ಕರ್ನಾಟಕ ವಿಧಾನಸಭೆಗೆ ಚುನಾವಣೆ ದಿನಾಂಕ ಘೋಷಣೆ, ಒಂದೇ ಹಂತದಲ್ಲಿ ಮತದಾನ

ನವದೆಹಲಿ: ಕರ್ನಾಟಕ ವಿಧಾನಸಭೆ ದಿನಾಂಕವನ್ನು ಭಾರತದ ಚುನಾವಣಾ ಆಯೋಗ ಘೋಷಿಸಿದ್ದು ಅದು ಮೇ 10ರಂದು ನಡೆಯಲಿದೆ. ಚುನಾವಣೆ ಒಂದೇ ಹಂತದಲ್ಲಿ ನಡೆಯಲಿದ್ದು, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ.
ಏಪ್ರಿಲ್ 13 ರಂದು ಚುನಾವಣೆಗೆ ಅಧಿಸೂಚನೆ ಪ್ರಕಟವಾಗಲಿದೆ. ಇಂದಿನಿಂದ ಚುನಾವಣೆ ನೀತಿ ಸಂಹಿತೆ ಜಾರಿಗೆ ಬರಲಿದೆ.
ಗೆಜೆಟ್ ಅಧಿಸೂಚನೆ: ಏಪ್ರಿಲ್ 13
ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ: ಏಪ್ರಿಲ್ 20
ನಾಮನಿರ್ದೇಶನಗಳ ಪರಿಶೀಲನೆಯ ದಿನಾಂಕ: ಏಪ್ರಿಲ್ 21
ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ: ಏಪ್ರಿಲ್ 24
ಏಕ ಹಂತದ ಮತದಾನದ ದಿನಾಂಕ: ಮೇ 10
ಚುನಾವಣಾ ಫಲಿತಾಂಶ: ಮೇ 13
ಮೇ 24ರಂದು ರಾಜ್ಯ ವಿಧಾನಸಭೆ ಮುಕ್ತಾಯಗೊಳ್ಳಲಿದೆ.
ರಾಜ್ಯದಲ್ಲಿ ಒಟ್ಟು 52173579 ಮತದಾರರಿದ್ದು, ಅವರಲ್ಲಿ ಪುರುಷ ಮತದಾರರು 26242561 ಹಾಗೂ ಮಹಿಳಾ ಮತದಾರರು 26242561. ವಿಕಚೇತನರಿಗೆ ಹಾಗೂ 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ನೀಡಲಾಗಿದೆ. ಆದರೆ ಅವರು ಮತದಾನಕ್ಕೂ ಮೊದಲೇ ನೋಂದಣಿ ಮಾಡಿಕೊಳ್ಳಬೇಕು. ರಾಜ್ಯದಲ್ಲಿ 80 ವರ್ಷ ಮೇಲ್ಪಟ್ಟ 1215763 ಮತದಾರರಿದ್ದಾರೆ, 100 ವರ್ಷ ಮೇಲ್ಪಟ್ಟ 16,976 ಮತದಾರರಿದ್ದಾರೆ. ಹಾಗೂ 555073 ದಿವ್ಯಾಂಗ ಮತದಾರರಿದ್ದಾರೆ. ಹಾಗೂ ತೃತೀಯ ಲಿಂಗಿ ಮತದಾರರು-5699. ಅಲ್ಲದೆ, 9.17 ಲಕ್ಷಕ್ಕೂ ಹೆಚ್ಚು ಮೊದಲ ಬಾರಿಗೆ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.
224 ಮತಕ್ಷೇತ್ರಗಳಲ್ಲಿ 58,282 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ನಗರ ಪ್ರದೇಶಗಳಲ್ಲಿ 24,063 ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 34,219 ಮತಗಟ್ಟೆಗಳು ಇರಲಿವೆ. ಪ್ರತಿ ಮತದಾನ ಕೇಂದ್ರಕ್ಕೆ ಸರಾಸರಿ ಮತದಾರರು 883 ಮತದಾರರು ಇರುತ್ತಾರೆ. 50% ಮತದಾನ ಕೇಂದ್ರಗಳು ವೆಬ್‌ಕಾಸ್ಟಿಂಗ್ ಸೌಲಭ್ಯವನ್ನು ಹೊಂದಿವೆ. 1320 ಮತಗಟ್ಟೆಗಳನ್ನು ಮಹಿಳಾ ಅಧಿಕಾರಿಗಳು ನಿರ್ವಹಿಸುತ್ತಾರೆ. ಅಕ್ರಮ ತಡೆಗೆ 2400 ತಂಡಗಳನ್ನು ರಚನೆ ಮಾಡಲಾಗಿದೆ.
17 ವರ್ಷ+ ಯುವಕರಿಂದ 1.25 ಲಕ್ಷಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಲಾಗಿದೆ, ಅದರಲ್ಲಿ ಸುಮಾರು 41,000 ಅರ್ಜಿಗಳನ್ನು ಏಪ್ರಿಲ್ 1, 2023 ರ ವೇಳೆಗೆ 18 ವರ್ಷ ತುಂಬಿದ ಯುವಕರಿಂದ ಸ್ವೀಕರಿಸಲಾಗಿದೆ.

ಪ್ರಮುಖ ಸುದ್ದಿ :-   ಮನಕಲಕುವ ಘಟನೆ....: ತಾಯಿಯ ಶವದ ಜೊತೆ 1 ವರ್ಷದಿಂದ ವಾಸಿಸುತ್ತಿದ್ದ ಅಕ್ಕ-ತಂಗಿ...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement