ಆಘಾತಕಾರಿ ..: ಸತ್ತ ನಂತರಮಹಿಳೆ ಶವವನ್ನು ಕಾರಿನಲ್ಲಿ ಒಯ್ದು ನಕಲಿ ಉಯಿಲಿಗೆ ಹೆಬ್ಬೆಟ್ಟು ಒತ್ತಿಸಿಕೊಂಡ ಸಂಬಂಧಿಕರು | ವೀಕ್ಷಿಸಿ

ನವದೆಹಲಿ: ಮೃತ ಮಹಿಳೆಯ ಹೆಬ್ಬೆರಳಿನ ಗುರುತನ್ನು ಆಕೆಯ ಸಂಬಂಧಿಕರು ತೆಗೆದುಕೊಂಡಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿರುವುದು ತಡವಾಗಿ ವರದಿಯಾಗಿದೆ. ಈ ಆಘಾತಕಾರಿ ಕೃತ್ಯದ ವಿಡಿಯೋ ವೈರಲ್ ಆಗಿದೆ.
ಈ ಘಟನೆಯ ವೀಡಿಯೊ 2021ರದ್ದು ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆಯ ಮೊಮ್ಮಗ ಜಿತೇಂದ್ರ ಶರ್ಮಾ ಅವರು ಪೊಲೀಸರಿಗೆ ದೂರು ನೀಡಿದ್ದು, ಅಪರಾಧ ಎಸಗುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಅವರ ತಾಯಿಯ ಚಿಕ್ಕಮ್ಮ ಆಗಿದ್ದ ಕಮಲಾ ದೇವಿ ಅವರು ಮೇ 8, 2021 ರಂದು ನಿಧನರಾದರು. ಅವರ ಪತಿ ಮೊದಲೇ ನಿಧನರಾಗಿದ್ದರು ಮತ್ತು ದಂಪತಿಗೆ ಮಕ್ಕಳಿರಲಿಲ್ಲ.
ಜಿತೇಂದ್ರ ಶರ್ಮಾ ಅವರ ಪ್ರಕಾರ, ವಯಸ್ಸಾದ ಮಹಿಳೆ ಮೃತಪಟ್ಟ ನಂತರ, ಆಕೆಯ ಸೋದರಳಿಯ, ಪುತ್ರರು ಆಕೆಯ ದೇಹವನ್ನು ಆಗ್ರಾ ಆಸ್ಪತ್ರೆಗೆ ಕೊಂಡೊಯ್ಯುವುದಾಗಿ ಹೇಳಿಕೊಂಡು ತೆಗೆದುಕೊಂಡು ಹೋದರು. ಸ್ವಲ್ಪ ಮುಂದೆ, ಅವರು ಕಾರನ್ನು ನಿಲ್ಲಿಸಿದರು ಮತ್ತು “ನಕಲಿ ಉಯಿಲಿ”ನಲ್ಲಿ ಆಕೆಯ ಹೆಬ್ಬೆರಳಿನ ಗುರುತನ್ನು ತೆಗೆದುಕೊಳ್ಳಲು ವಕೀಲರನ್ನು ಕರೆಸಿಕೊಂಡರು.
ನಕಲಿ ದಾಖಲೆ ಆಧಾರದಲ್ಲಿ ಅವರು ಮನೆ, ಅಂಗಡಿ ಸೇರಿದಂತೆ ಮಹಿಳೆಯ ಆಸ್ತಿಗಳನ್ನು ಕಬಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಪ್ರಮುಖ ಸುದ್ದಿ :-   127 ವರ್ಷಗಳಷ್ಟು ಹಳೆಯ ಗೋದ್ರೇಜ್ ಗ್ರುಪ್‌ ಇಬ್ಭಾಗ

ಕಮಲಾ ದೇವಿ ಹೆಬ್ಬೆಟ್ಟು ಹಾಕುವವರು ಅಲ್ಲ, ಅವರು ಸಹಿ ಹಾಕುತ್ತಿದ್ದುದರಿಂದ ಕುಟುಂಬದವರು ಅವರ ಹೆಬ್ಬೆಟ್ಟು ಹಾಕಿದ್ದರ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ ಎಂದು ಶರ್ಮಾ ಹೇಳಿದ್ದಾರೆ.
ವಕೀಲರೊಬ್ಬರು ಮಹಿಳೆಯ ಹೆಬ್ಬೆರಳನ್ನು ಸ್ಟಾಂಪ್ ಪ್ಯಾಡ್‌ನಲ್ಲಿ ಒತ್ತಿ ನಂತರ ಹಲವಾರು ಪುಟಗಳಲ್ಲಿ ಹೆಬ್ಬೆರಳಿನ ಗುರುತನ್ನು ಪಡೆದಿರುವಂತೆ ತೋರುತ್ತದೆ ಎಂದು ಅವರು ಅನುಮಾನಿಸಿದ್ದರು. ಇತ್ತೀಚೆಗೆ ಹೊರಬಂದ 45 ಸೆಕೆಂಡುಗಳ ವೀಡಿಯೊವು ಕಾರಿನ ಹಿಂದಿನ ಸೀಟಿನಲ್ಲಿ ಶವವನ್ನು ನೋಡಿದಾಗ ಅವರ ಅನುಮಾನಗಳು ದೃಢಪಟ್ಟಿವೆ. ತನಿಖೆಗೆ ಆದೇಶಿಸಲಾಗಿದೆ ಎಂದು ಆಗ್ರಾ ಪೊಲೀಸರು ತಿಳಿಸಿದ್ದಾರೆ.

ವೀಡಿಯೊದಲ್ಲಿ ಕಂಡವರ ವರ್ತನೆ ಬಗ್ಗೆ ಅನೇಕ ಬಳಕೆದಾರರು ಆಘಾತ ವ್ಯಕ್ತಪಡಿಸಿದ್ದಾರೆ. “ಇದು ಅತ್ಯಂತ ಕೆಳಮಟ್ಟದ ಅಮಾನವೀಯ ವರ್ತನೆಯಾಗಿದೆ. ಅಂತಹ ಜನರನ್ನು ಸಾಮಾಜಿಕ ಬಹಿಷ್ಕಾರಕ್ಕೆ ಒಳಪಡಿಸಬೇಕು ಎಂದು ಬಳಕೆದಾರರು ಹೇಳಿದರು.
ವಕೀಲರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಲವರು ಒತ್ತಾಯಿಸಿದ್ದು, ಅವರ ಪರವಾನಗಿ ರದ್ದುಪಡಿಸಬೇಕು ಎಂದು ಸಲಹೆ ನೀಡಿದ್ದಾರೆ.

ಪ್ರಮುಖ ಸುದ್ದಿ :-   ಏಪ್ರಿಲ್‌ ತಿಂಗಳಲ್ಲಿ ದಾಖಲೆಯ ಪ್ರಮಾಣದ ಜಿಎಸ್‌ಟಿ ಸಂಗ್ರಹ ; ಕರ್ನಾಟಕಕ್ಕೆ 2ನೇ ಸ್ಥಾನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement