ಅಂಕೋಲೆಯ ಸುಪ್ರಸಿದ್ಧ ಕರಿ ಇಷಾಡು ಮಾವಿಗೆ ಈಗ ಜಿಐ ಟ್ಯಾಗ್ ಹೆಗ್ಗಳಿಕೆ

ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ಬೆಳೆಯುವ ಸುಪ್ರಸಿದ್ಧ ಕರಿ ಇಷಾಡು ಮಾವು ಅತ್ಯಂತ ಸ್ವಾದಿಷ್ಟ ಫಲವಾಗಿದ್ದು,
ಇದರ ವಿಶೇಷ ಸ್ವಾದಿಷ್ಟಕ್ಕೆ ಹೆಗ್ಗಳಿಕೆಯಾಗಿ ಈಗ ಭೌಗೋಳಿಕ ಹೆಗ್ಗುರುತಿನ ಆಧಾರದ ಮೇಲೆ ನೀಡುವ ಜಿಐ (Geographical Indication Tags) ಟ್ಯಾಗ್ ಮಾನ್ಯತೆ ದೊರೆತಿದೆ. ವಿಶ್ವ ವ್ಯಾಪಾರ ಸಂಸ್ಥೆ (ಡಬ್ಲ್ಯುಟಿಒ) ಪ್ರಕಾರ, ಜಿಯೋಗ್ರಾಫಿಕಲ್ ಇಂಡಿಕೇಶನ್ (ಜಿಐ) ಟ್ಯಾಗ್ ಅಥವಾ ಪ್ರಾದೇಶಿಕ ಸೂಚನಾ ಟ್ಯಾಗ್ ಒಂದು ಬೌದ್ಧಿಕ ಆಸ್ತಿಯ ಮಾದರಿಯಾಗಿದೆ. ಹಾಗೂ ರಫ್ತುಗಳಿಗೆ ಉತ್ತೇಜಿಸುತ್ತದೆ.
ಅಂಕೋಲಾ ತಾಲೂಕಿನಲ್ಲಿ ಬೆಳೆಯುವ ಈಗಾಗಲೇ ಸುಪ್ರಸಿದ್ಧ ಕರಿ ಇಷಾಡು ಮಾವಿನ ಸ್ವಾದ ಹಾಗೂ ವಿಶೇಷ ಗುಣವನ್ನು ಮಾನ್ಯ ಮಾಡಿ ಈ ಜಿಐ ಟ್ಯಾಗ್ ನೀಡಲಾಗಿದೆ. ಜಾಗತಿಕ ಪೈಪೋಟಿಯಿಂದಾಗಿ ಎಲ್ಲ ದೇಶಗಳು ವಿವಿಧ ತರಹದ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ದರದಲ್ಲಿ ಗ್ರಾಹಕರಿಗೆ ಒದಗಿಸುತ್ತಿವೆ. ಆದರೆ ಈ ಉತ್ಪನ್ನಗಳು ಮೂಲ ಉಗಮ ಸ್ಥಾನದ ಗುಣಮಟ್ಟ ಹೊಂದಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಗುಣಮಟ್ಟದ ಉತ್ಪನ್ನಗಳನ್ನು ಗುರುತಿಸುವುದಕ್ಕಾಗಿ 2003ರಲ್ಲಿ ಜಿಐ ಟ್ಯಾಗ್ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ಇದರಲ್ಲಿ ನೋಂದಣಿಯಾದ ಉತ್ಪನ್ನವನ್ನು ಯಾವ ಪ್ರದೇಶದಲ್ಲಿ ಬೆಳೆಯಲಾಗುತ್ತದೆ ಎಂಬ ವಿವರದೊಂದಿಗೆ ಅದರ ಗುಣಮಟ್ಟವನ್ನು ಕೂಡ ನಮೂದಿಸಲಾಗುತ್ತದೆ.

ಇದುವರೆಗೆ ಭಾರತದಲ್ಲಿ 326ಕ್ಕೂ ಹೆಚ್ಚು ಉತ್ಪನ್ನಗಳಿಗೆ ಈ ಮಾನ್ಯತೆ ಸಿಕ್ಕಿದೆ. ಇದರಲ್ಲಿ 40ಕ್ಕೂ ಹೆಚ್ಚು ಉತ್ಪನ್ನಗಳು ಕರ್ನಾಟಕದ್ದು. ಈಗ ಈ ಮಾನ್ಯತೆಗೆ ಅಂಕೋಲಾ ಕರಿ ಇಷಾಡು ಮಾವಿನ ಹಣ್ಣು ಕೂಡ ಸೇರ್ಪಡೆಯಾಗಿದೆ.
ಜಿಐ ಮಾನ್ಯತೆ ಪ್ರಧಾನಿ ಕಚೇರಿಯಿಂದ ವಿವಿಧ ರಾಷ್ಟ್ರಗಳಿಗೆ ತಲುಪಲಿದೆ. ಆ ಮೂಲಕ ನಮ್ಮ ಕರಿ ಇಷಾಡು ಮಾವಿನ ಹಣ್ಣಿಗೆ ವಿಶ್ವಮಾನ್ಯತೆ ಸಿಗಲಿದೆ. ಇದು ಅಂಕೋಲಾ ಮಾವು ಬೆಳೆಗಾರರ ಮತ್ತು ನಾಗಿಕರ ಪಾಲಿಗೆ ಸಂತೋಷದ ಸಂಗತಿಯಾಗಿದೆ.
 
ತಾಲೂಕಿನ ಒಟ್ಟು 49 ಹಳ್ಳಿಗಳು, ಕಾರವಾರದ 3 ಹಳ್ಳಿ ಹಾಗೂ ಕುಮಟಾದ 12 ಹಳ್ಳಿಗಳಲ್ಲಿ ಕರಿ ಇಷಾಡು ಮಾವಿನ ಹಣ್ಣು ಬೆಳೆಯಲಾಗುತ್ತಿದೆ. ಇದರ ಜೊತೆಗೆ ಹಣ್ಣಿನ ಮಾರುಕಟ್ಟೆ ಆಧರಿಸಿ ಹಣ್ಣಿನ ವಿವಿಧ ಬಗೆಯ ಉತ್ಪನ್ನಗಳನ್ನು ಕ್ರೋಢೀಕರಿಸಿ ಇಲಾಖೆ ಸಂಪೂರ್ಣ ವರದಿ ಪಡೆದು ಜಿಐ ಮಾನ್ಯತೆ ನೀಡಲಾಗಿದೆ.

 ಮಾತಾ ತೋಟಗಾರ್ಸ್ ಫಾರ್ಮರ್ ಪ್ರೊಡ್ಯುಸರ್ ಕಂಪನಿ ಹೆಸರಿನಲ್ಲಿ ಅಂಕೋಲಾ ಕರಿ ಇಷಾಡು ಮಾವಿಗೆ 2022ರಲ್ಲಿ ಜಿಐ ಮಾನ್ಯತೆಗೆ ಅರ್ಜಿ ಸಲ್ಲಿಸಲಾಗಿತ್ತು. ಬಳಿಕ ಚೆನೈನಲ್ಲಿ ಮಾವಿನ ಹಣ್ಣು ಮತ್ತು ಅದರ ಉತ್ಪನ್ನಗಳ ಕುರಿತು ಪ್ರಾತ್ಯಕ್ಷಿಕೆ ನೀಡಿದ್ದೇವೆ. ಈಗ ಜಿಐ ಮಾನ್ಯತೆ ದೊರೆತಿರುವುದು ಸಂತೋಷವಾಗಿದೆ.
ಮಾದೇವ ಇಂದ್ರಗೌಡ, ಮಾತಾ ತೋಟಗಾರ್ಸ್ ಫಾರ್ಮರ್ ಪ್ರೊಡ್ಯುಸರ್ ಕಂಪನಿ ಮಾಲೀಕರು

ಪ್ರಮುಖ ಸುದ್ದಿ :-   ರಾಜ್ಯದಲ್ಲಿ ತಾಪಮಾನ ಏರಿಕೆ : ಮಾರ್ಗಸೂಚಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ

ಜಿಐ ಟ್ಯಾಗ್ ಬಗ್ಗೆ
ವಿಶ್ವ ವ್ಯಾಪಾರ ಸಂಸ್ಥೆ (ಡಬ್ಲ್ಯುಟಿಒ) ಪ್ರಕಾರ, ಜಿಯೋಗ್ರಾಫಿಕಲ್ ಇಂಡಿಕೇಶನ್ (ಜಿಐ) ಟ್ಯಾಗ್ ಅಥವಾ ಪ್ರಾದೇಶಿಕ ಸೂಚನಾ ಟ್ಯಾಗ್ ಒಂದು ಬೌದ್ಧಿಕ ಆಸ್ತಿಯ ಮಾದರಿಯಾಗಿದೆ. ಇದು ನಿರ್ದಿಷ್ಟ ಪ್ರದೇಶದಲ್ಲಿ ವಿಶಿಷ್ಟವಾಗಿರುವ ವಸ್ತು, ಉತ್ಪನ್ನಗಳಿಗೆ ನೀಡಲಾಗುವ ಪ್ರಮಾಣ ಪತ್ರವಾಗಿದೆ. ಈ ಜಿಐ ಟ್ಯಾಗ್ ವಸ್ತು ಅಥವಾ ಉತ್ಪನ್ನಗಳ ಗುಣಮಟ್ಟ ಹಾಗೂ ಅಗತ್ಯ ಗುಣಲಕ್ಷಣಗಳನ್ನು ಸೂಚಿಸುತ್ತದೆ. ಅಧಿಕೃತ ಬಳಕೆದಾರರಾಗಿ ನೋಂದಾಯಿಸಿರುವವರನ್ನು ಹೊರತುಪಡಿಸಿ, ಇತರರು ಅಂತಹ ಪ್ರಸಿದ್ಧ ಉತ್ಪನ್ನಗಳ ಹೆಸರನ್ನು ಬಳಸುವುದನ್ನು ನಿರ್ಬಂಧಿಸುತ್ತದೆ. ಕರ್ನಾಟಕದಲ್ಲಿ ಈ ರೀತಿಯ ಮಾನ್ಯತೆ ಪಡೆದಿರುವ 40ಕ್ಕೂ ಹೆಚ್ಚು ಉತ್ಪನ್ನಗಳಿವೆ. ಇದರ ಟ್ಯಾಗ್‌ ದೊರೆತ ನಂತರ ಇದು ವಿಶಿಷ್ಟ ಮಾದರಿಯಾಗಿ ವಿಶ್ವದಲ್ಲಿ ಗುರುತಿಸಲ್ಪಡುತ್ತದೆ.
ಆರ್ಥಿಕ ಬೆಳವಣಿಗೆ ಅನುಕೂಲ…
ಭೌಗೋಳಿಕ ಸೂಚನೆಗಳ ರಕ್ಷಣೆಯು ತಯಾರಕರು ಮತ್ತು ಉತ್ಪಾದಕರ ಒಟ್ಟಾರೆ ಆರ್ಥಿಕ ಸಮೃದ್ಧಿಗೆ ಕಾರಣವಾಗುತ್ತದೆ. ಇದಲ್ಲದೆ, GI ಟ್ಯಾಗ್‌ಗಳೊಂದಿಗೆ ಉತ್ಪನ್ನಗಳ ಮಾರ್ಕೆಟಿಂಗ್ ಮತ್ತು ಪ್ರಚಾರವು ಆ ನಿರ್ದಿಷ್ಟ ಪ್ರದೇಶದಲ್ಲಿ ದ್ವಿತೀಯ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸುತ್ತದೆ
ಭೌಗೋಳಿಕ ಸೂಚನೆಯನ್ನು ನೋಂದಾಯಿಸುವ ಪ್ರಮುಖ ಉದ್ದೇಶವು ನಿರ್ದಿಷ್ಟ ಭೌಗೋಳಿಕ ಪ್ರದೇಶದಲ್ಲಿ ಉತ್ಪತ್ತಿಯಾಗುವ ನಿರ್ದಿಷ್ಟ ಉತ್ಪನ್ನಗಳಿಗೆ ರಕ್ಷಣೆಯನ್ನು ಪಡೆಯುವುದು, ಇದು ಜಾಗತಿಕ ಮಟ್ಟದಲ್ಲಿ ತಮ್ಮ ವ್ಯಾಪಾರವನ್ನು ವಿಸ್ತರಿಸಲು ಮಾರಾಟಗಾರರನ್ನು ಮತ್ತಷ್ಟು ಪ್ರೋತ್ಸಾಹಿಸುವುದು ಮತ್ತು ಪ್ರೇರೇಪಿಸುವುದಾಗಿದೆ. ಇದಲ್ಲದೆ, ರಫ್ತುಗಳನ್ನು ಹೆಚ್ಚಿಸುತ್ತದೆ ಮತ್ತು ಉತ್ಪನ್ನ ಬೆಳೆಯುವವರು ಉತ್ತಮ ಆದಾಯವನ್ನು ಗಳಿಸಲು ಸಹಾಯ ಮಾಡುತ್ತದೆ.

ಪ್ರಮುಖ ಸುದ್ದಿ :-   ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್​ ಬ್ಲಾಸ್ಟ್​ ಪ್ರಕರಣ : ಪ್ರಮುಖ ಆರೋಪಿ ಬಂಧನ

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement