ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ 600ಕ್ಕೂ ಹೆಚ್ಚು ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಆಹ್ವಾನ

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಖಾಲಿ ಇರುವ ಜ್ಯೂನಿಯರ್ ಅಸಿಸ್ಟೆಂಟ್, ಎಸ್‌ಡಿಎ, ಅಸಿಸ್ಟೆಂಟ್ ಮತ್ತು ಇತರೆ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ವಿವರವಾದ ಅಧಿಸೂಚನೆ 15-4-2023ರಂದು ಪ್ರಕಟವಾಗಲಿದೆ. ಆನ್‌ಲೈನ್ ಮೂಲಕ 17-4-2023 ರಿಂದ 17-5-2023ರ ವರೆಗೆ ಅರ್ಜಿಗಳನ್ನು ಸಲ್ಲಿಕೆ ಮಾಡಬಹುದಾಗಿದೆ.
ಕರ್ನಾಟಕ ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ , ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ ಬೆಂಗಳೂರು ಮತ್ತು ಮೈಸೂರು ಸೇಲ್ಸ್ ಇಂಟರ್‌ ನ್ಯಾಷನಲ್ ಲಿಮಿಟೆಡ್ ಬೆಂಗಳೂರು ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
ಸರ್ಕಾರಿ ಇಲಾಖೆ/ ಸಂಸ್ಥೆಗಳಲ್ಲಿನ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಸಲ್ಲಿಕೆ ಮಾಡುವವರಿಗಾಗಿ ನೇಮಕಾತಿ ವಿಧಾನ, ಶೈಕ್ಷಣಿಕ ವಿದ್ಯಾರ್ಹತೆ, ಹುದ್ದೆಗಳ ವರ್ಗೀಕರಣ, ಸ್ಮರ್ಧಾತ್ಮಕ ಪರೀಕ್ಷೆ ವಿಧಾನ ಮತ್ತು ನೇಮಕಾತಿಗೆ ಸಂಬಂಧಿಸಿದ ಇತರ ಮಾಹಿತಿಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ.
ಈ ಹುದ್ದೆಗಳಿಗೆ ಕೇವಲ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗುವುದು ಮತ್ತು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅರ್ಹತೆ ಪಡೆಯುವುದು ಅಭ್ಯರ್ಥಿಗಳಿಗೆ ಈ ಮೇಲಿನ ವಿವಿಧ ಹುದ್ದೆಗಳ ನೇಮಕಾತಿಗೆ ಯಾವುದೇ ಹಕ್ಕನ್ನು ನೀಡುವುದಿಲ್ಲ, ನೇಮಕಾತಿಯು ಸರ್ಕಾರವು ನಿಗದಿಪಡಿಸಬಹುದಾದ ಅರ್ಹತಾ ಮಾನದಂಡಗಳಿಗೆ ಒಳಪಟ್ಟಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಆರಂಭ: 17-04-2023
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 17-05-2023
ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನಾಂಕ : 20-05-2023
ಹುದ್ದೆಗಳ ವಿವರ
ಕಲ್ಯಾಣ ಅಧಿಕಾರಿ-12
ಫೀಲ್ಡ್ ಇನ್ಸ್ಪೆಕ್ಟರ್-60
ಫಸ್ಟ್ ಡಿವಿಷನ್ ಅಸಿಸ್ಟೆಂಟ್ (ಎಫ್‌ಡಿಎ)-12
ಖಾಸಗಿ ಸಲಹೆಗಾರ-2
ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ)-100
ಅಸಿಸ್ಟೆಂಟ್ ಮ್ಯಾನೇಜರ್‌ಗಳು-33
ಗುಣಮಟ್ಟ ಪರೀಕ್ಷಕರು-23
ಸೀನಿಯರ್ ಅಸಿಸ್ಟೆಂಟ್ (ಅಕೌಂಟ್ಸ್)-33
ಸೀನಿಯರ್ ಅಸಿಸ್ಟೆಂಟ್-57
ಜೂನಿಯರ್ ಅಸಿಸ್ಟೆಂಟ್-263
ಜೂನಿಯರ್ ಪ್ರೋಗ್ರಾಮರ್ (ಗ್ರೂಪ್-ಬಿ)-10
ಅಸಿಸ್ಟೆಂಟ್ ಇಂಜಿನಿಯರ್ (ಸಿವಿಲ್)-(ಗ್ರೂಪ್-ಬಿ)-1
ಅಸಿಸ್ಟೆಂಟ್ ಲೈಬ್ರೇರಿಯನ್ (ಗ್ರೂಪ್-ಸಿ)-1
ಅಸಿಸ್ಟೆಂಟ್ (ಗ್ರೂಪ್-ಸಿ)- 27
ಯುನಿಯರ್ ಅಸಿಸ್ಟೆಂಟ್ (ಗ್ರೂಪ್-ಸಿ)-49
ಅಸಿಸ್ಟೆಂಟ್ ಮ್ಯಾನೇಜರ್ಸ್ (ಟೆಕ್ನಿಕಲ್) – ಗ್ರೂಪ್-ಬಿ-4
ಅಸಿಸ್ಟೆಂಟ್ ಮ್ಯಾನೇಜರ್ಸ್ (ನಾನ್ ಟೆಕ್ನಿಕಲ್)- ಗ್ರೂಪ್-ಬಿ-2
ಖಾಸಗಿ ಕಾರ್ಯದರ್ಶಿ – ಗ್ರೂಪ್-ಸಿ-1
ಮೇಲ್ವಿಚಾರಕ-23
ಪದವೀಧರ ಗುಮಾಸ್ತರು-6
ಗುಮಾಸ್ತರು-13
ಸೇಲ್ಸ್ ರೆಪ್ರೆಸೆಂಟೇಟಿವ್/ಪ್ರೋಗ್ರಾಮರ್-6

ಪ್ರಮುಖ ಸುದ್ದಿ :-   ಬೆಂಗಳೂರು: ಮದುವೆ ಮನೆಯಲ್ಲಿ ಲಿಕ್ವಿಡ್ ನೈಟ್ರೋಜನ್ ಪಾನ್‌ ತಿಂದ ಬಾಲಕಿಯ ಹೊಟ್ಟೆಯಲ್ಲಿ ರಂಧ್ರ...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement