ಕ್ರಿಸ್ಟಿಯಾನೋ ರೊನಾಲ್ಡೊ ಫುಟ್ಬಾಲ್ ದಂತಕಥೆ ಮಾತ್ರವಲ್ಲ, ತನ್ನ ದಾಖಲೆಗಳು, ಟೈಟಲ್‌ಗಳು ಮತ್ತು ಗೋಲ್ ಗಳಿಸಿದ ನಂತರ ವಿಶಿಷ್ಟವಾಗಿ ಸಂಭ್ರಮ ಪಡುವುದಕ್ಕೂ ಯುವ ಪೀಳಿಗೆಗೆ ಸ್ಫೂರ್ತಿ ನೀಡುವ ಫುಟ್‌ಬಾಲ್ ತಾರೆ. 2013 ರಲ್ಲಿ ಸೌಹಾರ್ದ ಪಂದ್ಯದಲ್ಲಿ ಚೆಲ್ಸಿಯಾ ವಿರುದ್ಧ ಫ್ರೀ-ಕಿಕ್ ಗಳಿಸಿದ ನಂತರ ರೊನಾಲ್ಡೊ ಅವರ ಪ್ರಸಿದ್ಧ ‘ಸಿಯುಯು’ ಸಂಭ್ರಮಾಚರಣೆಯು ಪ್ರಪಂಚದಾದ್ಯಂತದ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡಿದೆ. ಫುಟ್ಬಾಲ್ ಆಟಗಾರರಿಂದ ಹಿಡಿದು ಕ್ರಿಕೆಟಿಗರು, ಹಲವಾರು ಅಥ್ಲೀಟ್‌ಗಳು ಗೋಲು ಗಳಿಸಿದ ನಂತರ ಅಥವಾ ವಿಕೆಟ್ ಪಡೆದ ನಂತರ ಕ್ರಿಸ್ಟಿಯಾನೋ ರೊನಾಲ್ಡೊ ರೀತಿಯಲ್ಲಿ ಸಿಯುಯು ಸಂಭ್ರಮಾಚರಣೆ ಮಾಡಲು ಪ್ರಯತ್ನಿಸಿದ್ದಾನೆ. ಆದಾಗ್ಯೂ, ಒಂದು ಅಪರೂಪದ ಆದರೆ ವಿಲಕ್ಷಣವಾದ ಘಟನೆಯಲ್ಲಿ ವಿಯೆಟ್ನಾಂ ಫುಟ್‌ಬಾಲ್ ಆಟಗಾರನೊಬ್ಬ ರೊನಾಲ್ಡೊ ಅವರ ‘ಸಿಯುಯು’ ಸಂಭ್ರಮಾಚರಣೆ ಪುನರಾವರ್ತಿಸಲು ಮಾಡಿದ ಪ್ರಯತ್ನವು ತಪ್ಪಾಗಿ ಈಗ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ.
ಒಂದು ಗೋಲು ಗಳಿಸಿದ ನಂತರ, ವಿಯೆಟೆಲ್ FC ನ ಟ್ರಾನ್ ಹಾಂಗ್ ಕೀನ್ ಬೈಲೈನ್ ಕಡೆಗೆ ಓಡಿ ರೊನಾಲ್ಡೊ ಅವರನ್ನು ಅನುಕರಿಸಲು ನಿರ್ಧರಿಸಿದ, ಆದರೆ ಹಾಗೆ ಮಾಡಲು ಹೋಗಿ ಗಾಯಗೊಂಡ ನಂತರ ಆಸ್ಪತ್ರೆಗೆ ದಾಖಲಾದ.
ಗೋಲ್ ಗಳಿಸಿದ ನಂತರ ಟ್ರಾನ್ ಹಾಂಗ್ ಕಿಯೆನ್ ವಿಚಿತ್ರವಾಗಿ ಸಭ್ರಮಿಸಿದ, ಅದು ಆತನ ಎಡ ಮೊಣಕಾಲುಗಳಲ್ಲಿ ಅಸ್ಥಿರಜ್ಜು ಹರಿಯಲು ಕಾರಣವಾಯಿತು.
ಮೈದಾನದಲ್ಲಿ ಚಿಕಿತ್ಸೆ ಪಡೆದ ನಂತರವೂ ಟ್ರಾನ್ ಹಾಂಗ್ ಕೀನ್ ಮತ್ತೊಮ್ಮೆ ಕುಂಟಲು ಪ್ರಾರಂಭಿಸಿದನು ಮತ್ತು ಅಂತಿಮವಾಗಿ ಸ್ಟ್ರೆಚರ್‌ನಲ್ಲಿ ಆತನನ್ನು ಮೈದಾನದಿಂದ ಕರೆದೊಯ್ಯಲಾಯಿತು.
ಈಗ ಅಲ್-ನಾಸ್ರ್ ಪರ ಸೌದಿ ಅರೇಬಿಯಾದಲ್ಲಿ ಆಡುತ್ತಿರುವ ರೊನಾಲ್ಡೊ, ಫುಟ್ಬಾಲ್ ಜಗತ್ತಿನಲ್ಲಿ ಈಗಲೂ ಜನಪ್ರಿಯ ವ್ಯಕ್ತಿ. ಏತನ್ಮಧ್ಯೆ, ರೊನಾಲ್ಡೊ ಪ್ರಸ್ತುತ UEFA ಯುರೋ 2024 ಅರ್ಹತಾ ಪಂದ್ಯಗಳಿಗಾಗಿ ರಾಷ್ಟ್ರೀಯ ತಂಡದಲ್ಲಿದ್ದಾರೆ. ಲಿಚ್ಟೆನ್‌ಸ್ಟೈನ್ ವಿರುದ್ಧದ ತಂಡದ ಆರಂಭಿಕ ಪಂದ್ಯದಲ್ಲಿ ಅವರು ಉತ್ತಮ ಫಾರ್ಮ್‌ನಲ್ಲಿ ಕಾಣಿಸಿಕೊಂಡರು. ಅವರ ಮೊದಲ ಗೋಲು ಸ್ಪಾಟ್ ಕಿಕ್ ಆಗಿದ್ದು, ಅದನ್ನು ಪರಿವರ್ತಿಸುವಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ, ನಂತರ ಅವರು ಫ್ರೀ ಕಿಕ್ ಅನ್ನು ಗಳಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ