54 ದಿನಗಳು…ಡಿಎನ್‌ಎ ಪರೀಕ್ಷೆ : ಟರ್ಕಿ ಭೂಕಂಪದಲ್ಲಿ ಬದುಕುಳಿದಿದ್ದ ‘ಮಿರಾಕಲ್ ಬೇಬಿ’ ತಾಯಿ ಪತ್ತೆ , 54 ದಿನಗಳ ನಂತರ ಅಮ್ಮನ ಮಡಿಲಿಗೆ ಮಗು

ಟರ್ಕಿ ಭೂಕಂಪದಲ್ಲಿ ಅವಶೇಷಗಳಡಿಯಲ್ಲಿ ಸುಮಾರು 128 ಗಂಟೆಗಳ ನಂತರ ರಕ್ಷಿಸಲ್ಪಟ್ಟ ‘ಮಿರಾಕಲ್ ಬೇಬಿ’ ಸಾಮಾಜಿಕ ಮಾಧ್ಯಮದಲ್ಲಿ ಲಕ್ಷಾಂತರ ಹೃದಯಗಳನ್ನು ಗೆದ್ದಿತ್ತು, ಆದರೆ, ಅವರ ತಾಯಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿತ್ತು. ಆದರೆ ಆದಾಗ್ಯೂ, ‘ಮಿರಾಕಲ್ ಬೇಬಿ’ಯ ತಾಯಿ ಯಾಸೆಮಿನ್ ಬೇಗ್ಡಾಸ್ ಜೀವಂತವಾಗಿದ್ದಾಳೆ ಮತ್ತು ಸುಮಾರು ಎರಡು ತಿಂಗಳ ನಂತರ ತಾಯಿ-ಮಗು ಮತ್ತೆ ಒಂದಾಗಿದ್ದಾರೆ ಎಂದು ಅನಾಡೋಲು ಏಜೆನ್ಸಿ ವರದಿ ಮಾಡಿದೆ. ಅವಶೇಷಗಳಿಂದ ರಕ್ಷಿಸಲ್ಪಟ್ಟ 54 ದಿನಗಳ ನಂತರ ಟರ್ಕಿಯ ‘ಮಿರಾಕಲ್ ಬೇಬಿ’ ಶನಿವಾರ ತನ್ನ ತಾಯಿಯನ್ನು ಸೇರಿಕೊಂಡಿದ್ದಾಳೆ
ಟರ್ಕಿಯಲ್ಲಿ ಭೂಕಂಪದ ನಂತರ 128 ಗಂಟೆಗಳ ಕಾಲ ಅವಶೇಷಗಳಡಿಯಲ್ಲಿ ಕಳೆದ ಮಗು ಪವಾಡ ಸದೃಶ ರೀತಿಯಲ್ಲಿ ಬದುಕುಳಿದಿತ್ತು. ಮಗುವನ್ನು ರಕ್ಷಿಸಿದ ನಂತರ ಆರೈಕೆ ಮಾಡಿದ ವೈದ್ಯಕೀಯ ಅಧಿಕಾರಿಗಳು ಆಕೆಗೆ ಗಿಜೆಮ್ (ಮಿಸ್ಟರಿ) ಎಂದು ಹೆಸರಿಸಿದ್ದರು. ಆಕೆಯ ತಾಯಿಯ ಯಾವುದೇ ಸುಳಿವು ಇರದ ಕಾರಣ ಆಕೆ ಮೃತಪಟ್ಟಿರಬಹುದು ಎಂದುಭಾವಿಸಲಾಗಿತ್ತು.

ಆದರೆ ಮಗುವಿನ ತಾಯಿ ಜೀವಂತವಾಗಿದ್ದಾಳೆ ! ಆಕೆಗೆ ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. 54 ದಿನಗಳ ನಂತರ ಮತ್ತು ಡಿಎನ್‌ಎ ಪರೀಕ್ಷೆ ಮೂಲಕ ದೃಢಪಡಿಸಿಕೊಂಡ ನಂತರ ತಾಯಿ ಮಗು ಈಗ ಒಟ್ಟಿಗೆ ಇದ್ದಾರೆ.
ಟರ್ಕಿಯ ಕುಟುಂಬ ಮತ್ತು ಸಾಮಾಜಿಕ ಸೇವೆಗಳ ಸಚಿವರಾದ ಡೇರಿಯಾ ಯಾನಿಕ್ ಅವರು ಡಿಎನ್ಎ ಪರೀಕ್ಷೆಯ ಮೂಲಕ ಅವರ ಸಂಬಂಧವನ್ನು ಸಾಬೀತುಪಡಿಸಿದ ನಂತರ ಜೋಡಿ ಮತ್ತೆ ಒಂದಾಗಲು ಸಹಾಯ ಮಾಡಿದರು.

ಜಗತ್ತಿನ ಅತ್ಯಂತ ಅಮೂಲ್ಯವಾದ ಕಾರ್ಯವೆಂದರೆ ತಾಯಿ-ಮಗುವನ್ನು ಮತ್ತೆ ಸೇರಿಸುವುದು. ಆ ಸಂತೋಷದ ಭಾಗವಾಗಿರುವುದು ನಮಗೂ ಬಹಳ ಸಂತೋಷವಾಗಿದೆ ಎಂದು ಅವರು ಹೇಳಿದ್ದಾರೆ. ಹಾಗೂ ಸಚಿವರು ತಾಯಿ-ಮಗುವಿನ ಪುನರ್ಮಿಲನದ ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ .
54 ದಿನಗಳ ಹಂಬಲ ಮುಗಿದಿದೆ. 128 ಗಂಟೆಗಳ ನಂತರ ಅವಶೇಷಗಳಿಂದ ರಕ್ಷಿಸಲ್ಪಟ್ಟ ಮತ್ತು ನಮ್ಮ ನರ್ಸ್‌ಗಳಿಂದ ಗಿಜೆಮ್ ಬೆಬೆಕ್ ಎಂದು ಹೆಸರಿಸಲ್ಪಟ್ಟ ವೆಟಿನ್ ಬೆಗ್ಡಾಸ್ 54 ದಿನಗಳ ನಂತರ ತನ್ನ ತಾಯಿಯೊಂದಿಗೆ ಮತ್ತೆ ಸೇರಿಕೊಂಡಿದ್ದಾಳೆ. ವೆಟಿನ್ ಈಗ ನಮ್ಮ ಮಗು ಕೂಡ. ಸಚಿವಾಲಯವಾಗಿ, ನಮ್ಮ ಬೆಂಬಲ ಯಾವಾಗಲೂ ನಿಮ್ಮೊಂದಿಗೆ ಇರುತ್ತದೆ ಎಂದು ಸಚಿವರು ಹೇಳಿದ್ದಾರೆ..

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement