾಗಿ ಭಾವಿಸಿ ಅವರಿಗೆ ಗುರುದ್ವಾರ ಪ್ರವೇಶಿಸಲು ಅವಕಾಶಕೊಟ್ಟರು. ನಂತರ ಗ್ರಂಥಿ ಕುಟುಂಬ ಸದಸ್ಯರಿಗೆ ಅಮೃತಪಾಲ್ ಮತ್ತು ಆತನ ಸಹಚರರು ಬಂದೂಕು ತೋರಿಸಿ ಬೆದರಿಕೆ ಹಾಕಿದ್ದಾರೆ ಎಂದು ವರದಿಯಾಗಿದೆ ಎಂದು ಇಂಡಿಯಾ ಟುಡೇ.ಇನ್‌ ವರದಿ ಮಾಡಿದೆ.
ಅಮೃತಪಾಲ್ ತನ್ನ ಸಹಾಯಕರನ್ನು ಕರೆಯಲು ಬಳಸುತ್ತಿದ್ದ ಮೊಬೈಲ್ ಫೋನ್ ಅನ್ನು ಅವನು ಬೈಕ್‌ನಲ್ಲಿ ಪರಾರಿಯಾಗುವ ಮೊದಲು ಎಸೆದಿದ್ದಾನೆ.

ಪ್ರಮುಖ ಸುದ್ದಿ :-   ವೀಡಿಯೊ..| ರಾಷ್ಟ್ರದ ಸಂಪತ್ತಿನಲ್ಲಿ ಮುಸ್ಲಿಮರಿಗೆ ಮೊದಲ ಆದ್ಯತೆ ; ಮನಮೋಹನ ಸಿಂಗ್ ಹಳೆಯ ವೀಡಿಯೊ ಮೂಲಕ ಕಾಂಗ್ರೆಸ್ಸಿಗೆ ತಿರುಗೇಟು ನೀಡಿದ ಬಿಜೆಪಿ

ಪರಾರಿಯಾದ ಅಮೃತಪಾಲ್ ಸಿಂಗ್ ಮೋಟಾರು ಸೈಕಲ್‌ನಲ್ಲಿ ಪರಾರಿಯಾಗುವ ಮೊದಲು ತನ್ನ ಸಹಾಯಕರಿಗೆ ಕರೆ ಮಾಡಲು ಬಳಸಿದ್ದ ಸಿಖ್ ಗ್ರಂಥಿಯ ಫೋನ್ ಅನ್ನು ಪೊಲೀಸರು ಸ್ಕ್ಯಾನ್ ಮಾಡುತ್ತಿದ್ದಾರೆ. ಅಮೃತಪಾಲ್ ಮತ್ತು ಆತನ ಸಹಾಯಕರು ಗುರುದ್ವಾರದಿಂದ 100 ಮೀಟರ್ ದೂರದಲ್ಲಿ ಬ್ರೆಜ್ಜಾ ಕಾರನ್ನು ನಿಲ್ಲಿಸಿದ್ದರು, ಅಲ್ಲಿಂದ ಪೊಲೀಸರು ರೈಫಲ್ ಮತ್ತು ಕೆಲವು ಕತ್ತಿಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಗ್ರಂಥಿ ಪೊಲೀಸರಿಗೆ ತಿಳಿಸಿದ್ದಾರೆ.
ಏತನ್ಮಧ್ಯೆ, ಪೊಲೀಸರು ಅಮೃತಪಾಲ್ ಮತ್ತು ಆತನ ನಾಲ್ವರು ಸಹಚರರ ವಿರುದ್ಧ ಶಾಹಕೋಟ್ ಪೊಲೀಸ್ ಠಾಣೆಯಲ್ಲಿ ಹೊಸ ಎಫ್‌ಐಆರ್ ದಾಖಲಿಸಿದ್ದಾರೆ.
ಅಮೃತಪಾಲ್ ವಿರುದ್ಧ ಲುಕ್ ಔಟ್ ಸುತ್ತೋಲೆ
ಅಮೃತಪಾಲ್ ಸಿಂಗ್ ವಿರುದ್ಧ ಪಂಜಾಬ್ ಪೊಲೀಸರು ಲುಕ್ ಔಟ್ ಸುತ್ತೋಲೆ ಹೊರಡಿಸಿದ್ದಾರೆ. ವಿಮಾನ ನಿಲ್ದಾಣಗಳಲ್ಲೂ ಎಚ್ಚರಿಕೆ ನೀಡಲಾಗಿದೆ. ಜಾಮೀನು ರಹಿತ ವಾರಂಟ್‌ಗಳನ್ನು ಹೊರಡಿಸುವುದರ ಜೊತೆಗೆ ಅವರ ವಿರುದ್ಧ ಎನ್‌ಎಸ್‌ಎ ಅರ್ಜಿ ಸಲ್ಲಿಸಲಾಗಿದೆ.
ಪೊಲೀಸರು ಇದುವರೆಗೆ ಅಮೃತಪಾಲನ 154 ಬೆಂಬಲಿಗರನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಮಂಗಳವಾರ ಪೊಲೀಸರು ಪೇಟ ಮತ್ತು ಗಡ್ಡವಿರುವ ಅಥವಾ ಇಲ್ಲದ ಅಮೃತಪಾಲ್ ಛಾಯಾಚಿತ್ರಗಳನ್ನು ಪೊಲೀಸರು ನಿನ್ನೆ ಬಿಡುಗಡೆ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ರಾಯಬರೇಲಿಯಿಂದ ಅಕ್ಕನ ವಿರುದ್ಧ ಸ್ಪರ್ಧಿಸಲು ಬಿಜೆಪಿ ನೀಡಿದ್ದ ಆಫರ್‌ ತಿರಸ್ಕರಿಸಿದರೇ ವರುಣ್‌ ಗಾಂಧಿ..?

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement