ರಾಷ್ಟ್ರೀಯ ಪಕ್ಷದ ಸ್ಥಾಮಾನ ಪಡೆದ ಎಎಪಿ : ಎನ್‌ಸಿಪಿ, ಸಿಪಿಐ, ಟಿಎಂಸಿಗೆ ಹಿನ್ನಡೆ

ನವದೆಹಲಿ: ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ ಚುನಾವಣಾ ಆಯೋಗ ಸೋಮವಾರ ರಾಷ್ಟ್ರೀಯ ಪಕ್ಷದ ಸ್ಥಾನಮಾನ ನೀಡಿದೆ.
ಶರದ್ ಪವಾರ್ ಅವರ ಶರದ್‌ ಪವಾರ್‌ ಎನ್‌ಸಿಪಿ, ಸಿಪಿಐ ಮತ್ತು ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ರಾಷ್ಟ್ರೀಯ ಪಕ್ಷಗಳ ಸ್ಥಾನಮಾನ ಕಳೆದುಕೊಂಡಿದೆ. ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಪಕ್ಷದ ಸ್ಥಾನಮಾನಕ್ಕೆ ಸಂಬಂಧಿಸಿದಂತೆ ಏಪ್ರಿಲ್ 13 ರ ಮೊದಲು ಆದೇಶವನ್ನು ಹೊರಡಿಸುವಂತೆ ಕರ್ನಾಟಕ ಹೈಕೋರ್ಟ್ ಕಳೆದ ವಾರ ಮುಖ್ಯ ಚುನಾವಣಾ ಆಯುಕ್ತ ರಾಜೀವಕುಮಾರ ಅವರಿಗೆ ನಿರ್ದೇಶನಗಳನ್ನು ನೀಡಿದ ನಂತರ ಈ ಬೆಳವಣಿಗೆಯಾಗಿದೆ.
ಮುಂಬರುವ ಕರ್ನಾಟಕ ಚುನಾವಣೆ ಎಎಪಿಯ ರಾಷ್ಟ್ರೀಯ ಪಕ್ಷ”ದ ಸ್ಥಾನಮಾನ ಪಡೆದ ನಂತ ಮೊದಲ ಚುನಾವಣೆಯಾಗಲಿದೆ. 224 ಸದಸ್ಯ ಬಲದ ಕರ್ನಾಟಕ ವಿಧಾನಸಭೆಗೆ ಮೇ 10 ರಂದು ಮತದಾನ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

ಒಂದು ರಾಷ್ಟ್ರೀಯ ಪಕ್ಷವು ಕನಿಷ್ಠ ಮೂರು ರಾಜ್ಯಗಳಲ್ಲಿ ಎರಡು ಶೇಕಡಾ ಲೋಕಸಭಾ ಸ್ಥಾನಗಳನ್ನು ಹೊಂದಿರಬೇಕು. ಅಂದರೆ 11 ಸ್ಥಾನಗಳನ್ನು ಹೊಂದಿರಬೇಕು.
ಇನ್ನೊಂದು ಮಾನದಂಡವೆಂದರೆ ಪಕ್ಷವು ನಾಲ್ಕು ರಾಜ್ಯಗಳಲ್ಲಿ ರಾಜ್ಯ ಪಕ್ಷದ ಮಾನ್ಯತೆಯನ್ನು ಹೊಂದಿರಬೇಕು. ರಾಜ್ಯ ಪಕ್ಷದ ಮಾನ್ಯತೆಗಾಗಿ, ಒಂದು ಪಕ್ಷಕ್ಕೆ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಆರು ಶೇಕಡಾ ಮತಗಳು/ಎರಡು ಸ್ಥಾನಗಳು ಅಥವಾ ಅದರ ಮತ ಹಂಚಿಕೆ ಶೇಕಡಾ ಆರಕ್ಕಿಂತ ಕಡಿಮೆಯಿದ್ದರೆ ಮೂರು ಸ್ಥಾನಗಳ ಅಗತ್ಯವಿದೆ.
ದೆಹಲಿ ಮತ್ತು ಪಂಜಾಬ್‌ನಲ್ಲಿ ಎಎಪಿ ಸರ್ಕಾರವನ್ನು ಹೊಂದಿದೆ. ಗೋವಾದಲ್ಲಿ, ಪಕ್ಷವು ಆರು ಶೇಕಡಾ ಮತಗಳು/ಎರಡು ಸ್ಥಾನಗಳ ಮಾನದಂಡವನ್ನು ಪೂರೈಸಿದೆ. ಕಳೆದ ವರ್ಷ ಗುಜರಾತ್ ಚುನಾವಣೆಯಲ್ಲಿ ಸುಮಾರು 13 ಪ್ರತಿಶತದಷ್ಟು ಮತಗಳನ್ನು ಗಳಿಸಿದ ನಂತರ ಎಎಪಿ ‘ರಾಷ್ಟ್ರೀಯ ಪಕ್ಷದ’ ಸ್ಥಾನಮಾನಕ್ಕೆ ಅರ್ಹವಾಗಿದೆ. ಎಎಪಿ ತನ್ನ ಗುಜರಾತ್ ವಿಧಾನಸಭಾ ಚುನಾವಣೆಯ ಮೊದಲ ಪ್ರಯತ್ನದಲ್ಲಿ ಐದು ಸ್ಥಾನಗಳನ್ನು ಗೆದ್ದಿದೆ.

ಪ್ರಮುಖ ಸುದ್ದಿ :-   ನಟಿ ಸಿದ್ಧಾರ್ಥ- ನಟಿ ಅದಿತಿ ರಾವ್ ಮದುವೆ ಆಗಿಲ್ಲ : ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ; ಸ್ಪಷ್ಟನೆ ನೀಡಿದ ಅದಿತಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement