ಕಳ್ಳಸಾಗಣೆಯಾಗಿದ್ದ 15 ಪುರಾತನ ಶಿಲ್ಪಗಳನ್ನು ಭಾರತಕ್ಕೆ ವಾಪಸ್‌ ನೀಡಲಿರುವ ಅಮೆರಿಕ

ನ್ಯೂಯಾರ್ಕ್: ಅಮೆರಿಕದ ಪ್ರಸಿದ್ಧ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್ 15 ವಿಶೇಷ ಶಿಲ್ಪಗಳನ್ನು ಭಾರತಕ್ಕೆ ಹಿಂದಿರುಗಿಸಲಿದೆ. ಕಳಂಕಿತ ಶಿಲ್ಪ ಮಾರಾಟಗಾರ ಸುಭಾಷ್ ಕಪೂರ್ ಈ ಶಿಲ್ಪಗಳನ್ನು ಭಾರತದಿಂದ ಅಕ್ರಮವಾಗಿ ಒಯ್ದು ಮಾರಾಟ ಮಾಡಿದ್ದಾನೆ ಎಂದು ತಿಳಿದ ನಂತರ ಈಗ ಭಾರತಕ್ಕೆ ಹಿಂದಿರುಗಿಸುತ್ತಿದೆ.
ಗುರುವಾರ ಹೇಳಿಕೆಯಲ್ಲಿ, 15 ಶಿಲ್ಪಗಳನ್ನು ಭಾರತ ಸರ್ಕಾರಕ್ಕೆ ಹಸ್ತಾಂತರಿಸುವುದಾಗಿ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್ ಹೇಳಿದೆ. ಈ ಶಿಲ್ಪಗಳು 1ನೇ ಶತಮಾನ ಬಿಸಿಇ(BCE)ಯಿಂದ ಹಿಡಿದು 11ನೇ ಶತಮಾನದ (CE) ವರೆಗಿನ ಕಾಲಮಾನದ್ದಾಗಿದ್ದು, ಭಾರತೀಯ ಸಂಸ್ಕೃತಿ ಪ್ರತಿಬಿಂಬಿಸುವ ಈ ಶಿಲ್ಪಗಳನ್ನು ಟೆರಾಕೋಟಾ, ತಾಮ್ರ ಮತ್ತು ಕಲ್ಲುಗಳಿಂದ ಮಾಡಲಾಗಿದೆ. ಪ್ರಸ್ತುತ ಭಾರತದಲ್ಲಿ (ತಮಿಳುನಾಡಿನಲ್ಲಿ )ಜೈಲು ಶಿಕ್ಷೆಯನ್ನು ಅನುಭವಿಸುತ್ತಿರುವ ಸುಭಾಷ್ ಕಪೂರ್ ಈ ಎಲ್ಲಾ ಕೃತಿಗಳನ್ನು ಒಂದೇ ಹಂತದಲ್ಲಿ ಮಾರಾಟ ಮಾಡಿದ್ದಾನೆ.
ವಸ್ತುಸಂಗ್ರಹಾಲಯವು ಪುರಾತತ್ತ್ವ ಶಾಸ್ತ್ರದ ಕಲಾಕೃತಿಗಳ ಜವಾಬ್ದಾರಿಯುತ ಖರೀದಿಗೆ ಬದ್ಧವಾಗಿರುವುದಾಗಿ ಹೇಳಿದೆ ಮತ್ತು ಹೊಸ ಖರೀದಿ ಮತ್ತು ಸಂಗ್ರಹಣೆಗೆ ಕಠಿಣವಾದ ಮೂಲ ಮಾನದಂಡಗಳನ್ನು ಅನ್ವಯಿಸುವುದಾಗಿ ಹೇಳಿದೆ. ಮ್ಯೂಸಿಯಂ ಶಂಕಿತ ವಿತರಕರಿಂದ ಖರೀದಿಸಿದ ಪ್ರಾಚೀನ ವಸ್ತುಗಳ ಇತಿಹಾಸವನ್ನು ಸಕ್ರಿಯವಾಗಿ ಪರಿಶೀಲಿಸುತ್ತಿದೆ. ಮ್ಯೂಸಿಯಂ ಭಾರತ ಸರ್ಕಾರದೊಂದಿಗಿನ ತನ್ನ ದೀರ್ಘಕಾಲದ ಸಂಬಂಧವನ್ನು ಹೆಚ್ಚು ಗೌರವಿಸುತ್ತದೆ ಮತ್ತು ಈ ವಿಷಯವನ್ನು ಪರಿಹರಿಸಲು ಸಂತೋಷವಾಗಿದೆ ಎಂದು ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್ ಹೇಳಿಕೆಯಲ್ಲಿ ತಿಳಿಸಿದೆ.

ಪ್ರಮುಖ ಸುದ್ದಿ :-   ರೇವಣ್ಣ, ಪ್ರಜ್ವಲ್ ಎಸ್‌ಐಟಿ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಪ್ರಕಾರ ಬಂಧನ: ಗೃಹ ಸಚಿವ ಪರಮೇಶ್ವರ

ವಸ್ತುಸಂಗ್ರಹಾಲಯವು 2015 ರಲ್ಲಿ ಸುಭಾಷ್ ಕಪೂರ್ ಕಾರ್ಯಗಳ ಬಗ್ಗೆ ಹೋಮ್ಲ್ಯಾಂಡ್ ಸೆಕ್ಯುರಿಟಿಯನ್ನು ಸಂಪರ್ಕಿಸಿದೆ ಮತ್ತು ಮ್ಯಾನ್‌ಹ್ಯಟನ್ ಜಿಲ್ಲಾ ಅಟಾರ್ನಿ ಕಚೇರಿಯಿಂದ “ಸುಭಾಷ್ ಕಪೂರ್ ಅಪರಾಧದ ತನಿಖೆಯ ಪರಿಣಾಮವಾಗಿ ಇಂದು ಈ ವಿಷಯದಲ್ಲಿ ಕಾರ್ಯನಿರ್ವಹಿಸಲು ಸಂತೋಷವಾಗಿದೆ” ಎಂದು ಅದು ಹೇಳಿದೆ.
ಈ ಪ್ರಕರಣವು ಮ್ಯಾನ್‌ಹ್ಯಾಟನ್ ಜಿಲ್ಲಾ ಅಟಾರ್ನಿಯಲ್ಲಿ ಬಾಕಿ ಉಳಿದಿತ್ತು. ಅಟಾರ್ನಿ ಕಚೇರಿಯು ಕಲಾಕೃತಿಗಳನ್ನು ಭಾರತಕ್ಕೆ ಹಿಂತಿರುಗಿಸಲು ಆದೇಶಿಸಿತು. ಮ್ಯೂಸಿಯಂ ಇದಕ್ಕೆ ಒಪ್ಪಿಗೆ ನೀಡಿದೆ.
ಈ ಸಹಕಾರಿ ಸಹಭಾಗಿತ್ವದ ಮೂಲಕ, ವಸ್ತುಸಂಗ್ರಹಾಲಯವು ಮ್ಯಾನ್‌ಹ್ಯಾಟನ್ ಜಿಲ್ಲಾ ಅಟಾರ್ನಿ ಕಚೇರಿಯಿಂದ 15 ಕಲಾಕೃತಿಗಳ ಬಗ್ಗೆ ಹೊಸ ಮಾಹಿತಿಯನ್ನು ಪಡೆದುಕೊಂಡಿದೆ, ಅದು ಈ ಕೃತಿಗಳನ್ನು ಭಾರತಕ್ಕೆ ವರ್ಗಾಯಿಸಬೇಕು ಎಂದು ಸ್ಪಷ್ಟಪಡಿಸಿದ ನಂತರ ಈ ರಚನಾತ್ಮಕ ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿಕೆ ತಿಳಿಸಿದೆ.
ಇಲ್ಲಿ 5000 ವರ್ಷಗಳಷ್ಟು ಹಳೆಯ ಶಿಲ್ಪಗಳು ಹಾಗೂ ಕಲಾಕೃತಿಗಳನ್ನು ಇರಿಸಲಾಗಿದೆ ಎಂದು ವಸ್ತುಸಂಗ್ರಹಾಲಯದ ಅಧಿಕೃತ ಸೈಟ್‌ನಲ್ಲಿ ತಿಳಿಸಲಾಗಿದೆ. ಆಫ್ರಿಕಾ, ಅಮೆರಿಕ, ಏಷ್ಯಾ ಮತ್ತು ಯುರೋಪ್‌ನ ಕಲಾಕೃತಿಗಳನ್ನು ಮ್ಯೂಸಿಯಂನಲ್ಲಿ ಇರಿಸಲಾಗಿದೆ. ಮ್ಯೂಸಿಯಂನ ಸ್ಥಳದಲ್ಲಿ ಏಷ್ಯಾದ ಒಂದು ವಿಭಾಗವನ್ನು ಸಹ ಮಾಡಲಾಗಿದೆ, ಅಲ್ಲಿ ಭಾರತದ ಅನೇಕ ಕಲಾಕೃತಿಗಳನ್ನು ಪ್ರದರ್ಶಿಸಲಾಗಿದೆ.

ಪ್ರಮುಖ ಸುದ್ದಿ :-   ವೀಡಿಯೊ...| ಶಿವಸೇನೆ ನಾಯಕಿ ಕರೆದೊಯ್ಯಲು ಬಂದಿದ್ದ ಹೆಲಿಕಾಪ್ಟರ್ ಅಪಘಾತ

 

 

 

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement