ನಮೀಬಿಯಾದಿಂದ ತಂದಿದ್ದ ಒಂದು ಚೀತಾ ಸಾವು

ಭೋಪಾಲ್‌: ನಮೀಬಿಯಾದಿಂದ (Namibia) ಭಾರತಕ್ಕೆ ಕರೆತಂದಿದ್ದ ಎಂಟು ಚೀತಾಗಳ ಪೈಕಿ ಒಂದು ಸಾವಿಗೀಡಾಗಿದೆ. ಜನವರಿಯಲ್ಲಿ ಇದಕ್ಕೆ ಮೂತ್ರಪಿಂಡದ ಸೋಂಕು ಉಂಟಾಗಿದ್ದು ಸೋಮವಾರ ಮೃತಪಟ್ಟಿದೆ.
ಇದು ಭಾರತಕ್ಕೆ ಬರುವಾಗಲೇ ಕಿಡ್ನಿ ತೊಂದರೆಯಿಂದ ಬಳಲುತ್ತಿತ್ತು ಎಂದು ಹೇಳಲಾಗಿದೆ. ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಬಂದ ನಂತರ ಕೆಲ ಸಮಯದಲ್ಲಿಯೇ ಈ ಹೆಣ್ಣು ಚೀತಾ ಸಾಶಾ ಆಯಾಸ ಮತ್ತು ದೌರ್ಬಲ್ಯದ ಲಕ್ಷಣಗಳನ್ನು ತೋರಿಸಿತ್ತು. ರಕ್ತ ಪರೀಕ್ಷೆ ನಡೆಸಿದಾಗ ಅದರ ಕ್ರಿಯೇಟಿನೈನ್ ಮಟ್ಟವು ತುಂಬಾ ಹೆಚ್ಚಾಗಿದೆ ಎಂದು ತಿಳಿದುಬಂದಿದೆ, ಇದು ಮೂತ್ರಪಿಂಡದಲ್ಲಿ ಸೋಂಕನ್ನು ಸೂಚಿಸುತ್ತದೆ. ಉದ್ಯಾನದಲ್ಲಿರುವ ಇತರ ಚೀತಾಗಳು ಆರೋಗ್ಯವಾಗಿವೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.
ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಕರೆತರಲಾದ ಚೀತಾಗಳ ಮೊದಲ ಬ್ಯಾಚ್‌ನ ಭಾಗವಾಗಿದ್ದ ಸಾಶಾ, ಕಳೆದ ವರ್ಷ ನಮೀಬಿಯಾದಿಂದ ಬಂದ ಐದು ಹೆಣ್ಣು ಚೀತಾಗಳ ಪೈಕಿ ಒಂದಾಗಿದೆ. ಕಳೆದ ವರ್ಷ ಸೆಪ್ಟೆಂಬರ್ 17 ರಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಜನ್ಮದಿನದಂದು ಕುನೋದಲ್ಲಿ ಬಿಡುಗಡೆ ಮಾಡಿದ ಐದು ವರ್ಷದ ಎರಡು ಹೆಣ್ಣು ಚೀತಾಗಳಲ್ಲಿ ಸಾಶಾ ಕೂಡಾ ಒಂದಾಗಿತ್ತು.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಇಂದಿನ ಪ್ರಮುಖ ಸುದ್ದಿ :-   ನಾನು ಭಾರತಕ್ಕೆ ಹಿಂತಿರುಗಿದಾಗ ನನ್ನನ್ನು ನೋಡಿ : ಅಮೆರಿಕದಲ್ಲಿ ರಾಹುಲ್ ಗಾಂಧಿ ಹೇಳಿಕೆಗೆ ವಿದೇಶಾಂಗ ಸಚಿವ ಜೈಶಂಕರ ಉತ್ತರ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

0 / 5. ಒಟ್ಟು ವೋಟುಗಳು 0

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement