ವಿದ್ಯಾರ್ಥಿನಿ ಅಂಕಪಟ್ಟಿಯಲ್ಲಿ ಪ್ರಮಾದ..ಅವಳು ನಿಧನಳಾಗಿದ್ದಾಳೆ ಎಂದು ಬರೆದ ಶಿಕ್ಷಕ…!

ಮಾರ್ಕ್ಸ್‌ ಕಾರ್ಡ್‌ನಲ್ಲಿ ಶಿಕ್ಷಕರ ಕಾಮೆಂಟ್ ಅತ್ಯಗತ್ಯ. ಪಾಲಕರು ತಮ್ಮ ಮಗುವಿನ ಬಗ್ಗೆ ಶಿಕ್ಷಕರು ಏನು ಹೇಳುತ್ತಾರೆಂದು ತಿಳಿಯಲು ತುಂಬಾ ಉತ್ಸುಕರಾಗಿರುತ್ತಾರೆ. ಆದರೆ ಇಲ್ಲೊಬ್ಬ ಶಿಕ್ಷಕರೊಬ್ಬರು ಮಾಡಿದ ಪ್ರಮಾದವೊಂದು ಸಾಮಾಜಿಕ ಜಾಲತಾಣಗಳಲ್ಲಿ ತಲ್ಲಣಗೊಳಿಸುತ್ತಿದೆ.
ಶಿಕ್ಷಕ ಅಂಕಪಟ್ಟಿಯಲ್ಲಿ ಬರೆದ ಟಿಪ್ಪಣಿಯ ಸ್ಕ್ರೀನ್‌ಶಾಟ್ ಈಗ ವೈರಲ್ ಆಗುತ್ತಿದೆ, ಅದರಲ್ಲಿ ಅವರು 2019ನೇ ವರ್ಷದ ಅಂಕಪಟ್ಟಿಯ ಮೇಲೆ ವಿದ್ಯಾರ್ಥಿನೊಯೊಬ್ಬಳು ಉತ್ತೀರ್ಣಳಾಗಿದ್ದಾಳೆ ಎಂದು ಬರೆಯುವ ಬದಲು ” ವಿದ್ಯಾರ್ಥಿನಿ ನಿಧನಳಾಗಿದ್ದಾಳೆ” (she has passed away) ಎಂದು ಬರೆದಿದ್ದಾರೆ…! ಹೆಸರಿಸದ ವಿದ್ಯಾರ್ಥಿನಿ ಹೆಚ್ಚಿನ ವಿಷಯಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಿದ್ದಾಳೆ ಹಾಗೂ ತನ್ನ ತರಗತಿಯಲ್ಲಿ ಏಳನೇ ಸ್ಥಾನ ಗಳಿಸಿದ್ದಾಳೆ.
ಈ ಅಂಕಪಟ್ಟಿಯ ಚಿತ್ರವನ್ನು ಅನಂತ್ ಭಾನ್ ಎಂಬವರು ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಫೇಸ್‌ಬುಕ್‌ನಿಂದ ಫೋಟೋವನ್ನು ಪಡೆದಿದ್ದೇನೆ ಮತ್ತು ವಿದ್ಯಾರ್ಥಿನಿ ಅಧ್ಯಯನ ಮಾಡಿದ ದೇಶವನ್ನು ನಮೂದಿಸಿಲ್ಲ ಎಂದು ಬಳಕೆದಾರರು ಹೇಳಿದ್ದಾರೆ. ಆದರೆ ರಿಪೋರ್ಟ್ ಕಾರ್ಡ್‌ನಲ್ಲಿ ಉಲ್ಲೇಖಿಸಲಾದ ವಿಷಯವೆಂದರೆ ಚಿಚೆವಾ, ಇದು ಆಫ್ರಿಕಾದ ಮಲಾವಿಯ ಅಧಿಕೃತ ಭಾಷೆಯಾಗಿದೆ.
ಇತರ ವಿಷಯಗಳೆಂದರೆ ಗಣಿತ, ಇಂಗ್ಲಿಷ್, ಕೃಷಿ, BK/RE, ಸಾಮಾಜಿಕ, ಜೀವನ ಕೌಶಲ್ಯ ಮತ್ತು ಕಲೆ ಎಂಬುದಾಗಿ ಅಂಕಪಟ್ಟಿಯಲ್ಲಿ ನಮೂದಿಸಲಾಗಿದೆ.

ಶಿಕ್ಷಕರ ಈ ಬಗೆಯ ಟಿಪ್ಪಣಿಯನ್ನು ಆನ್‌ಲೈನ್‌ನಲ್ಲಿ ಹಲವಾರು ಬಳಕೆದಾರರು ಟೀಕಿಸಿದ್ದಾರೆ. ಅಂಕಪಟ್ಟಿಯಲ್ಲಿ ಶಿಕ್ಷಕರ ಟಿಪ್ಪಣಿಯಲ್ಲಿ
ಶಿಕ್ಷಕನ ಟಿಪ್ಪಣಿಯ ಪ್ರಮಾದದಿಂದ “ನಿಧನಳಾದ ವಿದ್ಯಾರ್ಥಿನಿ ((she has passed away) ದೀರ್ಘ ಆರೋಗ್ಯಕರ ಸಂತೋಷ ಮತ್ತು ಸಮೃದ್ಧ ಜೀವನವನ್ನು ಹೊಂದಲು ಸರ್ವಶಕ್ತ ಆಶೀರ್ವದಿಸಲಿ” ಎಂದು ಇನ್ನೊಬ್ಬರು ಬಳಕೆದಾರರು ಬರೆದಿದ್ದಾರೆ. ಅನೇಕರು ಶಿಕ್ಷಕರ ಈ ರೀತಿಯ ಟಿಪ್ಪಣಿ ಬಗ್ಗೆ ಕಾಮೆಂಟ್‌ ಮಾಡಿದ್ದಾರೆ.

ಕೆಲವು ವರ್ಷಗಳ ಹಿಂದೆ, ಮಧ್ಯಪ್ರದೇಶದಲ್ಲಿ 45 ನಿಮಿಷಗಳ ಮಾದರಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಇಂಥದ್ದೇ ಮುಜುಗರದ ದೋಷ ಉಂಟಾಗಿತ್ತು. ಇದು ಕಲಿಕೆಯಲ್ಲಿ ದುರ್ಬಲ ವಿದ್ಯಾರ್ಥಿಗಳನ್ನು ಅಂತಿಮ ಪರೀಕ್ಷೆಗೆ ಅಣಿಗೊಳಿಸಲು ನಡೆಸಿದ್ದ ಮಾದರಿ ಪರೀಕ್ಷೆಯಾಗಿತ್ತು.
ಅದರಲ್ಲಿ “ಸುಬುದ್ಧಿ” (ನೀತಿವಂತ ವ್ಯಕ್ತಿ) ಮತ್ತು “ಕುಬುದ್ಧಿ” (ಅನೈತಿಕ ವ್ಯಕ್ತಿ) ಗುಣಗಳು ಯಾವುವು ಎಂಬ ಪ್ರಶ್ನೆಗೆ ಉತ್ತರವಾಗಿ, “ಕುಬುದ್ಧಿ ಒಬ್ಬ ದುಷ್ಟ ವ್ಯಕ್ತಿ ಮತ್ತು ಮದ್ಯಪಾನ ಮತ್ತು ಜೂಜಾಟದ ಗಾಂಧೀಜಿ ಜೀವನ ನಡೆಸುತ್ತಿದ್ದರು” ಎಂದು ಉತ್ತರ ಬರೆಯಲಾಗಿತ್ತು. ಅದು ಗ್ಯಾಂಬ್ಲಿಂಗ್‌ (gambling) ಅಂದರೆ ಜೂಜಾಟ್‌ ಎಂಬುದರ ಬದಲು ಗಾಂಧೀಜಿ ಎಂದಾಗಿತ್ತು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement