ಇಂದೋರ್ ದೇವಸ್ಥಾನದ ಮೆಟ್ಟಿಲುಬಾವಿ ಮೇಲ್ಛಾವಣಿ ಕುಸಿತ: ಸಾವಿನ ಸಂಖ್ಯೆ 35 ಕ್ಕೆ ಏರಿಕೆ

ಇಂದೋರ್‌ : ಗುರುವಾರ ಬೆಳಗ್ಗೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ರಾಮನವಮಿ ಬೆಳಗಿನ ಜಾವದಂದು ನಡೆದ ಧಾರ್ಮಿಕ ವಿಧಿವಿಧಾನದ ವೇಳೆ ‘ಬಾವಡಿ’ (ಬಾವಿ)ಯನ್ನು ಮುಚ್ಚುವ ಚಪ್ಪಡಿ ಒಡೆದು ಸಂಭವಿಸಿದ ದುರ್ಘಟನೆಯಲ್ಲಿ ಸಾವಿನ ಸಂಖ್ಯೆ 35ಕ್ಕೆ ಏರಿದೆ.
ಬಾವಿಯ ಮೇಲ್ಛಾವಣಿಯನ್ನು ಕಾಂಕ್ರೀಟ್ ಚಪ್ಪಡಿ ಹಾಕಿ, ಕಬ್ಬಿಣದ ರಾಡ್‌ಗಳಿಂದ ಆಸರೆಯಾಗಿ, ಬಾವಡಿಯನ್ನು ಮುಚ್ಚಲು ಮೇಲ್ಛಾವಣಿ ನಿರ್ಮಿಸಲಾಗಿತ್ತು.
ಇಂದೋರ್ ವಿಭಾಗದ ಕಮಿಷನರ್ ಪವನ್ ಶರ್ಮಾ ಪ್ರಕಾರ, ಇಲ್ಲಿಯವರೆಗೆ 35 ಶವಗಳನ್ನು ಹೊರತೆಗೆಯಲಾಗಿದೆ ಮತ್ತು 18 ಜನರನ್ನು ರಕ್ಷಿಸಲಾಗಿದೆ. 18 ಜನರಲ್ಲಿ 16 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಇಬ್ಬರು ಆರೋಗ್ಯವಾಗಿದ್ದಾರೆ. ಅಲ್ಲದೆ, ಇಬ್ಬರು ನಾಪತ್ತೆಯಾಗಿದ್ದು, ಅವರ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಉನ್ನತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
75 ಸೇನಾ ಸಿಬ್ಬಂದಿ ಸೇರಿದಂತೆ 140 ಜನರ ತಂಡ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ ಎಂದು ಇಂದೋರ್ ವಿಭಾಗದ ಆಯುಕ್ತರು ತಿಳಿಸಿದ್ದಾರೆ.
ರಾಮನವಮಿ ಪ್ರಯುಕ್ತ ಭಕ್ತರ ನೂಕುನುಗ್ಗಲು ನಡುವೆಯೇ ಬೆಳೇಶ್ವರ ಮಹಾದೇವ ದೇವಸ್ಥಾನದ ಬಾವಿಯ ಮೇಲ್ಛಾವಣಿ ಕುಸಿದಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಭಾರೀ ಅದರ ಮೇಲೆ ಭಾರೀ ಸಂಖ್ಯೆಯ ಜನ ನಡೆದಾಡಿದಾಗ ಮೇಲ್ಛಾವಣಿ ಕುಸಿದ ನಂತರ 30 ಕ್ಕೂ ಹೆಚ್ಚು ಭಕ್ತರು ಬಾವಿಗೆ ಬಿದ್ದಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ಗ್ರಾಮದ ಪದ್ಧತಿ ಉಲ್ಲಂಘಿಸಿ ಮದುವೆ ; ದಂಪತಿಯನ್ನು ನೊಗಕ್ಕೆ ಕಟ್ಟಿ, ಕೋಲಿನಿಂದ ಹೊಡೆದು ಹೊಲ ಉಳುಮೆ ಮಾಡಿಸಿದ ಗುಂಪು

ಹಗ್ಗಗಳು ಮತ್ತು ಏಣಿಗಳನ್ನು ಬಳಸಿ ಭಕ್ತರನ್ನು ಹೊರಗೆ ಕರೆತರುತ್ತಿರುವ ದೃಶ್ಯಗಳು ಕಂಡುಬಂದವು. ಕಿರಿದಾದ ಪ್ರವೇಶ ಮತ್ತು ಹತ್ತಿರದ ಗೋಡೆಗಳ ಅವಶೇಷಗಳು ಹಾಗೂ ಮತ್ತೆ ಕುಸಿಯುವ ಭಯವು ರಕ್ಷಣಾ ಪ್ರಯತ್ನಗಳನ್ನು ಕಷ್ಟಕರವಾಗಿಸಿದೆ
ಪ್ರಧಾನಿ ನರೇಂದ್ರ ಮೋದಿ ಕೂಡ ಪರಿಸ್ಥಿತಿ ಅವಲೋಕಿಸಿ ಸಂತಾಪ ಸೂಚಿಸಿದ್ದಾರೆ. “ಇಂಧೋರ್‌ನಲ್ಲಿ ಸಂಭವಿಸಿದ ದುರ್ಘಟನೆಯಿಂದ ತೀವ್ರ ನೋವಾಗಿದೆ. ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ಅವರೊಂದಿಗೆ ಮಾತನಾಡಿ ಪರಿಸ್ಥಿತಿಯ ಕುರಿತು ಮಾಹಿತಿ ಪಡೆದಿದ್ದೇನೆ. ರಾಜ್ಯ ಸರ್ಕಾರವು ತ್ವರಿತ ಗತಿಯಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ಮುನ್ನಡೆಸುತ್ತಿದೆ. ಎಲ್ಲಾ ಸಂತ್ರಸ್ತರು ಮತ್ತು ಅವರ ಕುಟುಂಬಗಳೊಂದಿಗೆ ನನ್ನ ಪ್ರಾರ್ಥನೆಗಳು ಎಂದು ಅವರು ಟ್ವೀಟ್ ಮಾಡಿದ್ದಾರೆ.
ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ ಮತ್ತು ಬಾವಿಯ ಮೇಲೆ ದೇವಾಲಯವನ್ನು ನಿರ್ಮಿಸಲು ಹೇಗೆ ಅನುಮತಿಸಲಾಗಿದೆ ಎಂಬುದನ್ನು ಕಂಡುಹಿಡಿಯಬೇಕು. ಸಂತ್ರಸ್ತರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಹಾಗೂ ಗಾಯಗೊಂಡ ಪ್ರತಿಯೊಬ್ಬರಿಗೂ 50 ಸಾವಿರ ರೂಪಾಯಿ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದ್ದಾರೆ.

ರಾಷ್ಟ್ರಪತಿ  ದ್ರೌಪದಿ ಮುರ್ಮು ಅವರು “ಎಲ್ಲಾ ದುಃಖಿತ ಕುಟುಂಬಗಳಿಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ” ಮತ್ತು “ಇಂಧೋರ್‌ನಲ್ಲಿ ಸಂಭವಿಸಿದ ಅಪಘಾತದಲ್ಲಿ ಅನೇಕ ಜನರ ಸಾವಿನ ಸುದ್ದಿಯಿಂದ ನಾನು ತೀವ್ರ ದುಃಖಿತನಾಗಿದ್ದೇನೆ. ಎಲ್ಲಾ ದುಃಖಿತ ಕುಟುಂಬಗಳಿಗೆ ನಾನು ನನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇನೆ ಮತ್ತು ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಇಂದೋರ್ ದೇಗುಲದಲ್ಲಿ ಸಂಭವಿಸಿದ ದುರ್ಘಟನೆಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. “ಇಂಧೋರ್‌ನ ಬೆಳೇಶ್ವರ ಮಹಾದೇವ್ ಜುಲೇಲಾಲ್ ದೇವಸ್ಥಾನದಲ್ಲಿ ಉತ್ಸವದ ಸಂದರ್ಭದಲ್ಲಿ ಸಂಭವಿಸಿದ ಅಪಘಾತದ ಸುದ್ದಿ ತುಂಬಾ ದುಃಖಕರವಾಗಿದೆ. ಈ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ನನ್ನ ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಎಲ್ಲಾ ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಆಶಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ಮನೆಯಲ್ಲೇ ಟೆನಿಸ್ ಆಟಗಾರ್ತಿ ರಾಧಿಕಾ ಯಾದವಗೆ ಗುಂಡಿಕ್ಕಿ ಕೊಂದ ತಂದೆ....!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement