ಜಮ್ಮು-ಕಾಶ್ಮೀರದಲ್ಲಿ ನಿರ್ಮಾಣವಾದ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ಈಗ ಉದ್ಘಾಟನೆಗೆ ಸಜ್ಜು: ಇದರ ವಿಶೇಷತೆ ಬಗ್ಗೆ ಗೊತ್ತಾ..?

ಶ್ರೀನಗರ: ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ಕಾರ್ಯಾರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಬಹುನಿರೀಕ್ಷಿತ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯು ಚೆನಾಬ್‌ ನದಿಯ ಮೇಲೆ 359 ಮೀ (1,178 ಅಡಿ) ಎತ್ತರದಲ್ಲಿ ನಿರ್ಮಾಣವಾಗಿದೆ. ಸುಮಾರು 1.3 ಕಿಲೋ ಮೀಟರ್ ಉದ್ದದ ಸೇತುವೆ ನಿರ್ಮಾಣ ಭಾರತೀಯ ಎಂಜಿನಿಯರುಗಳ ತಂತ್ರಜ್ಞಾನಕ್ಕೆ ಸಾಕ್ಷಿಯಾಗಿದೆ.
ಜಮ್ಮು-ಕಾಶ್ಮೀರದ ಚೆನಾಬ್ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಈ ರೈಲ್ವೆ ಮೇಲ್ಸೇತುವೆ ಸಲಾಲ್ ಎ ಮತ್ತು ದುಗ್ಗಾ ರೈಲ್ವೇ ನಿಲ್ದಾಣಗಳನ್ನು ಪರಸ್ಪರ ಸಂಪರ್ಕಿಸುತ್ತದೆ. ಈಗಾಗಲೇ ಈ ಯೋಜನೆಯ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ರೈಲ್ವೆ ಸಂಚಾರ ಆರಂಭವಾದ ನಂತರ ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜಮ್ಮು ಕಾಶ್ಮೀರದ ಶ್ರೀನಗರವನ್ನು ಈ ರೈಲ್ವೇ ಮೇಲ್ಸೇತುವೆ ಮೂಲಕ ದೇಶದ ಇತರ ಭಾಗದೊಂದಿಗೆ ಸಂಪರ್ಕಿಸಬಹುದಾಗಿದೆ.
ಇದು ಫ್ರಾನ್ಸ್‌ನ ಪ್ರಸಿದ್ಧ ಐಫೆಲ್ ಟವರ್‌ಗಿಂತ 35 ಮೀ ಎತ್ತರದಲ್ಲಿ ನಿಂತಿದೆ. ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಬಕ್ಕಲ್ ಮತ್ತು ಕೌರಿ ನಡುವಿನ ಕಮಾನು ಸೇತುವೆಯು ನದಿಯ ತಳದಿಂದ 1,178 ಅಡಿ ಎತ್ತರದಲ್ಲಿದೆ, ಹಾಗೂ ₹ 35000 ಕೋಟಿ ಮೌಲ್ಯದ ಕನಸಿನ ಯೋಜನೆಯಾಗಿದೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ : 1ನೇ ಹಂತದಲ್ಲಿ 62.37%ರಷ್ಟು ಮತದಾನ ; 2019ರ ಮತದಾನದ ಪ್ರಮಾಣಕ್ಕಿಂತ ಕಡಿಮೆ

ಉದಮಪುರ-ಶ್ರೀನಗರ- ಬಾರಮುಲ್ಲಾ ರೈಲ್ವೇ ಯೋಜನೆಯ ಭಾಗವಾಗಿ ಈ ರೈಲ್ವೇ ಮೇಲ್ಸೇತುವೆ ನಿರ್ಮಾಣ ಮಾಡಲಾಗಿದ್ದು, ಜಮ್ಮುವಿನ ಕಟ್ರಾ-ಬನಾಲ್ ನಡುವಿನ 111 ಕಿಲೋಮೀಟರ್ ಉದ್ದದ ರೈಲ್ವೇ ಸೆಕ್ಷನ್ ಯೋಜನೆ ಪೂರ್ಣಗೊಳಿಸಲು ಈ ರೈಲ್ವೇ ಮೇಲ್ಸೇತುವೆ ಪ್ರಮುಖ ಸಂಪರ್ಕ ಸಾಧನವಾಗಿದೆ. ವಿಶೇಷವೆಂದರೆ ಸುಮಾರು 111ಕಿಲೋಮೀಟರ್ ಉದ್ದದ ಮಾರ್ಗದಲ್ಲಿ 97 ಕಿಲೋಮೀಟರ್ ಸುರಂಗ ನಿರ್ಮಿಸಲಾಗಿದೆ.
ಈ ರೈಲ್ವೇ ಮೇಲ್ಸೇತುವೆಯು ಗಂಟೆಗೆ 266 ಕಿಲೋಮೀಟರ್ ವೇಗದ ಬಿರುಗಾಳಿಯನ್ನು ತಡೆದುಕೊಳ್ಳುವ ಸಾಮರ್ಥ್ಯದೊಂದಿಗೆ ನಿರ್ಮಾಣ ಮಾಡಲಾಗಿದೆ. ಇದಕ್ಕೆ 17 ಪಿಲ್ಲರುಗಳನ್ನು ನಿರ್ಮಿಸಲಾಗಿದೆ. 28,660 ಮೆಟ್ರಿಕ್ ಟನ್ ಸ್ಟೀಲ್ ಬಳಸಲಾಗಿದೆ. ಈ ಬ್ರಿಡ್ಜ್ 120 ವರ್ಷ ಬಾಳಿಕೆ ಬರುವ ಖಾತ್ರಿ ನೀಡಲಾಗಿದೆ.

ಚೆನಾಬ್ ರೈಲ್ವೆ ಸೇತುವೆಯ ಎಲ್ಲಾ ಪರೀಕ್ಷೆಗಳನ್ನು ನಡೆಸಲಾಗಿದೆ ಮತ್ತು ಯಶಸ್ವಿಯಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ವಿಶ್ವದ ಅತಿ ಎತ್ತರದ ಸೇತುವೆಯ ಸ್ಥಿರತೆ ಮತ್ತು ಸುರಕ್ಷತೆಯನ್ನು ಪರೀಕ್ಷಿಸಲು ನಡೆಸಲಾದ ಪರೀಕ್ಷೆಗಳಲ್ಲಿ ಹೆಚ್ಚಿನ ವೇಗದ ಗಾಳಿ ಪರೀಕ್ಷೆ, ತೀವ್ರ ತಾಪಮಾನದ ಪರೀಕ್ಷೆ, ಭೂಕಂಪ ಪೀಡಿತ ಪರೀಕ್ಷೆ ಮತ್ತು ನೀರಿನ ಮಟ್ಟ ಹೆಚ್ಚಳದಿಂದ ಆಗುವ ಜಲವಿಜ್ಞಾನದ ಪರಿಣಾಮಗಳು ಸೇರಿವೆ ಎಂದು ಹೇಳಿದ್ದಾರೆ.
ಈ ಸೇತುವೆ ಮೇಲೆ ತಾಸಿಗೆ 100 ಕಿಲೋಮೀಟರ್ ವೇಗದಲ್ಲಿ ರೈಲುಗಳು ಸಂಚರಿಸಬಹುದು. ಜೆನಾಬ್ ಸೇತುವೆಯ ಜೊತೆಗೆ, ಜಮ್ಮು ಮತ್ತು ಕಾಶ್ಮೀರದ ಪ್ರತಿಕೂಲ ಭೂಪ್ರದೇಶದಲ್ಲಿ ಆಫ್ಕಾನ್ಸ್ 16 ಇತರ ರೈಲ್ವೆ ಸೇತುವೆಗಳನ್ನು ನಿರ್ಮಿಸುತ್ತಿದೆ. ಎಲ್ಲಾ ಸೇತುವೆಗಳು ಉಧಂಪುರ್ ಶ್ರೀನಗರ ಬಾರಾಮುಲ್ಲಾ ರೈಲ್ ಲಿಂಕ್ ಯೋಜನೆಯ ಭಾಗವಾಗಿರುವುದೇ ವಿಶೇಷ.

ಪ್ರಮುಖ ಸುದ್ದಿ :-   ಕಾರು ಅಡ್ಡ ಹಾಕಿ ನಟಿ ಹರ್ಷಿಕಾ ಪೂಣಚ್ಚ ದಂಪತಿಗೆ ಕಿರುಕುಳ : "ನಾವು ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನದಲ್ಲಿದ್ದೇವೆಯೇ ಎಂದು ನಟಿ ಪ್ರಶ್ನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement