ಎನ್‌ಸಿಪಿ, ಟಿಎಂಸಿ, ಸಿಪಿಐ ಪಕ್ಷಗಳು ರಾಷ್ಟ್ರೀಯ ಪಕ್ಷದ ಸ್ಥಾನಮಾನ ಕಳೆದುಕೊಂಡಿದ್ದು ಯಾಕೆ..?

ನವದೆಹಲಿ: ಚುನಾವಣಾ ಆಯೋಗವು ಆಮ್ ಆದ್ಮಿ ಪಕ್ಷವನ್ನು (ಎಎಪಿ) ರಾಷ್ಟ್ರೀಯ ಪಕ್ಷವೆಂದು ಗುರುತಿಸಿದೆ ಮತ್ತು ಅಖಿಲ ಭಾರತ ತೃಣಮೂಲ ಕಾಂಗ್ರೆಸ್, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ಹಿಂಪಡೆದಿದೆ.
ಉತ್ತರ ಪ್ರದೇಶದಲ್ಲಿ ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ), ಆಂಧ್ರಪ್ರದೇಶದಲ್ಲಿ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್), ಮಣಿಪುರದಲ್ಲಿ ಪೀಪಲ್ಸ್ ಡೆಮಾಕ್ರಟಿಕ್ ಅಲಯನ್ಸ್, ಪುದುಚೇರಿಯ ಪಟ್ಟಾಲಿ ಮಕ್ಕಳ್ ಕಚ್ಚಿ, ಪಶ್ಚಿಮ ಬಂಗಾಳದಲ್ಲಿ ಕ್ರಾಂತಿಕಾರಿ ಸಮಾಜವಾದಿ ಪಕ್ಷ ಮತ್ತು ಮಿಜೋರಾಂನಲ್ಲಿ ಮಿಜೋರಾಂನಲ್ಲಿ ಪೀಪಲ್ಸ್ ಕಾನ್ಫರೆನ್ಸ್ ರಾಜ್ಯ ಪಕ್ಷದ ಸ್ಥಾನಮಾನವನ್ನು ಚುನಾವಣಾ ಆಯೋಗ ರದ್ದುಪಡಿಸಿದೆ.
ತೃಣಮೂಲ, ಎನ್‌ಸಿಪಿ ಮತ್ತು ಸಿಪಿಐ ಇನ್ನು ಮುಂದೆ “ರಾಷ್ಟ್ರೀಯ ಪಕ್ಷ” ಎಂಬ ವ್ಯಾಖ್ಯಾನದ ಅಡಿಯಲ್ಲಿ ಬರುವುದಿಲ್ಲ.
ಚುನಾವಣಾ ಆಯೋಗದ ಪ್ರಕಾರ, ಒಂದು ಪಕ್ಷವನ್ನು “ರಾಷ್ಟ್ರೀಯ ಪಕ್ಷ” ಎಂದು ಕರೆಯಬೇಕಾದರೆ ಮೂರು ಷರತ್ತುಗಳನ್ನು ಪೂರೈಸಬೇಕಾಗುತ್ತದೆ.
1. ಕನಿಷ್ಠ ನಾಲ್ಕು ರಾಜ್ಯಗಳಲ್ಲಿ ಪಕ್ಷದ ಅಭ್ಯರ್ಥಿಗಳು ಕಳೆದ ರಾಷ್ಟ್ರೀಯ ಚುನಾವಣೆಯಲ್ಲಿ ಆ ರಾಜ್ಯಗಳಲ್ಲಿ ಪಡೆದ ಒಟ್ಟು ಮತಗಳ ಕನಿಷ್ಠ ಶೇಕಡಾ 6 ರಷ್ಟು ಮತಗಳನ್ನು ಪಡೆಯಬೇಕು. ಇದರ ಜೊತೆಗೆ ಲೋಕಸಭೆಯಲ್ಲಿ ನಾಲ್ಕು ಸ್ಥಾನಗಳನ್ನು ಗೆಲ್ಲಬೇಕು.
2. ಲೋಕಸಭೆಯಲ್ಲಿ ಪಕ್ಷವು ಒಟ್ಟು ಸ್ಥಾನಗಳಲ್ಲಿ ಕನಿಷ್ಠ 2 ಪ್ರತಿಶತ ಮತ ಪಡೆಯಬೇಕು. ಪಕ್ಷದ ಅಭ್ಯರ್ಥಿಗಳು ಕನಿಷ್ಠ ಮೂರು ರಾಜ್ಯಗಳಿಂದ ಚುನಾಯಿತರಾಗಿರಬೇಕು.
3. ಕನಿಷ್ಠ ನಾಲ್ಕು ರಾಜ್ಯಗಳಲ್ಲಿ ಪಕ್ಷವನ್ನು “ರಾಜ್ಯ ಪಕ್ಷ” ಎಂದು ಗುರುತಿಸಬೇಕು.

ಪ್ರಮುಖ ಸುದ್ದಿ :-   ಈ ಹಳ್ಳಿಯಲ್ಲಿರುವ ಮತದಾನ ಕೇಂದ್ರದ ಒಬ್ಬರೇ ಒಬ್ಬರು ಮತದಾರರಿಗಾಗಿ 40 ಕಿಮೀ ನಡೆದುಕೊಂಡು ಹೋದ ಚುನಾವಣಾ ಸಿಬ್ಬಂದಿ...!

ಈ ಹಿಂದೆ ತೃಣಮೂಲ, ಬಹುಜನ ಸಮಾಜ ಪಕ್ಷ, ಬಿಜೆಪಿ, ಸಿಪಿಐ, ಸಿಪಿಐ (ಮಾರ್ಕ್ಸ್‌ವಾದಿ), ಕಾಂಗ್ರೆಸ್ ಮತ್ತು ಎನ್‌ಸಿಪಿ ಹೀಗೆ ಏಳು ರಾಷ್ಟ್ರೀಯ ಪಕ್ಷಗಳಿದ್ದವು.
ಇದೀಗ, ಎನ್‌ಸಿಪಿ, ತೃಣಮೂಲ ಮತ್ತು ಸಿಪಿಐ ರಾಷ್ಟ್ರೀಯ ಪಕ್ಷಗಳ ಮಾನ್ಯತೆಯನ್ನು ಚುನಾವಣಾ ಆಯೋಗವು ಹಿಂಪಡೆದ ನಂತರ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಎಎಪಿ ಪಕ್ಷವು ರಾಷ್ಟ್ರೀಯ ಮಾನ್ಯತೆ ಪಡೆದ ಪಕ್ಷಗಳ ಪಟ್ಟಿಗೆ ಸೇರ್ಪಡೆಗೊಂಡ ನಂತರ ದೇಶವು ಐದು ರಾಷ್ಟ್ರೀಯ ಪಕ್ಷಗಳನ್ನು ಹೊಂದಿದೆ.
ತೃಣಮೂಲ 2016 ರಲ್ಲಿ “ರಾಷ್ಟ್ರೀಯ ಪಕ್ಷ” ಟ್ಯಾಗ್ ಅನ್ನು ಪಡೆದುಕೊಂಡಿತ್ತು, ಆದರೆ ಗೋವಾ ಮತ್ತು ಕೆಲವು ಈಶಾನ್ಯ ರಾಜ್ಯಗಳಲ್ಲಿ ಅದರ ಕಳಪೆ ಪ್ರದರ್ಶನವು ಸ್ಥಾನಮಾನವನ್ನು ಹಿಂಪಡೆಯಲು ಕಾರಣವಾಯಿತು.
ಎನ್‌ಸಿಪಿ (NCP) 1999 ರಲ್ಲಿ ಶರದ್ ಪವಾರ್ ಅವರಿಂದ ಸ್ಥಾಪಿಸಲ್ಪಟ್ಟಿತು ಮತ್ತು ಹಲವಾರು ಚುನಾವಣೆಗಳಲ್ಲಿ ಸರಣಿ ಗೆಲುವಿನ ನಂತರ 2000ರಲ್ಲಿ ರಾಷ್ಟ್ರೀಯ ಪಕ್ಷದ ಸ್ಥಾನಮಾನ ಪಡೆದಿತ್ತು.
1925 ರಲ್ಲಿ ಸ್ಥಾಪನೆಯಾದ ಸಿಪಿಐ (CPI) 1989 ರಲ್ಲಿ ರಾಷ್ಟ್ರೀಯ ಪಕ್ಷವಾಗಿ ಗುರುತಿಸಲ್ಪಟ್ಟಿತು, ಆದರೆ ಪಶ್ಚಿಮ ಬಂಗಾಳ ಮತ್ತು ಒಡಿಶಾ ಚುನಾವಣೆಗಳಲ್ಲಿ ಅದರ ಕಳಪೆ ಪ್ರದರ್ಶನದ ನಂತರ ಅದರ ಆ ಟ್ಯಾಗ್ ಅನ್ನು ಹಿಂತೆಗೆದುಕೊಳ್ಳಲಾಯಿತು.

ಪ್ರಮುಖ ಸುದ್ದಿ :-   ದೆಹಲಿ ವಕ್ಫ್ ಬೋರ್ಡ್ ಹಗರಣ : 9 ತಾಸುಗಳ ವಿಚಾರಣೆಯ ನಂತರ ಎಎಪಿ ನಾಯಕ ಅಮಾನತುಲ್ಲಾ ಖಾನ್ ಬಂಧಿಸಿದ ಇ.ಡಿ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement