ವೀಡಿಯೊ : ಇರಾನಿನಲ್ಲಿ ಹಿಜಾಬ್‌ ಧರಿಸದೇ ಅಂಗಡಿಗೆ ಬಂದಿದ್ದಕ್ಕೆ ಇಬ್ಬರು ಮಹಿಳೆಯರ ಮೇಲೆ ಮೊಸರು ಸುರಿದ ವ್ಯಕ್ತಿ

ಇರಾನ್‌ನಲ್ಲಿ ಸಾರ್ವಜನಿಕವಾಗಿ ತಮ್ಮ ಕೂದಲನ್ನು ವಸ್ತ್ರದಿಂದ ಮುಚ್ಚದೇ ಇರುವುದಕ್ಕಾಗಿ ತಲೆಯ ಮೇಲೆ ಮೊಸರು ಸುರಿದು ಹಲ್ಲೆ ಮಾಡಿದ ನಂತರ ವ್ಸತ್ರದಿಂದ ಕೂದಲು ಮುಚ್ಚದ ಇಬ್ಬರು ಮಹಿಳೆಯರನ್ನು ಬಂಧಿಸಲಾಗಿದೆ. ಘಟನೆ ಗುರುವಾರ ನಡೆದಿದೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವೀಡಿಯೊದಲ್ಲಿ ಅಂಗಡಿಯೊಂದರಲ್ಲಿ ಇಬ್ಬರು ಮಹಿಳಾ ಗ್ರಾಹಕರ ಜೊತೆ ವ್ಯಕ್ತಿಯೊಬ್ಬ ಸಂಭಾಷಣೆಯಲ್ಲಿ ತೊಡಗಿಕೊಂಡಿರುವುದು ಕಂಡುಬರುತ್ತದೆ. ನಂತರ ಆ ವ್ಯಕ್ತಿ ಅಂಗಡಿಯೊಳಗಿದ್ದ ಕಪಾಟಿನಿಂದ ಮೊಸರಿನ ಬುಟ್ಟಿಯಂತೆ ತೋರುತ್ತಿದ್ದುದನ್ನು ಎತ್ತಿಕೊಂಡ ಆತ ಅವರ ತಲೆಯ ಮೇಲೆ ಸುರಿದಿದ್ದು ಕಂಡುಬರುತ್ತದೆ.
ಬಿಬಿಸಿ ಪ್ರಕಾರ, ಘಟನೆಯ ನಂತರ, ಇರಾನ್‌ನ ನ್ಯಾಯಾಂಗವು ದೇಶದ ಹಿಜಾಬ್ (ಶಿರ ವಸ್ತ್ರ) ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಇಬ್ಬರು ಮಹಿಳೆಯರನ್ನು ಬಂಧಿಸಲಾಗಿದೆ ಎಂದು ಹೇಳಿದೆ. ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತಂದಿದ್ದಕ್ಕಾಗಿ ಆ ವ್ಯಕ್ತಿಯನ್ನೂ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾನೂನಿನ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಅಂಗಡಿಯ ಮಾಲೀಕರಿಗೆ “ಅಗತ್ಯ ನೋಟೀಸ್” ನೀಡಲಾಗಿದೆ ಎಂದು ತಿಳಿಸಲಾಗಿದೆ.
ಗಮನಾರ್ಹವಾಗಿ, ಇರಾನ್‌ನ ಅಧಿಕೃತ ಕಾನೂನು ಏಳು ವರ್ಷ ವಯಸ್ಸಿನ ನಂತರ ಹುಡುಗಿಯರು ಹಿಜಾಬ್ ಧರಿಸಬೇಕು ಎಂದು ಆದೇಶಿಸುತ್ತದೆ.

ಪ್ರಮುಖ ಸುದ್ದಿ :-   ಕೋಟಿಗಟ್ಟಲೆ ಬೆಲೆಗೆ ಮಾರಾಟವಾಗಿ ನೂತನ ದಾಖಲೆ ನಿರ್ಮಿಸಿದ ಭಾರತದ ಮೂಲದ ಈ ತಳಿಯ ಹಸು..! ಬೆಲೆ ಕೇಳಿದ್ರೆ ದಂಗಾಗ್ತೀರಾ...!!

ಸಾರ್ವಜನಿಕವಾಗಿ ಹಿಜಾಬ್‌ ಇಲ್ಲದೆ ಕಾಣಿಸಿಕೊಂಡ ಮಹಿಳೆಯರನ್ನು “ಕರುಣೆಯಿಲ್ಲದೆ” ಕಾನೂನು ಕ್ರಮ ಜರುಗಿಸುವುದಾಗಿ ಇರಾನ್‌ನ ನ್ಯಾಯಾಂಗ ಮುಖ್ಯಸ್ಥರು ಎಚ್ಚರಿಸಿದ ನಂತರ ಈ ಬಂಧನಗಳು ಬಂದಿವೆ. ದಿ ಗಾರ್ಡಿಯನ್‌ನ ಪ್ರಕಾರ, ಘೋಲಮ್‌ಹೊಸ್ಸೆನ್ ಮೊಹ್ಸೇನಿ ಎಜೀ ಅವರ ಎಚ್ಚರಿಕೆಯು ಗುರುವಾರ ಆಂತರಿಕ ಸಚಿವಾಲಯದ ಹೇಳಿಕೆಯ ನೆರಳಿನಲ್ಲೇ ಬಂದಿದ್ದು ಅದು ಸರ್ಕಾರದ ಕಡ್ಡಾಯ ಹಿಜಾಬ್ ಕಾನೂನನ್ನು ಬಲಪಡಿಸುತ್ತದೆ.
ಪ್ರತ್ಯೇಕವಾಗಿ, ಶನಿವಾರ, ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಕೂಡ ಇರಾನ್ ಮಹಿಳೆಯರು ಹಿಜಾಬ್ ಅನ್ನು “ಧಾರ್ಮಿಕ ಅವಶ್ಯಕತೆ” ಎಂದು ಧರಿಸಬೇಕೆಂದು ಪುನರುಚ್ಚರಿಸಿದ್ದಾರೆ. “ಹಿಜಾಬ್ ಕಾನೂನು ವಿಷಯವಾಗಿದೆ ಮತ್ತು ಅದನ್ನು ಅನುಸರಿಸುವುದು ಕಡ್ಡಾಯವಾಗಿದೆ” ಎಂದು ಅವರು ಹೇಳಿದರು.

ಏತನ್ಮಧ್ಯೆ, ಇತ್ತೀಚಿನ ತಿಂಗಳುಗಳಲ್ಲಿ, ಕಾನೂನಿನೊಂದಿಗಿನ ಕೋಪ ಮತ್ತು ಹತಾಶೆಯು ಇರಾನ್ ಸಮಾಜದಲ್ಲಿ ಭಿನ್ನಾಭಿಪ್ರಾಯವನ್ನು ಉಂಟುಮಾಡಿದೆ. ಕಳೆದ ಸೆಪ್ಟೆಂಬರ್‌ನಲ್ಲಿ “ನೈತಿಕತೆ ಪೋಲೀಸ್” ಕಸ್ಟಡಿಯಲ್ಲಿ 22 ವರ್ಷದ ಕುರ್ದಿಶ್ ಯುವತಿ ಮಹ್ಸಾ ಅಮಿನಿ ಮೃತಪಟ್ಟ ನಂತರ ಹಲವಾರು ಇರಾನಿನ ಮಹಿಳೆಯರು ತಮ್ಮ ಮುಸುಕುಗಳನ್ನು ಧಿಕ್ಕರಿಸುತ್ತಿದ್ದಾರೆ. ಹಿಜಾಬ್ ನಿಯಮವನ್ನು ಉಲ್ಲಂಘಿಸಿದ ಆರೋಪದ ಮೇಲೆ ಮಹ್ಸಾ ಅಮಿನಿಯನ್ನು ಬಂಧಿಸಲಾಗಿತ್ತು. ಆಕೆ ಪೊಲೀಸ್‌ ಕಸ್ಟಡಿಯಲ್ಲಿ ಮೃತಪಟ್ಟ ನಂತರ ಇರಾನಿನಾದ್ಯಂತ ಸರ್ಕಾರ ಹಾಗೂ ಹಿಜಾಬ್‌ ವಿರೋಧಿ ಪ್ರತಿಭಟನೆಗಳು ಭುಗಿಲೆದ್ದ ನಂತರಲ್ಲಿ ಅನೇಕರು ಸಾವಿಗೀಡಾಗಿದ್ದಾರೆ.

ಪ್ರಮುಖ ಸುದ್ದಿ :-   ಕೋಟಿಗಟ್ಟಲೆ ಬೆಲೆಗೆ ಮಾರಾಟವಾಗಿ ನೂತನ ದಾಖಲೆ ನಿರ್ಮಿಸಿದ ಭಾರತದ ಮೂಲದ ಈ ತಳಿಯ ಹಸು..! ಬೆಲೆ ಕೇಳಿದ್ರೆ ದಂಗಾಗ್ತೀರಾ...!!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement